Bigg Bossನಿಂದ ಸ್ನೇಹಿತ್​ಗೆ 20 ಲಕ್ಷ ಸಂಭಾವನೆ ಸಿಕ್ತಾ? ಈ ಬಗ್ಗೆ ನಟ ಹೇಳಿದ್ದೇನು? ​

Published : Sep 03, 2025, 04:01 PM IST

ಬಿಗ್​ಬಾಸ್​​ 10ರಲ್ಲಿ ಭಾಗವಹಿಸಿದ್ದ ಸ್ನೇಹಿತ್​ ಅವರಿಗೆ 20 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದ್ದು ನಿಜನಾ? ಈ ಕುರಿತು ನಟ ಹೇಳಿದ್ದೇನು? 

PREV
17
ಬಹುಮುಖ ಪ್ರತಿಭೆ ಸ್ನೇಹಿತ್​

ರಂಗಭೂಮಿ ಕಲಾವಿದ, ಕನ್ನಡ ಕಿರುತೆರೆಯ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್ ಅವರು ಸದ್ಯ ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. ಬಿಗ್​ಬಾಸ್​ ಸೀಸನ್​ 11 ಕಳೆದ 12ನೇ ಸೀಸನ್​ ಬಂದರೂ, ಸೀಸನ್​ 10 (Bigg Boss) ಮಾತ್ರ ಸಕತ್​ ಸದ್ದು ಮಾಡುತ್ತಲೇ ಇದೆ. ಇದರಲ್ಲಿ ಸಕತ್​ ಸದ್ದು ಮಾಡಿದವರಲ್ಲಿ ಸ್ನೇಹಿತ್​ ಕೂಡ ಒಬ್ಬರು

27
10-20 ಲಕ್ಷ ಸಿಗೋದು ನಿಜನಾ?

ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳಿಗೆ 10-20 ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ಮಾತು ಕೇಳಿಬರುತ್ತಲೇ ಇರುತ್ತದೆ. ಅದೇ ರೀತಿ ಸ್ನೇಹಿತ್​ ಅವರು ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ 20 ಲಕ್ಷ ರೂಪಾಯಿ ಸಂಭಾವನೆ ಪಡೆದಿರುವುದಾಗಿ ಎಲ್ಲೆಡೆ ಸುದ್ದಿಯಾಗಿತ್ತು.

37
ಬಿಗ್​ಬಾಸ್​ಗೆ ದುಡ್ಡು ಎಷ್ಟು?

ಇದೀಗ ಸ್ನೇಹಿತ್​ ಅವರು ಬಾಸ್​ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಸಕತ್​ ದುಡ್ಡು ಮಾಡಿದ್ದಾರೆ ಎಂದು ಹೇಳುತ್ತಾರೆ. ಅದನ್ನು ಕೇಳಿ ನನಗೂ ಅಚ್ಚರಿಯಾಗಿತ್ತು. ನಾನು ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ 20 ಲಕ್ಷ ತಗೊಂಡಿರುವುದಾಗಿ ಹೇಳಿದ್ದರು. ಯುಟ್ಯೂಬ್​ನಲ್ಲಿಯೂ ಹಾಕಿಕೊಂಡಿದ್ದರು ಎಂದಿದ್ದಾರೆ.

47
ರಿಯಲ್​ ಸ್ಥಿತಿ ಕುರಿತು ಸ್ನೇಹಿತ್​

ಆದರೆ, ರಿಯಲ್​ ಆಗಿ ನಮ್ಮ ಸ್ಥಿತಿ ಏನು ಎನ್ನುವುದು ನಮಗೆ ಗೊತ್ತಿರುತ್ತದೆ. ಅಲ್ಲಿಂದ ಬಂದ ಮೇಲೆ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದು ಹೇಳಲು ಆಗುವುದಿದಲ್ಲ. ಆದರೆ ನನಗೆ ಆ ನಿಟ್ಟಿನಲ್ಲಿ ಅವಕಾಶ ಸಿಕ್ಕಿದೆ ಎನ್ನುವ ಮೂಲಕ ಬಿಗ್​ಬಾಸ್​​ ಸ್ಪರ್ಧಿಗಳ ಬಗ್ಗೆ ಸಾಮಾನ್ಯ ಜನರು ಅಂದುಕೊಳ್ಳುವಷ್ಟು ಹಣ ಸಿಗುವುದಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

57
ಸೆಲೆಬ್ರಿಟಿಗಳ ಬಗ್ಗೆ ಮಾತು

ಸೆಲೆಬ್ರಿಟಿಗಳು ಚಾಲ್ತಿಯಲ್ಲಿ ಇದ್ದರೆ ಮಾತ್ರ ಅವರನ್ನು ಜನ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ನಾವು ಜೀವನದಲ್ಲಿ ಸ್ಟೇಬಲ್​ ಆಗಿರಬೇಕು. ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅವಕಾಶ ಕಳೆದುಕೊಳ್ಳುತ್ತೇವೆ ಎಂದಿದ್ದಾರೆ. ಆದರೆ, ಬಿಗ್​ಬಾಸ್​ನಿಂದ ತಮಗೆ ಸಿಕ್ಕ ಸಂಭಾವನೆ ಬಗ್ಗೆ ರಿವೀಲ್​ ಮಾಡಲಿಲ್ಲ.

67
ನಮ್ರತಾ ಗೌಡ ಜೊತೆ ಬಾಂಡಿಂಗ್​

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ನೇಹಿತ್​ ಮತ್ತು ನಮ್ರತಾ ಗೌಡ ಬಾಂಡಿಂಗ್​ ​ ಚೆನ್ನಾಗಿತ್ತು. ಒಂದು ಹಂತದಲ್ಲಿ, ಸ್ನೇಹಿತ್ ಅವರು ನಮ್ರತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರೂ, ನಮ್ರತಾ ಗೌಡ (Namratha Gowda ) ಅದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಮನೆಯೊಳಗೆ ನಿಜವಾದ ಪ್ರೀತಿ ಹುಟ್ಟುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಸ್ನೇಹಿತ್ ಮತ್ತು ನಮತ್ರಾ ಸ್ನೇಹವನ್ನು ಅನೇಕರು ಅಪಾರ್ಥ ಮಾಡಿಕೊಂಡಿದ್ದರು. ಈ ಬಗ್ಗೆಯೂ ಸ್ನೇಹಿತ್​ ಮಾತನಾಡಿದ್ದಾರೆ. 

77
ಸ್ನೇಹಿತ್​ ಬೇಸರದ ನುಡಿ

ಅದರಂತೆ ಹಲವರು ಇವರಿಬ್ಬರಿಗೆ ಏನೋ ಇದೆ ಎಂದೇ ಹೇಳುತ್ತಿದ್ದರು. ಇಂದಿಗೂ ಕೆಲವರು ಆ ವಿಷಯವನ್ನು ಮಾತನಾಡುವುದು ಇದೆ. ಇದೀಗ ಬಾಸ್​ಟಿವಿಗೆ ಸ್ನೇಹಿತ್​ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ನೇಹಿತ್​ ಅವರು, ಅವರ ಪಾಡಿಗೆ ಅವರು ಖುಷಿಯಾಗಿದ್ದಾರೆ, ನನ್ನ ಪಾಡಿಗೆ ನಾನು ಖುಷಿಯಾಗಿದ್ದೇನೆ. ಈಗ ಡಿಸ್​ಕಷನ್​ ಮಾಡುವವರೂ ನಿಲ್ಲಿಸಿದ್ದಾರೆ. ನೀವ್ಯಾಕೆ ಅದನ್ನೇ ಹೇಳುತ್ತೀರೋ ಗೊತ್ತಿಲ್ಲ ಎಂದು ಸ್ವಲ್ಪ ಬೇಸರದಿಂದಲೇ ನುಡಿದಿದ್ದಾರೆ.

Read more Photos on
click me!

Recommended Stories