ಈಗ ಎಲ್ಲೆಲ್ಲೂ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿಯೇ ಹರಿದಾಡುತ್ತಲೇ ಇತ್ತು. ಆದರೆ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೊನೆಗೆ ಅಂತೂ ಮದುವೆಯ ಆಹ್ವಾನ ಪತ್ರಿಕೆಯನ್ನೇ ಬಿಡುಗಡೆ ಮಾಡುವ ಮೂಲಕ, ಮದ್ವೆಯಾಗ್ತಿರೋ ನಿಜ ಎನ್ನುವುದನ್ನು ಹೇಳಿದ್ದಾರೆ. ನಾಡಿದ್ದು ಅಂದರೆ ಆಗಸ್ಟ್ 28ರಂದೇ ಅನುಶ್ರೀ ಮದುವೆ ಆಗಲಿದ್ದಾರೆ. ಅಷ್ಟಕ್ಕೂ ಆ್ಯಂಕರ್ ಅನುಶ್ರೀ ಎಂದರೆ ಸಾಕು, ಅವರ ಅಸಂಖ್ಯ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು. ಈಗ ಅಭಿಮಾನಿಗಳು ಸಕತ್ ಖುಷಿಯಾಗಿದ್ದಾರೆ.
26
ಕೊಡಗು ಮೂಲದ ರೋಷನ್
ಕೊಡಗು ಮೂಲದ ರೋಷನ್ ಎಂಬುವವರ ಜೊತೆಗೆ ಅನುಶ್ರೀ ವಿವಾಹವಾಗಲಿದ್ದಾರೆ. ಮದುವೆ ಇನ್ವಿಟೇಶನ್ ಕೂಡ ವೈರಲ್ ಆಗಿದೆ. ಇದನ್ನು ನೋಡಿ ಕೊನೆಗೂ ಅವರ ಮದುವೆ ಕನ್ಫರ್ಮ್ ಆಗಿದೆ. ಇದೀಗ ಮದುವೆಗೆ ಇನ್ನೇನು ಎರಡೇ ದಿನವಿದೆ. ಮದುವೆಗೆ ಮುನ್ನುಡಿ ಬರೆದಿದ್ದಾರೆ ಅನುಶ್ರೀ. ಇದಾಗಲೇ ಅವರು ಮದುಮಗಳಾಗಿ ಮಿಂಚಿದ್ದಾರೆ.
36
ಜಾಹೀರಾತಿನಲ್ಲಿ ಅನುಶ್ರೀ
ಬಾಲ್ಯದಿಂದಲೂ ಮದುವೆ ಎನ್ನುವುದು ಕನಸಾಗಿತ್ತು ಎಂದು ಮಾತು ಆರಂಭಿಸುವ ಮೂಲಕ, ಮದುವೆಯ ಸಡಗರ ಹೇಗಿರಬೇಕು ಎಂದು ಕನಸು ಕಂಡಿರುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಇದು ಆಭರಣ ಸೇರಿದಂತೆ ಮದುವೆಗೆ ಬೇಕಾದ ಎಲ್ಲಾ ವಸ್ತುಗಳು ಒಂದೇ ಮಳಿಗೆಯಲ್ಲಿ ಸಿಗುವ ಷೋರೂಮ್ ಒಂದರ ಬಗ್ಗೆ ಅವರು ಜಾಹೀರಾತು ನೀಡಿದ್ದಾರೆ.
ಆ್ಯಂಕರಿಂಗ್ ಅಷ್ಟೇ ಅಲ್ಲದೇ ಅನುಶ್ರಿ ಅವರು ಜಾಹೀರಾತಿನ ಮೂಲಕವೂ ಗಣ ಗಳಿಸುತ್ತಾರೆ. ಇದೀಗ ಮದುವೆಯ ಸಂದರ್ಭ ಆಗಿದ್ದರಿಂದ ಮದುವೆಯ ಬಗ್ಗೆ ಷೋರೋಮ್ ಒಂದಕ್ಕೆ ನಟಿ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ಜಾಹೀರಾತು ನೀಡಿದ್ದಾರೆ. ಇದರಲ್ಲಿ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರೆ.
56
ಪತಿಯ ಪರಿಚಯ ಹೀಗಿದೆ...
ಅನುಶ್ರೀ ಮದುವೆಯಾಗುತ್ತಿರುವ ಹುಡುಗನ ಹೆಸರು ರೋಷನ್. ರಾಮಮೂರ್ತಿ ಹಾಗೂ ಸಿಸಿಲಿಯಾ ಇವರ ತಂದೆ-ತಾಯಿ. ರೋಷನ್ ಮೂಲತಃ ಕೊಡಗಿನವರಾಗಿದ್ದ, ಉದ್ಯಮಿಯಾಗಿದ್ದಾರೆ. ಅಂದಹಾಗೆ, ಅನುಶ್ರೀ ಹಾಗೂ ರೋಷನ್ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, ಇವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ಆಗಸ್ಟ್ 28, ಗುರುವಾರದಂದು ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಡುತ್ತಿದೆ.
66
ವೆಡ್ಡಿಂಗ್ ಕಾರ್ಡ್ ವೈರಲ್
ಸದ್ಯ ನಿರೂಪಕಿ ಅನುಶ್ರೀ ಅವರ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದೆ. ಇನ್ವಿಟೇಶನ್‌ನಲ್ಲಿ, ʻನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರʼ ಎಂದು ಬರೆದಿರುವ ಸಾಲುಗಳು ಗಮನ ಸೆಳೆದಿತ್ತು.