ಹಸಿರು ಸೀರೆಯುಟ್ಟು ಜಾತ್ರೆಲೂ, ಸಂತೇಲೂ, ನೀ ಕೈಯ್ಯ ಬಿಡದಿರು ಎಂದ Namratha Gowda: ಕನ್ಫ್ಯೂಸ್ ಆದ ಫ್ಯಾನ್ಸ್!

First Published | Sep 28, 2023, 1:30 AM IST

ನಾಗಿಣಿ-2 ಸಿರೀಯಲ್‌ ಮೂಲಕ ಎಲ್ಲರ ಮನೆಮಾತಾಗಿರುವ ನಮ್ರತಾ ಗೌಡ ಇತ್ತೀಚಿಗೆ ತಮ್ಮ ಫೋಟೋಶೂಟ್​ನಿಂದಲೇ ಸದ್ದು ಮಾಡ್ತಿದ್ದಾರೆ. ಇದೀಗ ನಮ್ರತಾ ಗೌಡ ಹಸಿರು ಸೀರೆಯಲ್ಲಿ ಮಿಂಚುತ್ತಿದ್ದಾರೆ. 

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಗ್ರೀನ್​​ ಕಲರ್ ಸೀರೆಯುಟ್ಟ ನಟಿ ನಮ್ರತಾ ಗೌಡ​ ಮಿಂಚುತ್ತಿದ್ದು, ಸಖತ್ ಬ್ಯೂಟಿಫುಲ್​ ಆಗಿ ಕಾಣ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಮ್ರತಾ ಗೌಡ, ಜಾತ್ರೆಲೂ, ಸಂತೇಲೂ, ನೀ ಕೈಯ್ಯ ಬಿಡದಿರು. ಆಗಾಗ ಕಣ್ಣಲ್ಲಿ, ಸಂದೇಶ ಕೊಡುತಿರು ಎಂದು ಹಾಡಿನ ಸಾಲುಗಳನ್ನು ಬರೆದುಕೊಂಡಿದ್ದಾರೆ.

Tap to resize

ಜೊತೆಗೆ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡಿರುವ ನಟಿ ನಮ್ರತಾ ಗೌಡಗೆ ಡಾ.ರಾಜ್​ಕುಮಾರ್ ಅವರ ಹಾಡು ನೆನಪಾಗಿದ್ದು, ಸಂಜೆ ತಂಗಾಳಿ ತಂಪಾಗಿ ಬೀಸಿ, ಹೂವ ಕಂಪನ್ನು ಹಾದಿಗೆ ಹಾಸಿ, ತಂದಿದೆ ಹಿತವ ನಮಗಾಗಿ ಎಂದು ಬರೆದುಕೊಂಡಿದ್ದಾರೆ. 

ವಿಶೇಷವಾಗಿ ಸಿಂಪಲ್ ಸೀರೆ, ಕಡಿಮೆ ಮೇಕಪ್​ನಲ್ಲೂ ನಾಗಿಣಿ ಸುಂದರವಾಗಿ ಕಾಣ್ತಿದ್ದಾರೆ. ಫೋಟೋ ನೋಡಿದ ನಮ್ರತಾ ಗೌಡ ಫ್ಯಾನ್ಸ್​  ಯಾರಿಗಾಗಿ ಈ ಹಾಡು, ಈ ಲುಕ್ ಎಂದು ಕಾಮೆಂಟಿಸಿದ್ದಾರೆ.

ನಾಗಿಣಿ-2 ಸಿರೀಯಲ್‌ ಮೂಲಕ ಎಲ್ಲರ ಮನೆಮಾತಾಗಿರುವ ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಯಾವಾಗಲೂ ವಿಭಿನ್ನ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ.

ಈ ಹಿಂದೆಯೂ ನಟಿ ನಮ್ರತಾ ಗೌಡ ಸಾಂಪ್ರದಾಯಿಕ ಉಡುಪಿನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಮಾಡ್ರನ್, ಟ್ರಡಿಷನಲ್ ಎರಡೂ ಬಟ್ಟೆಗಳಲ್ಲಿ ಅದ್ಭುತವಾಗಿ ಕಾಣುವ ನಮ್ರತಾ ಗೌಡ, ಈ ಹಿಂದೆ ಬಾಲಿ ಪ್ರವಾಸದಲ್ಲಿದ್ದ ಅವರು ಟೂ ಪೀಸ್‌ನಲ್ಲಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿ ವೈರಲ್ ಆಗಿದ್ದರು. 

ಅವರ ಬೋಲ್ಡ್ ಫೋಟೋಗಳಿಗೆ ಹಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಅವರು ತಮ್ಮ ಫೋಟೋಗಳಿಗೆ ಕಾಮೆಂಟ್ ಮಾಡುವುದನ್ನು ನಿರ್ಬಂಧಿಸಿದ್ದರು. ನಮ್ರತಾ ಗೌಡ ಅವರು ಬಾಲ ಕಲಾವಿದೆಯಾಗಿ ಟಿವಿ ಪರದೆಗೆ ಕಾಲಿರಿಸಿದರು. 

Latest Videos

click me!