Amruthadhaare ಸುಧಾಗೆ ಕಂಕಣಭಾಗ್ಯ: ಭಾವಿ ಪತಿಯ ವಿಶೇಷ ವಿಡಿಯೋ ಶೇರ್‌ ಮಾಡಿದ ನಟಿ ಮೇಘಾ ಶೆಣೈ

Published : Aug 23, 2025, 03:55 PM IST

ಅಮೃತಧಾರೆಯಲ್ಲಿ ನಾಯಕನ ತಂಗಿ ಸುಧಾ ಆಗಿ ಮಿಂಚುತ್ತಿರೋ ನಟಿ ಮೇಘಾ ಶೆಣೈ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದ್ದು, ಭಾವಿ ಪತಿಯನ್ನು ಹೀಗೆ ಪರಿಚಯಿಸಿದ್ದಾರೆ ನಟಿ... 

PREV
17
ಸೀರಿಯಲ್‌ನಲ್ಲೂ ಹೊಸದಾಗಿ ಮದುವೆ

ಅಮೃತಧಾರೆಯ ಸುಧಾ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಮಗಳನ್ನು ಬೆಳೆಸಿದಾಕೆ, ಜೊತೆಗೆ ಅತ್ತೆಯನ್ನೂ ಅದೇ ಜತನದಿಂದ ಕಾಪಾಡಿಕೊಂಡಾಕೆ. ಕೊನೆಗೆ ನೂರಾರು ಕೋಟಿ ಒಡೆಯ ಗೌತಮ್‌ ತಂಗಿಯೆಂದು ತಿಳಿಯುತ್ತಿದ್ದಂತೆಯೇ ತಾನೇ ಕೆಲಸ ಮಾಡುತ್ತಿದ್ದ ಮನೆಯ ಯಜಮಾನಿಯಾದಳು. ಆದರೂ ಅದೇ ನಯ, ನಾಜೂಕು. ಇದೀಗ ಈ ಸುಧಾ, ಸೃಜನ್‌ ಬಾಳಸಂಗಾತಿಯಾಗಿದ್ದಾಳೆ.

27
ಅಮೃತಧಾರೆಯಲ್ಲಿ ಮುಗ್ಧ ತಂಗಿ

ಇದು ಅಮೃತಧಾರೆಯ ಸೀರಿಯಲ್‌ ಸ್ಟೋರಿ. ಈ ಸೀರಿಯಲ್‌ನಲ್ಲಿ ಈಗಷ್ಟೇ ಎರಡನೆಯ ಮದುವೆಯಾಗಿರೋ ಸುಧಾ ರಿಯಲ್‌ ಹೆಸರು ಮೇಘಾ ಶೆಣೈ. ರಿಯಲ್ ಲೈಫ್‌ನಲ್ಲಿ ಇವರು ಇನ್ನೂ ಸಿಂಗಲ್‌. ಈಗ ಮದುವೆಯಾಗ ಹೊರಟಿದ್ದು ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಮೊನ್ನೆ ಇವರ ಎಂಗೇಜ್‌ಮೆಂಟ್‌ ನಡೆದಿದ್ದು, ಅದರ ವಿಶೇಷ ವಿಡಿಯೋ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

37
ಭಾವಿ ಪತಿ ಮುಖ ರಿವೀಲ್‌

ಅಂದಹಾಗೆ ನಟಿ ಮೇಘಾ ಶೆಣೈ ತಮ್ಮ ಭಾವಿ ಪತಿಯ ಮುಖವನ್ನು ರಿವೀಲ್‌ ಮಾಡಿದರೂ, ಅವರ ಬಗ್ಗೆ ಹೆಚ್ಚಿನ ಡಿಟೇಲ್ಸ್‌ ನೀಡಲಿಲ್ಲ. ಮಂಗಳೂರಿನ ಟಿ ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಇವರ ಎಂಗೇಜ್‌ಮೆಂಟ್‌ಗೆ ಸೀರಿಯಲ್‌ ತಾಯಿ ಪಾತ್ರ ಮಾಡ್ತಿರೋ ಚಿತ್ಕಳಾ ಬಿರದಾರ್​ ದಂಪತಿ ಸಮೇತ ಭಾಗಿಯಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

