ಹಿಂದಿಯ ಬಿಗ್‌ಬಾಸ್ ಸೀಸನ್-20 ದಿನಗಣನೆ ಶುರುವಾಗಿದೆ. ಬೆನ್ನಲ್ಲೇ ಸಲ್ಮಾನ್ ಖಾನ್ ಅವರು ಒಂದು ಸೀಸನ್‌ನಿಂದ ಎಷ್ಟು ಸಂಪಾದಿಸುತ್ತಾರೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಮಾಹಿತಿಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಒಂದು ಎಪಿಸೋಡ್ ಕೋಟಿ ಕೋಟಿ ಲೆಕ್ಕಾಚಾರದಲ್ಲಿದೆ. ಮಾಹಿತಿ ಇಲ್ಲಿದೆ.
ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ತನ್ನ 20ನೇ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಪ್ರತಿ ಬಾರಿಯಂತೆ ಈ ಸೀಸನ್ ನಲ್ಲೂ ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಕಮಾಂಡ್ ವಹಿಸಿಕೊಳ್ಳಲಿದ್ದಾರೆ. ಆದರೆ ಶೋ ಶುರುವಾಗುವ ಮೊದಲೇ ಸಲ್ಮಾನ್ ಪಡೆಯುತ್ತಿರುವ ಸಂಭಾವನೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
24
ಸಲ್ಮಾನ್ ಸಂಭಾವನೆ ಎಷ್ಟು?
ವರದಿಗಳ ಪ್ರಕಾರ.. ಸಲ್ಮಾನ್ ಖಾನ್ ಇಡೀ ಸೀಸನ್ ನಡೆಸಿಕೊಡಲು ಸರಿಸುಮಾರು 120 ಕೋಟಿ ರೂಪಾಯಿಗಳ ಡೀಲ್ ಕುದುರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರಂಭದ ಸೀಸನ್‌ಗಳಲ್ಲಿ (ಸೀಸನ್ 4) ಪ್ರತಿ ಎಪಿಸೋಡ್‌ಗೆ 2.5 ಕೋಟಿ ಪಡೆಯುತ್ತಿದ್ದ ಸಲ್ಮಾನ್, ಈಗ ಸೀಸನ್‌ನಿಂದ ಸೀಸನ್‌ಗೆ ತಮ್ಮ ಸಂಭಾವನೆಯನ್ನು ಏರಿಸುತ್ತಾ ಬಂದಿದ್ದಾರೆ. ಬಿಗ್ ಬಾಸ್ 18ರ ವೇಳೆಗೆ ಅವರ ಸಂಭಾವನೆ 250 ಕೋಟಿ ಮುಟ್ಟಿತ್ತು ಎಂಬ ಸುದ್ದಿಯಿತ್ತು. ಈ ಬಾರಿ ಸೀಸನ್ 20 ಕ್ಕೆ 120 ಕೋಟಿ ನೀಡಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.
34
ನಿರ್ಮಾಪಕರು ಏನಂತಾರೆ?
ಸಲ್ಮಾನ್ ಸಂಭಾವನೆ ಬಗ್ಗೆ ಕೇಳಿದಾಗ ನಿರ್ಮಾಪಕ ಋಷಿ ನೇಗಿ, ನಟರ ಜೊತೆಗಿನ ಕಾಂಟ್ರಾಕ್ಟ್ ಎಂಬುದು ಖಾಸಗಿ ವಿಚಾರ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ 120 ಕೋಟಿ ರೂಪಾಯಿ ಎಂಬುದು ಕೇವಲ ಒಂದು ಅಂದಾಜಾಗಿದೆ.
ಬಿಗ್ ಬಾಸ್ ಸೀಸನ್ 20 ರ ಗ್ರ್ಯಾಂಡ್ ಪ್ರೀಮಿಯರ್ ಸೆಪ್ಟೆಂಬರ್ 6, 2026 ರಂದು ನಡೆಯಲಿದೆ.
ಜಿಯೋ ಹಾಟ್‌ಸ್ಟಾರ್: ರಾತ್ರಿ 9 ಗಂಟೆಗೆ ಸ್ಟ್ರೀಮ್ ಆಗಲಿದೆ.
ಕಲರ್ಸ್ ಟಿವಿ: ರಾತ್ರಿ 10:30 ಕ್ಕೆ ಪ್ರಸಾರವಾಗಲಿದೆ.
ಈ ಸೀಸನ್‌ನಲ್ಲಿ ಭಾಗವಹಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಕರಣ್ ವಾಹಿ, ಮಾಹಿ ವಿಜ್, ಜನ್ನತ್ ಜುಬೈರ್, ಗೀತಾ ಬಸ್ರಾ, ಮಿಸ್ಟರ್ ಫೈಸೂ, ಮೇರಿ ಕೋಮ್ ಮತ್ತು ಶೋವಿಕ್ ಚಕ್ರವರ್ತಿ ಅಂತಹ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಅಂತಿಮ ಪಟ್ಟಿಗಾಗಿ ಪ್ರೇಕ್ಷಕರು ಸೆಪ್ಟೆಂಬರ್ 6ರವರೆಗೂ ಕಾಯಲೇಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.