Published : Sep 23, 2025, 01:09 PM ISTUpdated : Sep 23, 2025, 01:12 PM IST
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್‌ಗೆ ಆಕಾಶ್ ತನ್ನ ಮಗನೆಂಬ ಸತ್ಯ ತಿಳಿದು ಅವನ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಾನೆ. ಇನ್ನೊಂದೆಡೆ, ಶಾಲೆಯಲ್ಲಿ ಎಂಎಲ್ಎ ಮಗನಿಗೆ ಬುದ್ಧಿ ಹೇಳಿದ್ದಕ್ಕೆ ಭೂಮಿಕಾ ಪ್ರಾಣಕ್ಕೆ ಅಪಾಯ ಎದುರಾಗಿದೆ. ಭೂಮಿಕಾ ಪ್ರಾಣಕ್ಕೆ ಸಂಚಕಾರ ಬರುತ್ತಾ?
ಅಮೃತಧಾರೆ (Amruthadhaare Serial) ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಲೇ ಸಾಗಿದೆ. ಏನಾದ್ರೂ ಸರಿ ಅಪ್ಪ ಮತ್ತು ಮಗನನ್ನು ಒಂದು ಮಾಡಿ ಎಂದು ವೀಕ್ಷಕರು ನಿರ್ದೇಶಕರಿಗೆ ಮನವಿ ಮಾಡಿಕೊಳ್ತನೇ ಇದ್ದರು. ಆ ದಿನ ಕೂಡ ಬಂದೇ ಬಿಟ್ಟಿದೆ. ನಕಲಿ ಅಪ್ಪನಾಗಿ ಶಾಲೆಗೆ ಹೋದ ಆ ಬಾಲಕ ಆಕಾಶ್ನೇ ತನ್ನ ಸ್ವಂತ ಮಗ ಎನ್ನುವುದು ಗೌತಮ್‌ಗೆ ತಿಳಿದಿದೆ. ಆದರೆ ಬಾಲಕನಿಗಿನ್ನೂ ಇದರ ಅರಿವಿಲ್ಲ.
27
ಭೂಮಿಕಾಳ ಮೇಲೆ ಜನರಿಗೆ ಸಿಟ್ಟು
ಗೌತಮ್ ಭೂಮಿಕಾ ಮತ್ತು ಮಗನಿಗಾಗಿ ಪಡ್ತಿರೋ ಸಂಕಟವನ್ನು ವೀಕ್ಷಕರಿಂದ ನೋಡಲಾಗ್ತಿಲ್ಲ. ಭೂಮಿ ಮಿಸ್ಸು ಎಂದು ಖುಷಿಯಿಂದ ಹೇಳ್ತಿದ್ದವರೇ ಇದೀಗ ಭೂಮಿಕಾ ಕಂಡರೆ ಉರಿದುಕೊಳ್ಳುತ್ತಿದ್ದಾರೆ. ಇವಳದ್ದು ಅತಿಯಾಯ್ತು ಎನ್ನುತ್ತಿದ್ದಾರೆ. ಅಷ್ಟಕ್ಕೂ ಇವಳ ಆರೋಗ್ಯ ಕಾಪಾಡುವುದಕ್ಕಾಗಿಯೇ ಗೌತಮ್ ಕಿಡ್ನ್ಯಾಪ್ ಆಗಿರೋ ಮಗಳ ಸುದ್ದಿ ಹೇಳಿರಲಿಲ್ಲ. ಅಷ್ಟೂ ಗೊತ್ತಾಗಲ್ವಾ ಎಂದೆಲ್ಲಾ ಭೂಮಿಕಾಳನ್ನು ಬೈದುಕೊಳ್ತಿದ್ದಾರೆ.
37
ಸುಳ್ಳು ಮುಚ್ಚಿಟ್ಟರೆ...
ಇದೊಂದು ಸೀರಿಯಲ್, ಕಥೆ ಮುಂದಕ್ಕೆ ಹೋಗಬೇಕಾದರೆ ಇದೆಲ್ಲಾ ಅನಿವಾರ್ಯ ಎನ್ನುವುದು ತಿಳಿದರೂ, ಅಸಲಿ ಜೀವನದಲ್ಲಿಯೂ ಹೀಗೆಯೇ ಆಗಬಾರದೆಂದೇನೂ ಇಲ್ಲ. ತನ್ನ ಪತಿ ಇಷ್ಟು ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದು ಕೆಲವು ಸೂಕ್ಷ್ಮ ಮನಸ್ಸಿನ ಹೆಣ್ಣುಮಕ್ಕಳ ಮನಸ್ಸಿನ ಮೇಲೆ ಅಗಾಧ ಪ್ರಭಾವ ಬೀರಿ, ಅದೇ ದೊಡ್ಡದಾಗುತ್ತದೆ ಎನ್ನುವುದು ಕೂಡ ಸುಳ್ಳಲ್ಲ.
