‘Ms Mandre’ಯಿಂದ ‘Mrs Sundaram’ವರೆಗೆ..: ಶರ್ಮಿಳಾ ಮಾಂಡ್ರೆ ಮದುವೆಯ ಫೋಟೋಸ್ ವೈರಲ್

Published : Jul 19, 2026, 05:07 PM IST

Sharmiela Mandre Wedding Photos: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

PREV
16
ರಾಜಸ್ಥಾನದ ಜೈಪುರದಲ್ಲಿ ವಿವಾಹ

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ದಕ್ಷಿಣ ಭಾರತೀಯ ವೈದಿಕ ಸಂಪ್ರದಾಯದಂತೆ ಅದ್ಧೂರಿಯಾಗಿ ನಡೆದ ಈ ವಿವಾಹ ಸಮಾರಂಭದ ಸುಂದರ ಕ್ಷಣಗಳನ್ನು ಇದೀಗ ಶರ್ಮಿಳಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

26
From Ms Mandre to Mrs Sundaram

ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಶರ್ಮಿಳಾ, "From Ms Mandre to Mrs Sundaram" ಎಂಬ ಭಾವುಕ ಶೀರ್ಷಿಕೆ ನೀಡಿ ಹೊಸ ಜೀವನದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

36
ಅದ್ಧೂರಿ ಆರತಕ್ಷತೆ

ಜುಲೈ 9ರಂದು ಜೈಪುರಕ್ಕೆ ಆಗಮಿಸಿದ್ದ ಉಭಯ ಕುಟುಂಬಗಳು, ಜುಲೈ 11ರಂದು ಹಳದಿ, ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಆಚರಿಸಿದ್ದವು. ಬಳಿಕ ಜುಲೈ 12ರ ಭಾನುವಾರ ಮುಂಜಾನೆ ವೈದಿಕ ವಿಧಿವಿಧಾನಗಳೊಂದಿಗೆ ವಿವಾಹ ನೆರವೇರಿದರೆ, ಸಂಜೆ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಜರುಗಿತು.

46
ಸರಳವಾಗಿ ನಿಶ್ಚಿತಾರ್ಥ

ಈ ತಾರಾ ಜೋಡಿಯ ಮದುವೆಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ಕನ್ನಡ ಹಾಗೂ ತಮಿಳು ಚಿತ್ರರಂಗದ ಹಲವು ಗಣ್ಯರು, ಆಪ್ತರು ಮತ್ತು ಸಿನಿಮಾ ತಾರೆಯರು ಸಾಕ್ಷಿಯಾಗಿದ್ದರು. ಇದಕ್ಕೂ ಮುನ್ನ ಜೂನ್ 25ರಂದು ಬೆಂಗಳೂರಿನ ಖಾಸಗಿ ತಾರಾ ಹೋಟೆಲ್‌ನಲ್ಲಿ ಶರ್ಮಿಳಾ ಮತ್ತು ಸುಧನ್ ಅವರ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ತಮ್ಮ ಜೀವನ ಸಂಗಾತಿಯ ಸರಳ ವ್ಯಕ್ತಿತ್ವ ಹಾಗೂ ಇಬ್ಬರ ನಡುವಿನ ಗಟ್ಟಿಯಾದ ಸ್ನೇಹವೇ ಈ ಸಂಬಂಧಕ್ಕೆ ಭದ್ರ ಅಡಿಪಾಯವಾಗಿದೆ ಎಂದು ಶರ್ಮಿಳಾ ಈ ಹಿಂದೆ ಹೇಳಿಕೊಂಡಿದ್ದರು.

56
ಪ್ಯಾಷನ್ ಸ್ಟುಡಿಯೋಸ್ ಸಂಸ್ಥೆಯ ಮುಖ್ಯಸ್ಥ

ಶರ್ಮಿಳಾ ಅವರ ಪತಿ ಸುಧನ್ ಸುಂದರಂ ಅವರು ತಮಿಳಿನ ಹೆಸರಾಂತ ಪ್ಯಾಷನ್ ಸ್ಟುಡಿಯೋಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಇತ್ತೀಚಿನ ಸೂಪರ್ ಹಿಟ್ 'ಮಹಾರಾಜ' ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ 'ಪಾರ್ಕಿಂಗ್' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

66
ಜನಪ್ರಿಯ ಚಿತ್ರಗಳಲ್ಲಿ ನಟನೆ

ಇನ್ನು ಶರ್ಮಿಳಾ ಮಾಂಡ್ರೆ ಅವರು 2007ರಲ್ಲಿ ಬಿಡುಗಡೆಯಾದ 'ಸಜನಿ' ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಕೃಷ್ಣ, ನವಗ್ರಹ, ಗಾಳಿಪಟ 2 ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ಪ್ರಸ್ತುತ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಹಾಗೂ ಸಹ-ನಿರ್ಮಾಪಕಿಯಾಗಿ ಸಕ್ರಿಯರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories