ಖಾನ್ ಜೊತೆ ಬ್ರೇಕಪ್ ಸುದ್ದಿ ನಡುವೆ ನಟಿ ಪಲಕ್ ತಿವಾರಿ ಆಸ್ತಿ ಮೌಲ್ಯ ಇಷ್ಟು ಹೆಚ್ಚಾಯ್ತಾ?

Published : Oct 30, 2026, 03:29 PM IST

ಇಬ್ರಾಹಿಂ ಅಲಿ ಖಾನ್ ಜೊತೆಗಿನ ಬ್ರೇಕಪ್ ಸುದ್ದಿಯ ನಂತರ ಪಲಕ್ ತಿವಾರಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಜರ್ನಿ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಹಿಡಿದು ಈ ನಟಿಯ ವೃತ್ತಿಜೀವನ, ಕುಟುಂಬದ ಹಿನ್ನೆಲೆ ಮತ್ತು ಅಂದಾಜು ನೆಟ್ ವರ್ತ್ ಇಲ್ಲಿದೆ ನೋಡಿ.

PREV
13
ಅಭಿಮಾನಿಗಳಲ್ಲಿ ಕುತೂಹಲ

ಪಲಕ್ ತಿವಾರಿ ಬಾಲಿವುಡ್‌ನ ಯುವ ಪೀಳಿಗೆಯಲ್ಲಿ ಪ್ರಸಿದ್ಧ ಮುಖವಾಗಿ ಹೊರಹೊಮ್ಮುತ್ತಿದ್ದಾರೆ. ಟಿವಿ ನಟಿ ಶ್ವೇತಾ ತಿವಾರಿ ಅವರ ಮಗಳಾಗಿದ್ದರೂ, ಪಲಕ್ ಅವರ, ಮ್ಯೂಸಿಕ್ ವೀಡಿಯೋಗಳು ಮತ್ತು ಫ್ಯಾಷನ್ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡಿದ್ದಾರೆ. ಮೂರು ವರ್ಷಗಳ ಡೇಟಿಂಗ್ ನಂತರ ಇಬ್ರಾಹಿಂ ಅಲಿ ಖಾನ್ ಮತ್ತು ಪಲಕ್ ಬೇರೆಯಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಅಕ್ಟೋಬರ್ 30, 2026 ರ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಈ ಬ್ರೇಕಪ್ ಪರಸ್ಪರ ಸಮ್ಮತಿಯಿಂದ ನಡೆದಿದೆ. ಇತ್ತೀಚೆಗಷ್ಟೇ ರಣಥಂಬೋರ್ ಪ್ರವಾಸದಲ್ಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಬ್ರೇಕಪ್ ಬಗ್ಗೆ ಇಬ್ಬರೂ ಅಧಿಕೃತವಾಗಿ ಹೇಳಿಲ್ಲವಾದರೂ, ಪಲಕ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

23
ಶ್ವೇತಾ ತಿವಾರಿ ಮಗಳು
ಅಕ್ಟೋಬರ್ 8, 2000 ರಂದು ಮುಂಬೈನಲ್ಲಿ ಜನಿಸಿದ ಪಲಕ್ ತಿವಾರಿಗೆ ಈಗ 26 ವರ್ಷ. ಪ್ರಸಿದ್ಧ ಕಿರುತೆರೆ ನಟಿ ಶ್ವೇತಾ ತಿವಾರಿ ಮತ್ತು ನಟ ರಾಜಾ ಚೌಧರಿ ಅವರ ಮಗಳಾದ ಪಲಕ್, ಹೆತ್ತವರ ಬೇರ್ಪಡೆಯ ನಂತರ ತಾಯಿಯ ಬಳಿಯೇ ಬೆಳೆದರು. ಚಿಕ್ಕಂದಿನಿಂದಲೇ ಗ್ಲಾಮರ್ ಜಗತ್ತನ್ನು ಹತ್ತಿರದಿಂದ ನೋಡಿದ್ದ ಪಲಕ್, ನಟನೆ ಮತ್ತು ಫ್ಯಾಷನ್ ಕಡೆಗೆ ಆಕರ್ಷಿತರಾದರು. ಮುಂಬೈನ ಮಿಥಿಬಾಯಿ ಕಾಲೇಜಿನಲ್ಲಿ ಸೈಕಾಲಜಿಯಲ್ಲಿ ಬಿಎ ಪದವಿ ಮುಗಿಸಿರುವ ಪಲಕ್, 10ನೇ ತರಗತಿಯಲ್ಲಿ ಶೇ.83 ಅಂಕ ಗಳಿಸಿದ್ದರು. ಶ್ವೇತಾ ತಿವಾರಿ ಮಗಳಾಗಿದ್ದರೂ, ಪಲಕ್ ಸ್ವಂತ ಬಲದಿಂದ ಬೆಳೆಯಲು ಶ್ರಮಿಸುತ್ತಿದ್ದಾರೆ.
33
ಕೆರಿಯರ್ ಮೇಲೆ ಗಮನ
2021 ರಲ್ಲಿ ಪಂಜಾಬಿ ಗಾಯಕ ಹಾರ್ಡಿ ಸಂಧು ಜೊತೆಗಿನ 'ಬೆಜಲಿ ಬೆಜಲಿ' ಮ್ಯೂಸಿಕ್ ವೀಡಿಯೋ ಮೂಲಕ ಪಲಕ್ ಭಾರಿ ಜನಪ್ರಿಯತೆ ಗಳಿಸಿದರು. ನಂತರ 2023 ರಲ್ಲಿ ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 2025 ರಲ್ಲಿ 'ದಿ ಭೂತ್ನಿ' ಸಿನಿಮಾದಲ್ಲೂ ನಟಿಸಿದರು. ನಟನೆ ಹೊರತಾಗಿ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್, ಮಾಡೆಲಿಂಗ್ ಮತ್ತು ಸೋಶಿಯಲ್ ಮೀಡಿಯಾ ಪ್ರಚಾರಗಳ ಮೂಲಕ ಪಲಕ್ ಆದಾಯ ಗಳಿಸುತ್ತಾರೆ. ವರದಿಗಳ ಪ್ರಕಾರ, ಇವರ ಒಟ್ಟು ಆಸ್ತಿ ಮೌಲ್ಯ ಅಂದಾಜು 3 ಕೋಟಿಯಿಂದ 5 ಕೋಟಿ ರೂಪಾಯಿ. ಸದ್ಯ ಇಬ್ರಾಹಿಂ ಅಲಿ ಖಾನ್ ಜೊತೆಗಿನ 3 ವರ್ಷಗಳ ಸಂಬಂಧಕ್ಕೆ ತೆರೆ ಬಿದ್ದಿದ್ದು, ಇಬ್ಬರೂ ತಮ್ಮ ಕೆರಿಯರ್ ಮೇಲೆ ಗಮನ ಹರಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories