ರಕ್ಷಿತಾ ಶೆಟ್ಟಿ S ಕ್ಯಾಟಗರಿ ಎಂದರೇನು?; ಕೊನೆಗೂ ಸ್ಪಷ್ಟನೆ ಕೊಟ್ಟ Ashwini Gowda!

Published : Jan 19, 2026, 02:57 PM IST

Bigg Boss Kannada Season 12 Ashwini Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮಧ್ಯೆ ಜಗಳ ಆಗಿತ್ತು. ಆ ವೇಳೆ ಅಶ್ವಿನಿ ಗೌಡ ಅವರು ರಕ್ಷಿತಾ ಎಸ್‌ ಕ್ಯಾಟಗರಿಗೆ ಸೇರಿದವಳು ಎಂದು ಹೇಳಿದ್ದರು. ಎಸ್‌ ಕ್ಯಾಟಗರಿ ಅಂದರೆ ಏನು ಎಂದು ಅವರು ಮಾತನಾಡಿದ್ದಾರೆ. 

PREV
15
ಪದಬಳಕೆ ಬಗ್ಗೆ ಗೊತ್ತಿದೆ

“ನಾನು ಸಾಮಾಜಿಕ ಹೋರಾಟಗಾತಿ, ಕನ್ನಡ ಹೋರಾಟಗಾರ್ತಿ. ನನಗೆ 20 ವರ್ಷದ ಜರ್ನಿ ಇದೆ. ಜಾತಿ ಅಥವಾ ಇನ್ಯಾವುದೋ ವಿಚಾರದಲ್ಲಿ ಯಾವ ಪದ ಬಳಸಿದರೆ, ಏನಾಗುತ್ತದೆ ಎಂದು ಗೊತ್ತಿದೆ. ಅಷ್ಟು ಪ್ರಜ್ಞೆ ಇಲ್ಲದಿರೋ ವ್ಯಕ್ತಿ ನಾನಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

25
S ಕ್ಯಾಟಗರಿ ಎಂದರೇನು?

“S ಅಂದರೆ ಶೌಟಿಂಗ್‌ ಎಂದರ್ಥ, ಕೂಗಾಡ್ತಾರೆ, ಕಿರುಚಾಡಿ ಸ್ಕೋಪ್‌ ತಗೊಳ್ತಾರೆ ಎನ್ನುವವರಿಗೆ ಶೌಟಿಂಗ್‌ ಕ್ಯಾಟಗರಿ ಎಂದು ಹೇಳುತ್ತಾರೆ. ರಕ್ಷಿತಾ ಶೆಟ್ಟಿ ಕೂಗಾಡುತ್ತಾರೆ, ಆ ವ್ಯಕ್ತಿ ನಾನಲ್ಲ. ಎಸ್‌ ಕ್ಯಾಟಗರಿ ಬಗ್ಗೆ ಜನರು ಈಗ ಮಾತನಾಡಿರೋದು ನೋಡಿ, ಸಿಲ್ಲಿ ಅನಿಸಿತು. ಈಗ ನನಗೆ ರಕ್ಷಿತಾ ಶೆಟ್ಟಿ ನೇರವಾಗಿ ಗೊತ್ತಿದೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

35
ಕಪ್‌ ಗೆದ್ದಷ್ಟೇ ಖುಷಿ

“ಮನುಷ್ಯನಿಗೆ ತೃಪ್ತಿ ಅನ್ನೋದು ಇಲ್ಲ, ನಾನು ವಿನ್‌ ಆದರೂ ಕೂಡ ತೃಪ್ತಿ ಇರೋದಿಲ್ಲ. ವಿನ್‌ ಆಗಬೇಕು ಎನ್ನೋದಿತ್ತು. ಈಗ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳೋಣ. ಎಲ್ಲರನ್ನು ಎದುರಿ ಹಾಕಿಕೊಂಡು ಒಂಟಿಯಾಗಿ ಬದುಕೋದು ಸುಲಭ ಇಲ್ಲ. ಇಲ್ಲಿಯವರೆಗೆ ಬಂದಿದೀನಿ ಅಂದರೆ ನಾನು ಕಪ್‌ ಗೆದ್ದಷ್ಟೇ ಖುಷಿ” ಎಂದಿದ್ದಾರೆ.

45
ಮತ ಕೇಳಿದ್ದರಲ್ಲಿ ತಪ್ಪಿಲ್ಲ

ಅಶ್ವಿನಿ ಗೌಡ ಪರವಾಗಿ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರು ಬೆಂಬಲ ಸೂಚಿಸಿದ್ದರು. ಆದರೆ ಈ ಹಿಂದೆ ರೂಪೇಶ್‌ ರಾಜಣ್ಣ ಭಾಗಿಯಾದಾಗ ಯಾಕೆ ಯಾರು ಸಹಾಯ ಮಾಡಲಿಲ್ಲ. “ಈಗ ಬಿಗ್‌ ಬಾಸ್‌ ಮನೆಯಲ್ಲಿ ಇದ್ದವರು ಎಲ್ಲರೂ ಕನ್ನಡಿಗರೇ, ನಾನು ಕನ್ನಡ ಹೋರಾಟಗಾರ್ತಿ. ನಾನು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆ, ನನ್ನ ಕುಟುಂಬದವರು ವೋಟ್‌ ಹಾಕಿ ಎಂದು ಕೇಳಿದ್ದರಲ್ಲಿ ಯಾವುದು ತಪ್ಪಿಲ್ಲ, ಆದರೆ ಬೇರೆಯವರನ್ನು ಕೆಳಗಿಡಿ ಎಂದು ಹೇಳಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

55
ಅಶ್ವಿನಿ ಗೌಡ ಥರ ಇರಬೇಕು

“ನಾನು ಕೊನೆಯಲ್ಲಿ ರಕ್ಷಿತಾ ಶೆಟ್ಟಿ ಜೊತೆ ಕ್ಲೋಸ್‌ ಆಗಿದ್ದೆ. ರಕ್ಷಿತಾ ಶೆಟ್ಟಿ ಒಂಥರ ಜ್ಯೂನಿಯರ್‌ ಅಶ್ವಿನಿ ಥರ. ಆರಂಭದಲ್ಲಿ ಹೇಗಿರುತ್ತದೆಯೋ ಹಾಗೆ ಆಮೇಲೆ ಇರೋದಿಲ್ಲ. “ನಾನು ಟಾಪ್‌ 1 ರಲ್ಲಿ ಬರ್ತೀನಿ ಎಂದು ಅನೇಕರು ಅಂದುಕೊಂಡಿದ್ದರು. ಹೆಣ್ಣು ಮಕ್ಕಳು ಬಿಗ್‌ ಬಾಸ್‌ ಶೋಗೆ ಹೋಗಬಾರದು, ಕಪ್‌ ಕೊಡಲ್ಲ, ಇನ್ನು ಯಾರೇ ಬಿಗ್‌ ಬಾಸ್‌ ಮನೆಗೆ ಬಂದರೂ ಕೂಡ ಅಶ್ವಿನಿ ಗೌಡ ಥರ ಇರಬೇಕು ಎಂದು ಕಾಮೆಂಟ್‌ ಮಾಡಿದ್ದರು. ಅದೆಲ್ಲ ನೋಡಿ ಖುಷಿ ಆಯ್ತು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories