ನಾವಿಬ್ರೂ ದೇವಸ್ಥಾನದಲ್ಲಿ ಹಾರ ಹಾಕಿದ್ದು ನಿಜ, ಆದ್ರೆ...Bharjari Bachelors ಸುನಿಲ್​- ಅಮೃತಾ ಹೇಳಿದ್ದೇನು?

Published : Aug 13, 2025, 01:27 PM IST

'ಭರ್ಜರಿ ಬ್ಯಾಚುಲರ್ಸ್' ಸೀಸನ್​-2 ಗೆಲುವು ಸಾಧಿಸಿರುವ ಸುನಿಲ್​ ಗುಜಗೊಂಡಾ ಮತ್ತು ಅಮೃತಾ ರಾಜ್​ ಅವರು ತಮ್ಮ ಸಂಬಂಧದ ಬಗ್ಗೆ ಹೇಳಿದ್ದೇನು? 

PREV
18
ಭರ್ಜರಿ ಬ್ಯಾಚುಲರ್ಸ್ ವಿಜೇತರು

'ಭರ್ಜರಿ ಬ್ಯಾಚುಲರ್ಸ್' ಸೀಸನ್​-2 ಕೂಡ ಮುಗಿದಿದ್ದು, ಗಾಯಕ ಸುನೀಲ್ ಗುಜಗೊಂಡಾ (Sunil Gujagonda) ಅಮೃತಾ ರಾಜ್​ ಜೋಡಿ ವಿನ್ನರ್​ ಆಗಿದೆ. ವಿಜೇತರಿಗೆ ವಿನ್ನರ್ ಕಪ್‌ ಹಾಗೂ 15 ಲಕ್ಷ ರೂಪಾಯಿ ಕ್ಯಾಶ್ ಕೂಡ ಸಿಕ್ಕಿದೆ. ’ಈ ಶೋಗೆ ಬರಬೇಕೋ ಅಥವಾ ಬೇಡವೋ ಅಂತ ಆಲೋಚಿಸುತ್ತಿದ್ದೆ. ಈಗ ಶೋಗೆ ಬಂದು ವಿನ್ನರ್ ಟ್ರೋಫಿ ಹಿಡಿದುಕೊಂಡಿದ್ದೇನೆ. ತುಂಬಾ ಖುಷಿಯಾಗುತ್ತಿದೆ. 20 ಜನರ ಟ್ರೋಫಿ ಇದು ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಇದರ ಜೊತೆ ಜೊತೆಗೇನೇ ಈ ಜೋಡಿಯ ಕೆಮೆಸ್ಟ್ರಿ ಬಗ್ಗೆ ವೀಕ್ಷಕರು ಸಕತ್​ ಖುಷಿಪಟ್ಟಿದ್ದು, ರಿಯಲ್​ ಲೈಫ್​ನಲ್ಲಿ ಮದ್ವೆಯಾದ್ರೆ ಚೆನ್ನಾಗಿತ್ತು ಎಂದೇ ಕಮೆಂಟ್​ ಹಾಕುತ್ತಿದ್ದರು.

28
ಭರ್ಜರಿ ಬ್ಯಾಚುಲರ್ಸ್​ನಲ್ಲಿ ಹವಾ ಸೃಷ್ಟಿಸಿದ ಜೋಡಿಗಳು

ಅಷ್ಟಕ್ಕೂ ಸೀರಿಯಲ್​​ ಆಗಲೀ, ರಿಯಾಲಿಟಿ ಷೋ ಆಗಲಿ... ಅಲ್ಲಿ ಇಬ್ಬರು ಚೆನ್ನಾಗಿ ನಟಿಸಿದ್ರೆ ಇಲ್ಲವೇ ಡಾನ್ಸ್​ ಮಾಡಿದ್ರೆ ವೀಕ್ಷಕರದ್ದು ಯಾವಾಗ್ಲೂ ಒಂದೇ ಮಾತು. ಇಬ್ಬರೂ ಮದುವೆಯಾಗಬೇಕು ಎನ್ನೋದು. ಅವರಲ್ಲಿ ಒಬ್ಬರು ಇನ್ನೊಂದು ಸೀರಿಯಲ್​ ಅಥ್ವಾ ಷೋನಲ್ಲಿ ಇನ್ನೊಬ್ಬರ ಜೊತೆ ಕಾಣಿಸಿಕೊಂಡರೆ ಅವರಿಬ್ಬರ ಜೋಡಿ ಚೆನ್ನಾಗಿದೆ, ಮದುವೆಯಾಗಲಿ ಎನ್ನುತ್ತಾರೆ. ಒಟ್ಟಿನಲ್ಲಿ ಗಂಡು-ಹೆಣ್ಣು ಒಟ್ಟಿಗೇ ಇದ್ದರೆ ಮದುವೆಯ ಬಗ್ಗೆಯೇ ನೇರ ಯೋಚನೆ ಹೋಗುವುದು ಕಮೆಂಟ್​ಗಳಿಂದ ತಿಳಿದುಬರುತ್ತದೆ.

38
ಭರ್ಜರಿ ಬ್ಯಾಚುಲರ್ಸ್​ನಲ್ಲಿ ಹವಾ ಸೃಷ್ಟಿಸಿದ ಜೋಡಿ ಸುನಿಲ್​- ಅಮೃತಾ

ಅದೇನೇ ಇದ್ದರೂ, ಭರ್ಜರಿ ಬ್ಯಾಚುಲರ್ಸ್​ನಲ್ಲಿ ಹವಾ ಸೃಷ್ಟಿಸಿದ ಜೋಡಿ ಸುನಿಲ್​- ಅಮೃತಾ ಅವರದ್ದು. ಅದೊಮ್ಮೆ ಇಬ್ಬರೂ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದರಿಂದ ಇವರಿಬ್ಬರ ಮದ್ವೆಯಾಗಿಯೇ ಹೋಯ್ತು ಎನ್ನುವ ಸುದ್ದಿಯಾಗಿತ್ತು. ಅದರ ಬಗ್ಗೆ ಇದೀಗ ಮಾಧ್ಯಮದಲ್ಲಿ ಈ ಜೋಡಿ ಮಾತನಾಡಿದೆ. ಸನೀಲ್​ ಅವರು, ನಾನು ಹಳ್ಳಿಯಲ್ಲಿ ಬೆಳೆದವ, ಈಕೆ ಬೆಂಗಳೂರಿನಲ್ಲಿಯೇ ಬೆಳೆದವಳು. ಹಳ್ಳಿಯ ಲೈಫ್ ಗೊತ್ತಿರಲಿಲ್ಲ. ಆದರೆ ಅಲ್ಲಿಗೆ ಕರೆದುಕೊಂಡು ಹೋದಾಗ, ಅದ್ಧೂರಿ ಸ್ವಾಗತ ಸಿಕ್ಕಿತು. ಇಡಿ ಹಳ್ಳಿಗೆ ಹಳ್ಳಿಯ ಜನರೇ ಸೇರಿದ್ದರು ಎಂದು ಅಂದು ನಡೆದ ಘಟನೆ ವಿವರಿಸಿದರು.

48
ಹಳ್ಳಿಯ ದಿನ ನೆನೆದ ಸುನಿಳ್​

ಅಂದು ಮೆರವಣಿಗೆ ಮಾಡಿದಾಗ ಅಮೃತಾ ಹೆದರಿ ಬಿಟ್ಟಿದ್ದರು. ನಮ್ಮೂರಿಗೆ ಯಾರೇ ಬಂದರೂ ಅವರಿಗೆ ಹಾರ ಹಾಕಿ ಸ್ವಾಗತ ಮಾಡುತ್ತಾರೆ. ನಮ್ಮದೂ ಹಾಗೆಯಾ ಆಗಿತ್ತು. ಆಂಜನೇಯನ ಗುಡಿಗೆ ಹೋಗಿದ್ವಿ. ಇಬ್ಬರಿಗೂ ಹಾರ ಹಾಕಲಾಗಿತ್ತು. ಅಲ್ಲಿಯ ಜನರಿಗೆ ಹೆದರಿ ಈಕೆ ನನ್ನ ಕೈ ಹಿಡಿದುಕೊಂಡಿದ್ದಳು. ಅದೇ ಫೋಟೋ ವೈರಲ್​ ಆಗಿ, ಇಬ್ಬರೂ ಮದ್ವೆಯಾದ್ವಿ ಎನ್ನೋ ಸುದ್ದಿಯಾಗಿದೆ ಅಷ್ಟೇ ಎಂದಿದ್ದಾರೆ.

58
ಲೈಫ್​ನಲ್ಲಿ ಇಬ್ಬರೂ ಬಿಜಿ

ಇದೇ ವೇಳೆ, ಇಬ್ಬರೂ ನಮ್ಮ ನಮ್ಮ ಲೈಫ್​ನಲ್ಲಿ ಬಿಜಿಯಾಗಿದ್ದೇವೆ. ಇಬ್ಬರೂ ಬೆಸ್ಟ್​ ಫ್ರೆಂಡ್ಸ್​ ಅಷ್ಟೇ. ಅಂಥ ಸಂಬಂಧವೇನೂ ಇಲ್ಲ ಎಂದಿದ್ದಾರೆ. ಇದೇ ವೇಳೆ ಅಮೃತಾ ಅವರು, ತಮ್ಮ ಮಾಜಿ ಬಾಯ್ ಫ್ರೆಂಡ್ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದು, ಜೀವನ ಮುಂದೆ ಸಾಗುತ್ತೆ. 

68
ಬ್ರೇಕಪ್​ ಬಗ್ಗೆ ಅಮೃತಾ

ನಾವಿಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಬ್ರೇಕಪ್ ಆಗಿದ್ದೇವೆ. ಹಾಗೆಂದು ಡಿಪ್ರೆಷನ್​ ಅದೂ ಇದು ಅಂತೇನೂ ಇಲ್ಲ. ಈಗ ನಾನು-ಸುನಿಲ್​ ಬೆಸ್ಟ್​ ಫ್ರೆಂಡ್ಸ್ ಅಷ್ಟೇ ಎಂದಿದ್ದಾರೆ.

78
ಸುನೀಲ್​ ಭವಿಷ್ಯದ ಮಾತು

ವಿಜೇತರಾದ ಮೇಲೆ ಸುನೀಲ್​ ಮಾಧ್ಯಮದವರ ಜೊತೆ ಈ ಹಿಂದೆ ಮಾತನಾಡಿ, ವಿನ್ನಿಂಗ್‌ ಟ್ರೋಫಿ ಗೆದ್ದದ್ದು ತುಂಬಾ ಖುಷಿ ಇದೆ. ಸಾವಿರಾರು ಜನ ಆಡಿಷನ್‌ ಕೊಟ್ಟಿರುತ್ತಾರೆ. ಅದರಲ್ಲಿ ಒಂದು 30 ಜನ ಸೆಲೆಕ್ಟ್‌ ಆಗಿ, ಮೆಗಾ ಆಡಿಷನ್‌ನಲ್ಲಿ 15 ಜನ ಉಳಿದಿರುತ್ತೇವೆ. ಅದರಲ್ಲಿ 6 ತಿಂಗಳು ಇಲ್ಲ 5 ತಿಂಗಳು ಶೋನಲ್ಲಿ ಭಾಗವಹಿಸಿರುತ್ತೇವೆ. ಸರಿಗಮಪ ಸಿಂಗಿಂಗ್‌ ಶೋ ಗೆದ್ದಿದ್ದೆ. ಆ ಟ್ರೋಫಿ ಸಿಕ್ಕಾಗಲೇ ದೇವರ ಆಶೀರ್ವಾದ, ನಮ್ಮ ಅಪ್ಪ-ಅಮ್ಮ ಮಾಡಿರುವ ಪುಣ್ಯ ನಮಗೆ ತಟ್ಟಿದೆ ಅಂದುಕೊಂಡಿದ್ದೆ ದು ಹೇಳಿಕೊಂಡಿದ್ದಾರೆ.

88
ಮನೆ ಕಟ್ಟುವ ಆಸೆ

ನಮ್ಮ ಊರು ಗುಲ್ಬರ್ಗಾ, ಅಲ್ಲಿಂದ ಬೆಂಗಳೂರಿಗೆ ಬಂದಿದ್ದೇನೆ. ಬೆಂಗಳೂರಲ್ಲಿ ನನ್ನದೊಂದು ಮನೆ ಆಗಬೇಕು ಅನ್ನೋದು ನನ್ನ ಆಸೆ. ತುಂಬಾ ದಿನದಿಂದ ಇಲ್ಲಿ ಮನೆ ಮಾಡಬೇಕು ಅನ್ನೋ ಕನಸಿತ್ತು. ಆ ಕನಸಿಗೆ ಈ ಹಣ ಸ್ವಲ್ಪ ಸಹಾಯ ಆಗಿದೆ ಎಂದೂ ಹೇಳಿದ್ದರು ಸುನೀಲ್​.

Read more Photos on
click me!

Recommended Stories