ಬಾಲಿವುಡ್‌ನಲ್ಲಿ ನೋ ಕಿಸ್ ಪಾಲಿಸಿಯನ್ನು ಇಂದಿಗೂ ನಡೆಸಿಕೊಂಡು ಬಂದಿರುವ ಕೆಲವೇ ಕೆಲವು ನಟಿಯರಲ್ಲಿ ಹಿರಿಯ ನಟಿ ರವೀನಾ ಟಂಡನ್ ಕೂಡ ಒಬ್ಬರು.
ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ರವೀನಾ ಟಂಡನ್ ಅವರಿಗೆ ಇತ್ತೀಚೆಗೆ ಕನ್ನಡದ ಕೆಜಿಎಫ್ ಚಿತ್ರದಲ್ಲಿ ನಟಿಸಿದ ಪಾತ್ರ ದೊಡ್ಡ ಮಟ್ಟದ ಮನ್ನಣೆ ತಂದುಕೊಟ್ಟಿತು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರವೀನಾ ಟಂಡನ್ ತಮ್ಮ ಚಿತ್ರ ಜೀವನದ ಆರಂಭದಲ್ಲಿ ಆದ ಅಹಿತಕರ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಸಿನಿಮಾವೊಂದರಲ್ಲಿ ನಟಿಸುವ ವೇಳೆ ಅಚಾನಕ್ ಆಗಿ ಹೀರೋನ ತುಟಿ ನನ್ನ ತುಟಿಗೆ ತಾಕಿತ್ತು. ಅಚಾನಕ್ ಆಗಿದ್ದ ಕಿಸ್ ಅದಾಗಿತ್ತು ಎಂದು ರವೀನಾ ಹೇಳಿದ್ದಾರೆ.
ಆದರೆ, ಆ ಕಿಸ್ ಎಷ್ಟು ಕೆಟ್ಟದಾಗಿತ್ತೆಂದರೆ ಅದನ್ನೇ ಪದೇ ಪದೇ ನೆನಪಿಸಿಕೊಂಡು ವಾಂತಿ ಕೂಡ ಮಾಡಿಕೊಂಡಿದ್ದೆ ಎಂದು ರವೀನಾ ಹೇಳಿದ್ದಾರೆ.
ಆದರೆ, ಅದು ಯಾವ ಸಿನಿಮಾ, ಹೀರೋ ಯಾರು ಎನ್ನುವ ಯಾವ ಮಾಹಿತಿಯನ್ನೂ ರವೀನಾ ಬಿಟ್ಟುಕೊಟ್ಟಿಲ್ಲ. ಅದು ಅಚಾನಕ್ ಆಗಿರುವ ಘಟನೆ ಎಂದು ತಿಳಿಸಿದ್ದಾರೆ.
ನಟಿಯಾಗಿ ಆರಂಭಿಕ ದಿನಗಳಿಂದಲೂ ನೋ ಕಿಸ್ಸಿಂಗ್ ಪಾಲಿಸಿಯನ್ನು ರವೀನಾ ಪಾಲಿಸಿಕೊಂಡು ಬಂದಿದ್ದಾರೆ. ಆ ದಿನಗಳಲ್ಲಿ ಸ್ಕ್ರೀನ್ ಮೇಲೆ ಕಿಸ್ ಮಾಡುವ ಒಪ್ಪಂದಗಳು ಇರುತ್ತಿರಲಿಲ್ಲ. ನಾನು ಎಂದೂ ಮಾಡಿಲ್ಲ. ನನಗೆ ಅದು ಕಂಫರ್ಟಬಲ್ ಆಗಿರುತ್ತಿರಲಿಲ್ಲ ಎಂದಿದ್ದಾರೆ.
ಈಗ ರವೀನಾ ಟಂಡನ್ ಅವರ ಪುತ್ರಿ ರಾಶಾ ಥಾಡಾನಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿದ್ದಾರೆ. ಇನ್ನು ಮಗಳು ಆನ್‌ಸ್ಕ್ರೀನ್‌ನಲ್ಲಿ ಕಿಸ್ ಸೀನ್ ಮಾಡಲು ಕಂಫರ್ಟಬಲ್ ಅನಿಸದರೆ ನನಗೆನೂ ತೊಂದರೆ ಇಲ್ಲ ಎಂದಿದ್ದಾರೆ.
