ಬಿಗ್​ಬಾಸ್ 13​ನಲ್ಲಿ ಅರುಣ್​ ಹೆಸ್ರು ನೋಡಿ ನಂಗೂ ಆಶ್ಚರ್ಯ ಆಯ್ತು: ನಟಿ ರಜಿನಿ ಏನಂದ್ರು ಕೇಳಿ

Published : Jun 18, 2026, 06:06 PM IST

ನಟಿ ರಜಿನಿ ಅವರ ಪತಿ ಅರುಣ್ ಗೌಡ ಬಿಗ್‌ಬಾಸ್‌ಗೆ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿದ ರಜಿನಿ, ತನಗೂ ಈ ಸುದ್ದಿ ಕೇಳಿ ಅಚ್ಚರಿಯಾಯಿತಾದರೂ, ಅವರು ಬಿಗ್‌ಬಾಸ್‌ಗೆ ಹೋಗಬೇಕೆಂಬುದು ನನ್ನ ಇಚ್ಛೆ ಎಂದು ಹೇಳಿದ್ದಾರೆ. ಇದರಿಂದ ಅವರು ಜನರೊಂದಿಗೆ ಬೆರೆಯಲು ಕಲಿಯುತ್ತಾರೆ ಎಂದಿದ್ದಾರೆ.

PREV
16
ಬಿಗ್​ಬಾಸ್​ ವಿಶೇಷತೆ

ಹಿಂದೆಂದಿನ ಸೀಸನ್​ಗಿಂತಲೂ ಬಿಗ್​ಬಾಸ್​ನ 13ನೇ ಸೀಸನ್​ ಬಹಳ ಸ್ಪೆಷಲ್​ ಆಗಿದೆ. ಅದಕ್ಕೆ ಕಾರಣ, ಈ ಸಲ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿರೋದು. ಅದಕ್ಕಾಗಿಯೇ ಕಲರ್ಸ್​ ವಾಹಿನಿ ಇದಾಗಲೇ ಹಲವಾರು ಪ್ರೊಮೋಗಳನ್ನು ಬಿಡುತ್ತಲೇ ಇದ್ದು, ಇದಾಗಲೇ ಸಹಸ್ರಾರು ಮಂದಿ ಆಡಿಷನ್​ನಲ್ಲಿ ಭಾಗಿಯಾಗಿದ್ದಾರೆ.

26
ಯಾರು ಹೋಗ್ತಾರೆ?

ಇದರ ನಡುವೆಯೇ ಹಲವರ ಹೆಸರು ಇದರಲ್ಲಿ ಕೇಳಿಬರುತ್ತಿದೆ. ಪ್ರತಿಬಾರಿಯಂತೆಯೇ ಈ ಬಾರಿಯೂ ಇವರು ಹೋಗ್ತಾರೆ, ಅವರು ಹೋಗ್ತಾರೆ ಎಂದೇ ಹೇಳಲಾಗುತ್ತಿದ್ದು, ಅಂಥ ಸೆಲೆಬ್ರಿಟಿಗಳನ್ನು ಮಾಧ್ಯಮಗಳು ಮಾತನಾಡಿಸುವುವದು ಇದೆ.

36
ನಟಿ ರಜಿನಿ ಮಾತು

ಅದೇ ರೀತಿ, ಇದೀಗ 'ಅಮೃತವರ್ಷಿಣಿ', ಹಿಟ್ಲರ್‌ ಕಲ್ಯಾಣ, ‘ನೀ ಇರಲು ಜೊತೆಯಲಿ’ ಸೇರಿ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿ ಮನೆಮಾತಾಗಿರೋ ನಟಿ ರಜಿನಿ ಅವರ ಪತಿ ಜಿಮ್‌ ಟ್ರೈನರ್‌ ಅರುಣ್‌ ಗೌಡ ಅವರು ಈ ಬಾರಿಯ ಸೀಸನ್​ನಲ್ಲಿ ಹೋಗಬಹುದು ಎಂದೇ ಕೆಲವರು ಅಂದುಕೊಂಡಿದ್ದಾರೆ.

46
ನನಗೂ ಆಶ್ಚರ್ಯ ಆಯ್ತು

ಈ ಬಗ್ಗೆ ನಟಿ ರಜಿನಿ ಫೋಕಸ್​ ಕನ್ನಡ ಚಾನೆಲ್​ ಜೊತೆ ಮಾತನಾಡಿದ್ದಾರೆ. ನನಗೂ ಈ ವಿಷ್ಯ ಕೇಳಿ ಅಚ್ಚರಿ ಆಯ್ತು. ವೈರಲ್​ ಆಗ್ತಿರೋ ಸುದ್ದಿ ಕೇಳಿ ನಾನೂ ಅರುಣ್​ಗೆ ನೀನು ಹೋಗ್ತಿಯಾ ಎಂದು ಕೇಳಿದೆ. ಆದರೆ ಆತ ಇದಕ್ಕೆಲ್ಲಾ ಒಪ್ಪುವುದಿಲ್ಲ. ಆತ ಹೋದರೆ ನನಗೆ ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.

56
ನನ್ನ ಇಚ್ಛೆ ಕೂಡ

ಅರುಣ್​ ಜನರ ಜೊತೆ ಬೆರೆಯುವುದು ಕಡಿಮೆ. ಆದ್ದರಿಂದ ಅವರನ್ನು ಬಿಗ್​ಬಾಸ್​ಗೆ ತಳ್ಳಿ ಸ್ವಲ್ಪ ಮಾತು ಕಲಿಸಬೇಕಿದೆ. ಹೋದ ಬಾರಿ ಮ್ಯೂಟಂಟ್​ ರಘು ಹೋಗಿದ್ರು. ಅದೇ ರೀತಿ ಬಾಲಿ ಬಿಲ್ಡರ್​ ಒಬ್ಬರು ಹೋದ್ರೆ ಅದಕ್ಕೂ ಪ್ರಚಾರ ಸಿಕ್ಕ ಹಾಗೆ ಆಗುತ್ತದೆ. ಅವನು ಹೋಗಬೇಕು ಎನ್ನೋದು ನನ್ನ ಇಚ್ಛೆ ಕೂಡ ಎಂದಿದ್ದಾರೆ ರಜಿನಿ.

66
ಮದುವೆಯಾದ ಜೋಡಿ

ಅಂದಹಾಗೆ ಈ ಜೋಡಿ, ಇಬ್ಬರೂ ಜೊತೆಯಾಗಿ ಹಲವು ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ನಾವಿಬ್ಬರು ಆ ರೀತಿ ಅಲ್ಲ, ಬರಿಯ ಸ್ನೇಹಿತರು ಎಂದು ಕೊನೆಯವರೆಗೂ ಮದುವೆಯ ಬಗ್ಗೆ ಮಾತನಾಡಲಿಲ್ಲ ರಜಿನಿ ಅಥವಾ ಅರುಣ್. ಈ ಜೋಡಿ ಬಗ್ಗೆ ಅವರ ಅಭಿಮಾನಿಗಳಿಗೆ ಅನುಮಾನ ಮೂಡಿದ್ದರೂ ಇಲ್ಲ ಇಲ್ಲ ಎನ್ನುತ್ತಲೇ ಕೊನೆಗೆ ಸಿಂಪಲ್‌ ಆಗಿ ಮದುವೆಯಾಗಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories