ಈರುಳ್ಳಿ ಬಣ್ಣದ ಡ್ರೆಸ್​ನಲ್ಲಿ ಹಲ್‌ಚಲ್‌ ಎಬ್ಬಿಸಿದ Pranitha Subhash: ಸೆಕ್ಸಿ ಮಮ್ಮಿ ಎಂದ ನೆಟ್ಟಿಗರು!

First Published | Sep 24, 2023, 9:26 AM IST

ಕನ್ನಡದ ನಟಿ ಪ್ರಣಿತಾ ಸುಭಾಷ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಈರುಳ್ಳಿ ಬಣ್ಣದ ಲೇಯರ್ಡ್ ಡ್ರೆಸ್​ನಲ್ಲಿ ಪ್ರಣಿತಾ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಕನ್ನಡ ಮಾತ್ರವಲ್ಲ, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲೂ ಛಾಪು ಮೂಡಿಸಿದ್ದಾರೆ. 30ರ ಹರೆಯದ ಪ್ರಣಿತಾ 2010ರಲ್ಲೇ ಸಿನಿಮಾ ಜಗತ್ತು ಪ್ರವೇಶಿಸಿದ್ದರು.

ಇದೀಗ ಈರುಳ್ಳಿ ಬಣ್ಣದ ಲೇಯರ್ಡ್ ಡ್ರೆಸ್​ನಲ್ಲಿ ಪ್ರಣಿತಾ ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಮದುವೆಯಾಗಿ ಮಗುವಾದ್ರೂ ನಟಿಯ ಗ್ಲಾಮರ್ ಮಾತ್ರ ಕಡಿಮೆ ಆಗಿಲ್ಲ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. 

Tap to resize

ಪ್ರಣಿತಾ ಫೋಟೋಗಳನ್ನು ನೋಡಿದ ನೆಟ್ಟಿಗರು ನಟಿಯ ಬ್ಯೂಟಿಗೆ ಬೋಲ್ಡ್ ಆಗಿದ್ದಾರೆ. ನಿಮ್ಮ ಫೋಟೋಗಳು ಮುದ್ದಾಗಿವೆ ಎಂದು ಕಮೆಂಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಇತ್ತೀಚೆಗಷ್ಟೇ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಸೈಮಾ 2023ರ ವೇದಿಕೆಯಲ್ಲಿ ಪ್ರಣಿತಾ ಮಿಂಚು ಹರಿಸಿದ್ದರು. ಇನ್ನು ಸೋಷಿಯಲ್​​ ಮೀಡಿಯಾದಲ್ಲಿ ಪ್ರಣಿತಾ ಸಖತ್​ ಆ್ಯಕ್ಟೀವ್​. 

ಪ್ರಣಿತಾ ಸುಭಾಷ್ ಎಷ್ಟೇ ಮಾಡರ್ನ್ ಆಗಿದ್ದರೂ ತನ್ನ ಮೂಲವನ್ನು ನೆನಪಿಸಿಕೊಳ್ಳುತ್ತಾರೆ. ತನಗೆ ಸಂಬಂಧಿಸಿದ ಯಾವುದೇ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. 

ನಟ ದರ್ಶನ್‌ ನಟನೆಯ ಪೋರ್ಕಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಜರ್ನಿ ಸ್ಟಾರ್ಟ್‌ ಮಾಡಿದ ನಟಿ ಪ್ರಣಿತಾ ಸುಭಾಷ್‌ ಸದ್ಯ ಭಾರತೀಯ ಸಿನಿರಂಗದಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ. 

ಪ್ರಣಿತಾ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿಗೆ ಮುದ್ದಾದ ಮಗು ಕೂಡ ಇದೆ. ಸದ್ಯ ಮಗುವಿನ ಲಾಲನೆ-ಪಾಲನೆಯಲ್ಲಿ ನಟಿ ಪ್ರಣಿತಾ ಬ್ಯುಸಿ ಆಗಿದ್ದು, ಮಗುವಿನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

Latest Videos

click me!