ಅದು ಆಕೆಯ ನಿರ್ಧಾರ. ಹೀರೋ ಜೊತೆ ಕಿಸ್ಸಿಂಗ್ ಸೀನ್ ಮಾಡಲು ಆಕೆಗೆ ಕಂಫರ್ಟಬಲ್ ಅನಿಸಿದರೆ, ನಾನೇಕೆ ತಡೆಯಲಿ. ಅವಳು ಮಾಡಲು ಬಯಸದ ಯಾವುದನ್ನಾದರೂ ಮಾಡಲು ಅವಳನ್ನು ಒತ್ತಾಯಿಸುವ ಅಧಿಕಾರ ಯಾರಿಗೂ ಇರಬಾರದು ಎಂದು ತಿಳಿಸಿದ್ದಾರೆ.
ತಮ್ಮ ಸಿನಿ ಜೀವನದ ಕಹಿ ಘಟನೆಯ ಬಗ್ಗೆ ವಿವರಿಸಿದ ರವೀನಾ, ಇದು ಕೆಲ ವರ್ಷಗಳ ಹಿಂದಿನ ಮಾತು, ಹೀರೋ ಜೊತೆ ಕಷ್ಟದ ಸೀನ್‌ನಲ್ಲಿ ಭಾಗಿಯಾಗಿದ್ದೆ. ನಮ್ಮಿಬ್ಬರ ಮುಖಗಳು ಬಹಳ ಹತ್ತಿರ ಇದ್ದವು.
ಸುಮ್ಮನೆ ಆಕೆ ಕಡೆ ತಿರುಗಿ ನೋಡುವಾಗ, ಆತನ ತುಟಿ ನನ್ನ ತುಟಿಗೆ ತಾಕಿ ಬಿಟ್ಟಿತು. ನನಗೆ ಒಂದು ರೀತಿ ಅಲ್ಲಿಯೇ ಕಸಿವಿಸಿ ಆಗಿತ್ತು ಎಂದು ರವೀನಾ ಹೇಳಿದ್ದಾರೆ.
ಇದು ಅಚಾನಕ್ ಆಗಿದ್ದ ಘಟನೆ. ಸಿನಿಮಾಗೂ ಕೂಡ ಇದು ಅಗತ್ಯವಿರಲಿಲ್ಲ. ಕಣ್ಣು ಮಿಟುಕಿಸುವಷ್ಟರಲ್ಲಿ ಕಿಸ್ ಆಗಿ ಹೋಗಿತ್ತು ಎಂದು 48 ವರ್ಷದ ನಟಿ ಹೆಳಿದ್ದಾರೆ.
ಸೀದಾ ನನ್ನ ರೂಮ್‌ಗೆ ಓಡಿ ಹೋಗಿದ್ದೆ. ಎಲ್ಲವನ್ನೂ ಎಸೆದುಬಿಟ್ಟಿದ್ದೆ. ನನಗೆ ಅದು ಕಂಫರ್ಟಬಲ್ ಅನಿಸಿರಲಿಲ್ಲ. ಶೂಟಿಂಗ್ ಮುಗಿದ ಬಳಿಕ ಮತ್ತೊಮ್ಮೆ ನನಗೆ ವಾಕರಿಕೆ ಬರುವಂತೆ ಆಗುತ್ತಿತ್ತು ಎಂದಿದ್ದಾರೆ.
ಆ ಸೀನ್ ನೆನೆಸಿಕೊಳ್ಳಲು ಕಷ್ಟವಾಗುತ್ತಿತ್ತು. 'ಎಷ್ಟು ಉಗಿದರೂ ಕಿಸ್ ನೆನಪಾಗುತ್ತಲೇ ಇತ್ತು' ಎಂದು ರವೀನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅದರಲ್ಲೂ ನನ್ನ ಮನಸ್ಸು, ನಿನ್ನ ಹಲ್ಲುಗಳನ್ನು ಉಜ್ಜು, ನಿನ್ನ ಬಾಯನ್ನು ನೂರು ಸಾರಿ ವಾಶ್ ಮಾಡು ಎಂದಂತೆ ಕೇಳುತ್ತಿತ್ತು ಎಂದು ರವೀನಾ ನೆನಪಿಸಿಕೊಂಡಿದ್ದಾರೆ.
ಇನ್ನು ರವೀನಾ ಟಂಡನ್ ಕೊನೆಯ ಬಾರಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು, ಒನ್ ಫ್ರೈಡೇ ನೈಟ್ ಚಿತ್ರದಲ್ಲಿ. ಗುಡ್‌ಚಡಿ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.