'ಪ್ರತಿ ಸ್ನೇಹವನ್ನೂ ಲವ್ ಸ್ಟೋರಿ ಮಾಡಬೇಡಿ'
ಅರ್ಜುನ್ ತಮ್ಮ ಪೋಸ್ಟ್‌ನಲ್ಲಿ, 'ಪ್ರತಿ ಬಾರಿ ಒಬ್ಬ ಗಂಡು ಮತ್ತು ಹೆಣ್ಣು ಒಟ್ಟಿಗೆ ಕಾಣಿಸಿಕೊಂಡಾಗ, ಅದಕ್ಕೆ ಪ್ರೇಮ ಸಂಬಂಧದ ಹೆಸರು ಕೊಡುವುದು ಸರಿಯಲ್ಲ' ಎಂದು ಹೇಳಿದ್ದಾರೆ. ಯಾವುದೇ ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸುವಂತೆ ಅವರು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಪೇಜ್‌ಗಳಿಗೆ ಮನವಿ ಮಾಡಿದ್ದಾರೆ. ಖಚಿತಪಡಿಸಿಕೊಳ್ಳದೆ ವದಂತಿಗಳನ್ನು ಹಬ್ಬಿಸುವುದರಿಂದ ಜನರ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಅರ್ಜುನ್ ಬಿಜ್ಲಾನಿ ಅವರ ಈ ನಿಲುವಿಗೆ ನಟಿ ಕ್ರಿಸ್ಟಲ್ ಡಿಸೋಜಾ ಕೂಡ ಬೆಂಬಲ ಸೂಚಿಸಿದ್ದಾರೆ. ವೈರಲ್ ವಿಡಿಯೋವೊಂದಕ್ಕೆ ಕಾಮೆಂಟ್ ಮಾಡಿದ ಅವರು, 'ಇದೇನಿದು ಅಸಂಬದ್ಧ? ಕೇವಲ ವೀವ್ಸ್‌ಗಾಗಿ ಏನನ್ನಾದರೂ ಪೋಸ್ಟ್ ಮಾಡುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ನಂತರ, ಅನೇಕ ಅಭಿಮಾನಿಗಳು ಸಹ ವದಂತಿ ಹಬ್ಬಿಸುವ ಪೇಜ್‌ಗಳನ್ನು ಟೀಕಿಸಿದ್ದಾರೆ.