47
ಹಲವು ಸೀರಿಯಲ್‌ಗಳಲ್ಲಿ ನಟನೆ

ಇನ್ನು ಮೇಘಾ ಶೆಣೈ ಕುರಿತು ಹೇಳುವುದಾದರೆ, ಇವರು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದರು. ಸಿರಿಕನ್ನಡ ವಾಹಿನಿಯಲ್ಲಿ 'ಬ್ರಾಹ್ಮಿನ್ಸ್ ಕೆಫೆ'ಯಲ್ಲಿ ನಾಯಕಿ ಕರುಣಾ ಆಗಿ ಮನಗೆದ್ದವರು. ಅಲ್ಲಿಂದ ಅವರು ಹಲವು ಚಾನೆಲ್‌ಗಳ ಹಲವು ಸೀರಿಯಲ್‌ಗಳಲ್ಲಿ ನಟಿಸಿದರು. ಎಲ್ಲದರಲ್ಲಿಯೂ ಖಳ ನಾಯಕಿಯಾದದ್ದೇ ಹೆಚ್ಚು.

57
ಸಾಲು ಸಾಲು ಆಫರ್‌

ಅಲ್ಲಿಂದ ಅವರಿಗೆ ಸಾಲು ಸಾಲು ಆಫರ್‌ ಬಂದವು. 'ಜನುಮದ ಜೋಡಿ' ಧಾರಾವಾಹಿಯಲ್ಲಿ ಅಭಿನಯಿಸಿದರು. ಬಳಿಕ ಖಳನಾಯಕಿಯಾಗಿಯೂ ಸೈ ಎನ್ನಿಸಿಕೊಂಡರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ಹಾಸಿನಿ ಪಾತ್ರಕ್ಕೆ ಜೀವ ತುಂಬಿದ ಮೇಘಾ ಶೆಣೈ ಅಲ್ಲೂ ಕೂಡಾ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

67
ಅಧಿಕಾರಿಯಾಗಿ ಮಿಂಚಿದ ನಟಿ

ಬಳಿಕ ಜೀ ಕನ್ನಡ ವಾಹಿನಿಯಲ್ಲಿ 'ಮಹಾದೇವಿ' ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ ಕಾಣಿಸಿಕೊಂಡರು. ಅಲ್ಲಿ ಫುಲ್‌ ಪಾಸಿಟಿವ್‌ ಪಾತ್ರ. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ಮೇಘಾ ಅವರು, ಕಾರ್ತಿಕ್ ಪ್ರೇಯಸಿ ರಮ್ಯಾ ಆಗಿ ನಾಯಕಿಯಾಗಿ ಮಿಂಚಿದರು.

77
'ಆರತಿಗೊಬ್ಬ ಕೀರ್ತಿಗೊಬ್ಬ' ಸೀರಿಯಲ್‌

ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು. ಇಲ್ಲಿ ಅವರದ್ದು ರಗಡ್ ಲುಕ್. ಇದಾದ ಬಳಿಕ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕ ವಿಶಾಲ್‌ನನ್ನು ಪ್ರೀತಿಸುವ ಹುಡುಗಿಯಾಗಿ ಈಕೆ ಕಾಣಿಸಿಕೊಂಡರೂ ಇಲ್ಲಿ ಇವರದ್ದು ನೆಗೆಟಿವ್‌ ರೋಲ್‌. ಈಗ ಮುಗ್ಧ ತಂಗಿಯಾಗಿ ಅಮೃತಧಾರೆಯಲ್ಲಿ ಮಿಂಚುತ್ತಿದ್ದಾರೆ. ಈ ಮೂಲಕ ಯಾವ ಪಾತ್ರಕ್ಕೂ ಸೈ ಎನ್ನಿಸಿಕೊಂಡಿದ್ದಾರೆ.

ಇಲ್ಲಿದೆ ನೋಡಿ ಅವರು ಶೇರ್‌ ಮಾಡಿದ ವಿಡಿಯೋ

 

Read more Photos on
click me!

Recommended Stories