Bigg Boss 12: ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಲೇ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಅಶ್ವಿನಿ ಗೌಡ!

Published : Jan 20, 2026, 02:13 PM IST

ಬಿಗ್​ಬಾಸ್​ ಮನೆಯಲ್ಲಿ ಜಗಳದ ಮೂಲಕವೇ ಸದ್ದು ಮಾಡಿದ್ದ ಅಶ್ವಿನಿ ಗೌಡ, ಇದೀಗ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ. ಸ್ಪರ್ಧೆಯಲ್ಲಿದ್ದಾಗ ನಡೆದ ಘಟನೆಗಳಿಗಾಗಿ ರಕ್ಷಿತಾ ಬಳಿ ಹಲವು ಬಾರಿ ಕ್ಷಮೆ ಕೇಳಿದ್ದಾಗಿ ಹೇಳಿಕೊಂಡಿರುವ ಅಶ್ವಿನಿ, ಕಣ್ಣೀರಿಟ್ಟಿದ್ದು ಯಾಕೆ? 

PREV
16
ಜಗಳದ ಮೂಲಕ ಹೈಪ್​

ಈ ಬಾರಿಯ ಬಿಗ್​ಬಾಸ್​ (BBK 12)ನಲ್ಲಿ ಜಗಳದ ಮೂಲಕವೇ ಸಾಕಷ್ಟು ಹೈಪ್​ ಕ್ರಿಯೇಟ್​ ಮಾಡಿದವರು ಅಶ್ವಿನಿ ಗೌಡ. ಅವರು ಜಗಳಕ್ಕೇ ಫೇಮಸ್​ ಎನ್ನುವ ರೀತಿಯಲ್ಲಿ ಇದ್ದರು. ಆದರೆ, ಸ್ಪರ್ಧೆ ಎಂದ ಮೇಲೆ ಇವೆಲ್ಲವೂ ಮಾಮೂಲೇ. ಅದೇ ರೀತಿ, ಇದೇ ಸ್ವಭಾವ ಇಟ್ಟುಕೊಂಡೇ ಫಿನಾಲೆಯವರೆಗೂ ಬಂದು ಎರಡನೆಯ ರನ್ನರ್​ ಅಪ್​ ಪಟ್ಟ ಪಡೆದುಕೊಂಡರು.

26
ಅಶ್ವಿನಿ ಗೌಡ ಮತ್ತು ರಕ್ಷಿತಾ

ಅಶ್ವಿನಿ ಅವರು ಇದೀಗ ಮಾಧ್ಯಮಗಳ ಮುಂದೆ ಬಿಗ್​ಬಾಸ್​​ ಪಯಣದ ಕುರಿತು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಸಾಕಷ್ಟು ಬಾರಿ ಹರಿಹಾಯ್ದಿದ್ದು ಇದೆ. ಅದೇ ರೀತಿ ಗಿಲ್ಲಿ ಮತ್ತು ರಕ್ಷಿತಾ ಕೂಡ ತಿರುಗೇಟು ನೀಡಿದ್ದು ಇದೆ.

36
ಕಣ್ಣೀರಾದ ಅಶ್ವಿನಿ

ಆದರೆ, ಗಿಲ್ಲಿ ನಟ ಬಡವನ ಸೋಗಿನಲ್ಲಿ ಗೆದ್ದಿರೋದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಶ್ವಿನಿ ಗೌಡ. ಅದರೆ ಇದೇ ವೇಳೆ ರಕ್ಷಿತಾ ಬಗ್ಗೆ ಮಾತನಾಡುತ್ತಲೇ ಕಣ್ಣೀರಾಗಿದ್ದಾರೆ.

46
ಸಾಕಷ್ಟು ಬಾರಿ ಕ್ಷಮೆ ಕೇಳಿದ್ದೇನೆ..

ನಾನು ಆಕೆಯ ಬಳಿ ಸಾಕಷ್ಟು ಬಾರಿ ಸಾರಿ ಕೇಳಿದ್ದೇನೆ. ಅವಳು ಕೂಡ ನನ್ನನ್ನು ಅಮ್ಮನ ಸ್ಥಾನದಲ್ಲಿ ಇಟ್ಟವಳು. ಸ್ಪರ್ಧೆಯಲ್ಲಿ ಇವೆಲ್ಲಾ ಮಾಮೂಲು. ಆಕೆ ಇನ್ನೂ ತುಂಬಾ ಚಿಕ್ಕವಳು. ಆ ಸಂದರ್ಭದಲ್ಲಿ ಇವೆಲ್ಲಾ ನಡೆದರೂ, ಒಂದೇ ಮನೆಯಲ್ಲಿ ಇರುವ ಕಾರಣ ನಮಗೆ ಅವರು ಬೇಕು, ಅವರಿಗೆ ನಾವು ಬೇಕು. ಆದರೆ ವೀಕ್ಷಕರಿಗೆ ತೋರಿಸುವಾಗ ಕೆಲವು ಭಾಗ ಮಾತ್ರ ತೋರಿಸಲಾಗುತ್ತದೆ ಎಂದಿದ್ದಾರೆ.

56
ಮತ್ತೆ ಸಿಗ್ತಾರೋ ಗೊತ್ತಿಲ್ಲ

ಕ್ಷಮೆ ಮತ್ತು ಥ್ಯಾಂಕ್ಸ್​ ಎರಡನ್ನೂ ಆ ಕ್ಷಣದಲ್ಲಿ ಹೇಳಬೇಕು. ಮುಂದೆ ಆ ಸಮಯ ಸಿಗುತ್ತದೆಯೋ ಗೊತ್ತಿಲ್ಲ. ನನ್ನ ಅಪ್ಪನಿಗೂ ಸಾಕಷ್ಟು ಬಾರಿ ಕ್ಷಮೆ ಕೇಳಬೇಕು ಎನ್ನಿಸುತ್ತದೆ. ಆದರೆ ಅವರನ್ನು ಕಳೆದುಕೊಂಡೆ. ಆದ್ದರಿಂದ ನಾನು ಬೇಗನೇ ಕ್ಷಮೆ ಕೇಳುತ್ತೇನೆ. ಅದಕ್ಕಾಗಿಯೇ ರಕ್ಷಿತಾ ಬಳಿಯೂ ಸಾಕಷ್ಟು ಬಾರಿ ಕ್ಷಮೆ ಕೇಳಿದ್ದೇನೆ ಎಂದು ಭಾವುಕರಾಗಿ ಕಣ್ಣೀರಿಟ್ಟರು.

66
ಅಮ್ಮನ ಸ್ಥಾನ

ಇದಕ್ಕೂ ಮೊದಲು ರಕ್ಷಿತಾ, ನನ್ನ ಅಮ್ಮ ನನಗೆ ಸಿಕ್ಕಾಪಟ್ಟೆ ಬೈಯುತ್ತಾರೆ. ನಾನು ಅಶ್ವಿನಿ ಮೇಡಂ ಅವರನ್ನು ಅಮ್ಮನ ಸ್ಥಾನದಲ್ಲಿ ಇಟ್ಟಿದ್ದೇನೆ. ಅವರು ಬೈದದ್ದು ನನಗೆ ಏನೂ ಅನ್ನಿಸುವುದಿಲ್ಲ ಎಂದಿದ್ದರು. ಈ ಮಾತನ್ನು ನೆನಪಿಸಿಕೊಂಡು ಕೂಡ ಅಶ್ವಿನಿ ಗೌಡ (Bigg Boss Ashwini Gowda) ಭಾವುಕರಾದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories