ತಾಂಡವ್ನೇ ಭಾಗ್ಯಳ ಪತಿ ಎನ್ನುವ ಸತ್ಯ ಗೊತ್ತಿಲ್ಲದೇ ತಾಂಡವ್ ಎದುರೇ ಭಾಗ್ಯಳನ್ನು ಸಿಕ್ಕಾಪಟ್ಟೆ ಹೊಗಳ್ತಾ ಇರೋ ಆದಿ, ಈಗ ಅವನದ್ದೇ ಮನೆಗೆ ಆಹ್ವಾನ ಕೊಟ್ಟಿದ್ದಾನೆ. ಮುಂದೇನಾಗುತ್ತೆ?
ತಾಂಡವ್ನೇ ಭಾಗ್ಯಳ ಪತಿ ಎನ್ನುವ ಸತ್ಯ ಗೊತ್ತಿಲ್ಲದೇ ತಾಂಡವ್ ಎದುರೇ ಭಾಗ್ಯಳನ್ನು ಸಿಕ್ಕಾಪಟ್ಟೆ ಹೊಗಳ್ತಾ ಇದ್ದಾನೆ ಆದಿ. ಇದನ್ನು ಕೇಳಿ ತಾಂಡವ್ಗೆ ಮೈಯೆಲ್ಲಾ ಉರಿ ಹೊತ್ತಿಕೊಂಡರೂ, ಆದಿ ತನ್ನ ಬಾಸ್ ಆಗಿರೋ ಕಾರಣ ಏನೂ ಹೇಳದ ಸ್ಥಿತಿಯಲ್ಲಿ ಇದ್ದಾನೆ. ಇದರ ನಡುವೆಯೇ ದುಬಾರಿ ಗಿಫ್ಟ್ ಕೊಡುವ ಬಗ್ಗೆಯೂ ಆದಿ ತಾಂಡವ್ ಬಳಿಯೇ ಡಿಸಕ್ಸ್ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾನೆ.
27
ತಾಂಡವ್ಗೆ ಇನ್ನೊಂದು ಧರ್ಮ ಸಂಕಟ
ಇದೀಗ ತಾಂಡವ್ಗೆ ಇನ್ನೊಂದು ಧರ್ಮ ಸಂಕಟ ಎದುರಾಗಿದೆ. ಭಾಗ್ಯಳ ಮನೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆಂದು ಆದಿ ಕುಟುಂಬ ಎಲ್ಲಾ ಬಂದಿದೆ. ಆದಿ ತನ್ನದೇ ಮನೆ ಅನ್ನೋ ರೀತಿಯಲ್ಲಿ ತಾಂಡವ್ ಮತ್ತು ಶ್ರೇಷ್ಠಾಳಿಗೂ ಇನ್ವಿಟೇಷನ್ ಕೊಟ್ಟಿದ್ದಾನೆ. ಇದ್ಯಾಕೋ ಸ್ವಲ್ಪ ಅತಿಯಾಯಿತು ಎಂದು ಅಂದುಕೊಳ್ಳುತ್ತಿದ್ದಾರೆ ವೀಕ್ಷಕರು. ಆದರೂ ಇದೊಂಥರಾ ಮಜಾ ಇದೆ ಎಂದೂ ಕಮೆಂಟ್ನಲ್ಲಿ ಹೇಳುತ್ತಿದ್ದಾರೆ.
37
ತಾಂಡವ್ ಮತ್ತು ಶ್ರೇಷ್ಠಾಳನ್ನು ನೋಡಿ ಶಾಕ್!
ತಾಂಡವ್ ಮತ್ತು ಶ್ರೇಷ್ಠಾಳನ್ನು ನೋಡಿ ಎಲ್ಲರಿಗೂ ಶಾಕ್ ಆಗಿದೆ. ತಾಂಡವ್ ಅಪ್ಪ ಮತ್ಯಾಕೆ ಇಲ್ಲಿ ಬಂದಿ ಎಂದು ಬೈದಿದ್ದಾನೆ. ಆದರೆ ಇದನ್ನು ಆದಿ ತಪ್ಪಾಗಿ ತಿಳಿದಿದ್ದಾನೆ. ತನ್ನ ಮನೆಯಲ್ಲಿ ಅಂದು ಆದ ಘಟನೆಯಿಂದ ಹೀಗೆ ಅವರು ಹೇಳ್ತಿರೋದು ಅಂದುಕೊಂಡು ಅದನ್ನು ಕ್ಷಮಿಸಿ, ನಾನೇ ತಾಂಡವ್ ಮತ್ತು ಶ್ರೇಷ್ಠಾರನ್ನು ಮನೆಗೆ ಕರೆದಿರುವುದಾಗಿ ತಿಳಿಸಿದ್ದಾನೆ.
ಸತ್ಯ ಹೇಳಲೂ ಆಗದೇ, ಬಿಡಲೂ ಆಗದ ಸ್ಥಿತಿ ತಾಂಡವ್ ಮನೆಯವರದ್ದು. ಒಟ್ಟಿನಲ್ಲಿ ಸೀರಿಯಲ್ ವಿಚಿತ್ರ, ಕುತೂಹಲದ ತಿರುವಿನಲ್ಲಿ ಸಾಗಿದೆ. ಅದೇನೇ ಆದರೂ ಭಾಗ್ಯ ಮತ್ತು ಆದಿ ಒಂದಾಗಬೇಕು ಎನ್ನುವ ಕಿಚ್ಚು ವೀಕ್ಷಕರಲ್ಲಿ ಹೆಚ್ಚಾಗ್ತಿದೆ.
57
ಆದಿ ಮತ್ತು ಭಾಗ್ಯ ಒಂದಾಗಬೇಕೆನ್ನುವ ವೀಕ್ಷಕರು
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು, ತಾಂಡವ್ಗೆ ಹೊಟ್ಟೆ ಉರಿಯಬೇಕು, ತಾಂಡವ್ ಎದುರು ಭಾಗ್ಯ ಮತ್ತು ಆದಿ ಒಂದಾಗಿ ಬಾಳಬೇಕು ಎಂದೆಲ್ಲಾ ಆಶಿಸ್ತಿರೋರೇ ಹಲವರು.
67
ಭಾಗ್ಯಳಿಗೆ ಇನ್ನೊಂದು ಮದುವೆ
. ರಿಯಲ್ ಲೈಫ್ನಲ್ಲಿ ಇಷ್ಟು ದೊಡ್ಡ ಮಕ್ಕಳು ಇದ್ದಾಕೆ ಮದುವೆಯಾಗಲು ಹೊರಟರೆ ಒಪ್ಪುತ್ತಾರೋ ಅಥ್ವಾ ಮದ್ವೆಯಾದ್ರೆ ಏನು ಕೊಂಕು ಮಾತನಾಡುತ್ತಾರೋ, ಮದುವೆಯಾದರೆ ಚೆನ್ನಾಗಿ ಸಂಸಾರ ನಡೆಸಲು ಕೊಡುತ್ತಾರೋ ಗೊತ್ತಿಲ್ಲ... ಆದ್ರೆ ರೀಲ್ ಲೈಫ್ನಲ್ಲಿ ಭಾಗ್ಯಳ ಸಂಕಷ್ಟ, ಆದಿಯ ಕ್ರೌರ್ಯ ನೋಡಿದವರು ಮಾತ್ರ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವ ಕಾತರದಿಂದ ಇದ್ದಾರೆ.
77
ಸೊಸೆಗೆ ಇನ್ನೊಂದು ಮದುವೆ
ಅದೇ ಇನ್ನೊಂದೆಡೆ ಭಾಗ್ಯಳ ಅತ್ತೆ ಕುಸುಮಾ ಕೂಡ ಸೊಸೆಗೆ ಇನ್ನೊಂದು ಮದುವೆ ಮಾಡಿಸಲು ಕಾಯುತ್ತಿರುವುದರಿಂದ ಆದಿ ಮತ್ತು ಭಾಗ್ಯಳ ಮದುವೆ ಗ್ಯಾರೆಂಟಿ ಎನ್ನೋದು ಎಲ್ಲರಿಗೂ ತಿಳಿದಿದೆ.