ಅದೇನೇ ಇದ್ದರೂ ಇದೀಗ ಗೌತಮ್‌ಗೆ ಮಗ ಸಿಕ್ಕನಲ್ಲ ಎನ್ನುವ ಖುಷಿ ಅಷ್ಟೆ. ಭೂಮಿಕಾ ಮನಸ್ಸನ್ನು ಪರಿವರ್ತಿಸಲು ಮಲ್ಲಿ ಕೂಡ ಪ್ರಯತ್ನ ಮಾಡ್ತಿರೋ ಕಾರಣದಿಂದ ಅವಳ ಮನಸ್ಸು ಕೂಡ ಬದಲಾಗಬಹುದು. ಆದರೆ ಇದರ ನಡುವೆಯೇ ಇದೀಗ ಭಾರಿ ಟ್ವಿಸ್ಟ್ ಸಿಕ್ಕಿದೆ.
57
ಮಗನಿಗೆ ಗೌತಮ್ ಗಿಫ್ಟ್
ಅದೇನೆಂದರೆ, ಆಕಾಶ್ನ ಹುಟ್ಟುಹಬ್ಬದ ಆಚರಣೆ ನಡೆಯುತ್ತಿದೆ. ಭೂಮಿಕಾ ಮತ್ತು ಮಲ್ಲಿ ಮಗನ ಸ್ನೇಹಿತರ ಜೊತೆ ವಿಜ್ರಂಭಣೆಯಿಂದ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅಷ್ಟಕ್ಕೂ ತನ್ನ ಮಗನ ಹುಟ್ಟುಹಬ್ಬದಂದು ಅಪ್ಪ ಬರದೇ ಇರಲು ಸಾಧ್ಯನಾ? ಮಗನಿಗೆ ಚಾಕಲೇಟ್ ತಂದು ಕೊಟ್ಟು ಪ್ರೀತಿಯ ಅಪ್ಪುಗೆ ನೀಡಿದ್ದಾನೆ ಗೌತಮ್.
67
ಭೂಮಿಕಾ ಪ್ರಾಣಕ್ಕೆ ಸಂಚಕಾರ
ಆದರೆ ಅದೇಇನ್ನೊಂದೆಡೆ, ಭೂಮಿಕಾ ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆ ಇದೆ. ಅದಕ್ಕೆ ಕಾರಣ, ಎಂಎಲ್ಎ ಮಗ ಶಾಲೆಯಲ್ಲಿ ಸ್ಮೋಕ್ ಮಾಡುತ್ತಿದ್ದ ಕಾರಣಕ್ಕೆ, ಅಪ್ಪನನ್ನು ಕರೆಸಿ ಬುದ್ಧಿ ಹೇಳಿಸಿದ್ದಳು. ಇದು ಎಂಎಲ್ಎ ಕೋಪಕ್ಕೆ ಕಾರಣವಾಗಿದೆ. ತನ್ನದಲ್ಲದ ತಪ್ಪಿಗೆ ಭೂಮಿಕಾಳು ಈಗ ಕ್ಷಮೆ ಕೋರಿ ಪತ್ರ ಬರೆದುಕೊಡಬೇಕಿದೆ. ಆದರೆ ಸ್ವಾಭಿಮಾನಿ ಭೂಮಿಕಾ ಹಾಗೆ ಮಾಡಲು ಒಪ್ಪುತ್ತಿಲ್ಲ.
77
ಕ್ಷಮೆ ಕೋರಲು ಒಪ್ಪದ ಭೂಮಿಕಾ
ಬೇರೆ ಟೀಚರ್ಸ್ ಹೇಳಿದರೂ ಆಕೆ ಅದನ್ನು ಒಪ್ಪಲಿಲ್ಲ. ಇದೇ ಕಾರಣಕ್ಕೆ ಈಗ ಆತನಿಂದ ಭೂಮಿಕಾ ಪ್ರಾಣಕ್ಕೆ ಅಪಾಯ ಇದೆ ಎನ್ನುವುದಂತೂ ಸುಳ್ಳಲ್ಲ. ರಾಜಕಾರಣಿಗಳು ಎಂದರೆ ಅಷ್ಟು ಸುಲಭ ಅಲ್ಲವಲ್ಲ! ಆತ ಇನ್ನೇನು ಮಾಡ್ತಾನೋ ಎನ್ನುವ ಭಯ ವೀಕ್ಷಕರಿಗೆ. ಆದರೆ ಗೌತಮ್ ಹೋಗಿ ಭೂಮಿಕಾಳನ್ನು ಕಾಪಾಡ್ತಾನಾ? ಇಬ್ಬರೂ ಒಂದಾಗ್ತಾರಾ ನೋಡಬೇಕಿದೆ.