Bigg Boss ನಾಯಿ ಸತೀಶ್​, ಇನ್ಮುಂದೆ ತೋಳ ಸತೀಶ್​- ಹೊಸ ಅವತಾರದ ಬಗ್ಗೆ ಹೇಳಿದ್ದೇನು

Published : May 30, 2026, 01:42 PM IST

ಬಿಗ್​ಬಾಸ್​ ಖ್ಯಾತಿಯ ಡಾಗ್​ ಸತೀಶ್​ ತಮ್ಮ ಮುಂಬರುವ ಚಿತ್ರಕ್ಕಾಗಿ ಹೊಸ ಹೇರ್​ಸ್ಟೈಲ್​ ಮಾಡಿಸಿಕೊಂಡು 'ತೋಳ ಸತೀಶ್' ಆಗಿದ್ದಾರೆ. ತಾವೇ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದು, ಈ ಹಿಂದೆ 100 ಕೋಟಿ ನಾಯಿ, ಜೈಲಿನಲ್ಲಿ ರಾಜಾತಿಥ್ಯದಂತಹ ಹೇಳಿಕೆಗಳಿಂದ ಸುದ್ದಿಯಾಗಿದ್ದರು.

PREV
16
ಬಿಗ್​ಬಾಸ್​ ಖ್ಯಾತಿಯ ಡಾಗ್​ ಸತೀಶ್​

ಬಿಗ್​ಬಾಸ್​ ಖ್ಯಾತಿಯ ಡಾಗ್​ ಸತೀಶ್​ (Dog Satish) ಸೋಷಿಯಲ್​​ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಲೇ ಇರುವವರು. ಬಾಯಿ ಬಿಟ್ಟರೆ ಕೋಟಿ ಕೋಟಿ ಮಾತನಾಡುವ ಡಾಗ್​ ಸತೀಶ್​ ಅವರ ಬಗ್ಗೆ ಇನ್ನಿಲ್ಲದ ಟ್ರೋಲ್​ಗಳು ಬರುತ್ತಿದ್ದರೂ ಯಾವುದಕ್ಕೂ ಅವರು ಡೋಂಟ್​ ಕೇರ್​.

26
ಕಿಚ್ಚ ಸುದೀಪ್​ ಮೀರಿಸ್ತೀನಿ

ಕಿಚ್ಚ ಸುದೀಪ್​ ಅವರನ್ನೇ ಮೀರಿಸೋ ತಾಕತ್ತು ನನಗಿದೆ, ಬಿಗ್​ಬಾಸ್​ ಅನ್ನು ವಿಶ್ವಮಟ್ಟಕ್ಕೆ ಒಯ್ಯುವ ತಾಕತ್ತೂ ಇದೆ. ನನ್ನ ಹಿಂದೆ ಮುಂದೆ ಈಗಲೂ ಹುಡುಗಿಯರ ದಂಡು ಬರುತ್ತದೆ, ನೂರಾರು ಮಾಧ್ಯಮಗಳು ನನ್ನ ಪಾಕೆಟ್​ನಲ್ಲಿ ಇವೆ, ಸಿಎಂ, ಡಿಸಿಎಂಗೂ ನೀಡದ ಸೌಲಭ್ಯ ನನಗೆ ಕೊಡ್ತಾರೆ, ಜೈಲಿನಲ್ಲಿ ದರ್ಶನ್​ಗೂ ಸಿಗದ ರಾಜಾತಿಥ್ಯ ನನಗೆ ಸಿಕ್ಕಿದೆ ಎಂದೆಲ್ಲಾ ಹೇಳಿರುವ ನಾಯಿ ಸತೀಶ್​ ಅವರು ಈಗ ತೋಳ ಸತೀಶ್​ ಆಗಿದ್ದಾರೆ.

36
ತೋಳ ಸತೀಶ್​

ಹೌದು. ಡಾಗ್​ ಸತೀಶ್​ ಈಗ ವೂಲ್ಫ್​ ಸತೀಶ್​ ಆಗಿದ್ದು, ತಮ್ಮ ಹೇರ್​ಸ್ಟೈಲ್​ ತೋಳದಂತೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ತಮ್ಮ ಮುಂಬರುವ ಚಿತ್ರ ಎಂದು ಅವರು ಹೇಳಿದ್ದಾರೆ. ತಮ್ಮ ಮಗನನ್ನು ದೇಶದ ನಂಬರ್​ 2 ಹೀರೋ ಮಾಡುವುದಾಗಿ ಇಲ್ಲಿಯವರೆಗೆ ಹೇಳ್ತಿದ್ದ ಡಾಗ್​ ಸತೀಶ್​, ಇದೀಗ ತಾವೇ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ವೂಲ್ಫ್​ ನಾಯಿ ತಗೊಂಡಿದ್ದೆ. ಅದಕ್ಕಾಗಿ ವೂಲ್ಫ್​ ಕಟ್​ ಮಾಡಿಸಿಕೊಂಡಿದ್ದೇನೆ ಎಂದಿದ್ದಾರೆ. namma.sandalwood ಇನ್​ಸ್ಟಾಗ್ರಾಮ್​  ಪುಟದಲ್ಲಿ ಇದನ್ನು ಶೇರ್​ ಮಾಡಲಾಗಿದೆ.

46
ಸಿನಿಮಾ ಮಾಡುವ ತವಕ

ಬಿಗ್​ಬಾಸ್​ ಅನ್ನು ಮೀರಿಸೋ ರಿಯಾಲಿಟಿ ಷೋ ಮಾಡ್ತೇನೆ ಎಂದಿದ್ದ ಸತೀಶ್​ ಅವರು ಈಗ ತಾವೇ ಸಿನಿಮಾ ಮಾಡುತ್ತಿದ್ದು ಅದರಲ್ಲಿ ತಮ್ಮ ಮಗನನ್ನೋ ಅಥವಾ ಖುದ್ದು ತಾವೇ ಹೀರೋ ಆಗುವ ತವಕದಲ್ಲಿದ್ದಾರೆ. ತಮ್ಮ ಹೊಸ ಸಿನಿಮಾಕ್ಕೆ ಹೊಸ ಹೇರ್​ಸ್ಟೈಲ್​ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

56
100 ಕೋಟಿ ನಾಯಿ ಬರ್ತ್​ಡೇ

ತಮ್ಮಲ್ಲಿ 100 ಕೋಟಿಯ ನಾಯಿ ಇದೆ ಎಂದು ಹೇಳಿಕೊಳ್ಳುತ್ತಿರುವ ಡಾಗ್​ ಸತೀಶ್​, ಕೆಲ ದಿನಗಳ ಹಿಂದೆ, ಅದರ ಹುಟ್ಟುಹಬ್ಬ ಆಚಚರಿಸಿದ್ದರು. ಅಂದು ವೃದ್ಧಾಶ್ರಮದವರಿಗೆ ಊಟ ಹಾಕಿ ಪ್ರಶಂಸೆ ಗಳಿಸಿದ್ದರು.

66
ನಾಯಿಯಿಂದ ಕೇಸ್​​

ಅಷ್ಟಕ್ಕೂ ಡಾಗ್​ ಸತೀಶ್​ ಅವರ ಮೇಲೆ ಇದಾಗಲೇ ಕೇಸ್​ ಕೂಡ ಆಗಿತ್ತು. ವೂಲ್ಫ್ ಡಾಗ್ ಅನ್ನು ಖರೀದಿಸಿರುವ ಬಗ್ಗೆ ಅವರು ಪೋಸ್ಟ್​ ಹಾಕಿದ್ದರು. ಇದು ಬಿಗ್​ಬಾಸ್​ಗೂ ಹೋಗುವ ಮುನ್ನ ನಡೆದಿದ್ದ ಘಟನೆ. ಐವತ್ತು ಕೋಟಿ ರೂ. ಶ್ವಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಅವರ ನಿವಾಸದ ಮೇಲೆ ದಾಳಿ ಕೂಡ ನಡೆಸಿತ್ತು. ಹಲವಾರು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಸುಳ್ಳು ಎಂದೇ ಹೇಳಿದ್ದರು. ಕೊನೆಗೆ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories