'ಬಿಗ್ ಬಾಸ್ ಕನ್ನಡ ಸೀಸನ್ 7' ಸ್ಪರ್ಧಿ ಕಿಶನ್ ಬಿಳಗಲಿ ಹಾಗೂ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಸಂಯುಕ್ತಾ ಹೆಗಡೆ ಜೊತೆ ಡ್ಯಾನ್ಸ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಜಂಗ್ಲಿ ಚಿತ್ರದ ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ ಎನ್ನುವ ಹಾಡಿಗೆ ಕಿಶನ್ ಹಾಗೂ ಸಂಯುಕ್ತಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಇವರಿಬ್ಬರು ಬಿಳಿ ಬಣ್ಣದ ಡ್ರೆಸ್ ಧರಿಸಿ ಸಖತ್ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
26
ಸಂಯುಕ್ತಾ ಹೆಗಡೆ ಹಾಗೂ ಕಿಶನ್ ಪರಸ್ಪರ ಠಕ್ಕರ್ ಕೊಡುವ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದು, ನೋಡುಗರ ಎದೆ ಬಡಿತ ಜಲ್ ಎನ್ನುವ ಹಾಗೆ ಕುಣಿದಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
36
ಈ ಡ್ಯಾನ್ಸ್ ವಿಡಿಯೋಗೆ ಕಾವ್ಯಾ ಶೆಟ್ಟಿ, ನಿಧಿ ಸುಬ್ಬಯ್ಯ, ಪನ್ನಗಾಭರಣ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಶನ್ ಬಿಳಗಲಿ ಅವರು ಈ ಹಿಂದೆ ದೀಪಿಕಾ ದಾಸ್, ನಮ್ರತಾ ಗೌಡ ಸೇರಿದಂತೆ ಕೆಲ ನಟಿಯರ ಜೊತೆ ಕೂಡ ಡ್ಯಾನ್ಸ್ ಮಾಡಿದ್ದರು.
46
ಈ ಡ್ಯಾನ್ಸ್ ನೋಡಿದ ನೆಟ್ಟಿಗರು, ಇದು ಯಾವ ತರಹದ ಡ್ಯಾನ್ಸ್ ಕಿಶನ್, ಡಾನ್ಸ್ ಮಾಡಿದ್ರಿ ಒಕೆ ಸಂಯುಕ್ತಾ ಆದ್ರೆ ಮೈ ತುಂಬಾ ಬಟ್ಟೆ ಹಾಕಮ್ಮ, ಕಿಶನ್ ಏನೋ ನಿನ್ನ ಅವಸ್ಥೆ ಸೇರಿದಂತೆ ತರೇಹವಾರಿ ಕಾಮೆಂಟ್ ಹಾಕಿದ್ದಾರೆ.
56
ಇತ್ತೀಚೆಗಷ್ಟೇ ನಟಿ ಸಂಯುಕ್ತಾ ಹೆಗಡೆ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ಭೇಟಿ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು.
66
ಸದ್ಯ ಕಿಶನ್ ಬಿಳಗಲಿ ಅವರು ಡ್ಯಾನ್ಸ್ ಜೊತೆಗೆ ಹೋಟೆಲ್ ಉದ್ಯಮ ಕೂಡ ನಡೆಸುತ್ತಿದ್ದಾರೆ. ಅಂದಹಾಗೆ ಸಂಯುಕ್ತಾ ಹೆಗಡೆ ಅವರು 'ಕ್ರೀಂ' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ರಿಲೀಸ್ ಆಗಬೇಕಿದೆ.