ಭಾರೀ ಸೀಕ್ರೆಟ್ ಹೊರಬಿತ್ತು! ರೋಬೋ ಶಂಕರ್ ಅವರ ಸಾವು ಕಾಲಿವುಡ್ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ನಡುವೆ ಅವರ ಆಪ್ತ ಸ್ನೇಹಿತರೊಬ್ಬರು ನೀಡಿರುವ ಮಾಹಿತಿ ಸಂಚಲನ ಸೃಷ್ಟಿಸಿದೆ.
ಸಿನಿಮಾದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲದಿಂದ ಬಂದ ರೋಬೋ ಶಂಕರ್, ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದರು. ವಿಜಯ್ ಟಿವಿಯ 'ಕಲಕ್ಕ ಪೋವದು ಯಾರು' ಎಂಬ ಕಾಮಿಡಿ ಶೋ ಅವರಿಗೆ ದೊಡ್ಡ ಬ್ರೇಕ್ ನೀಡಿತು. ನಂತರ ಹಲವು ಶೋಗಳಲ್ಲಿ ಭಾಗವಹಿಸಿ ಜನಪ್ರಿಯರಾದರು.
27
ರೋಬೋ ಪತ್ನಿ ಮತ್ತು ಮಗಳು:
ರೋಬೋ ಶಂಕರ್ ಪತ್ನಿ ಪ್ರಿಯಾಂಕಾ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಗಳು ಇಂದ್ರಜಾ, ವಿಜಯ್ ನಟನೆಯ 'ಬಿಗಿಲ್' ಚಿತ್ರದಲ್ಲಿ ಪಾಂಡಿಯಮ್ಮ ಪಾತ್ರದಲ್ಲಿ ಮಿಂಚಿದ್ದರು. ಬಳಿಕ ಕಾರ್ತಿಕ್ ಎಂಬುವವರನ್ನು ಮದುವೆಯಾಗಿ ನಟನೆಯಿಂದ ದೂರ ಉಳಿದಿದ್ದಾರೆ.
37
ಕುಡಿತದಿಂದ ಹಾಳಾದ ರೋಬೋ:
2023ರಲ್ಲಿ ಅತಿಯಾದ ಕುಡಿತದಿಂದ ರೋಬೋ ಶಂಕರ್ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ತೂಕ ಇಳಿದು ಸಾವಿನಂಚಿಗೆ ತಲುಪಿದ್ದ ಅವರನ್ನು ಕುಟುಂಬದವರೇ ಆರೈಕೆ ಮಾಡಿ ಕಾಪಾಡಿದ್ದರು. ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಅವರೇ ಹೇಳಿಕೊಂಡಿದ್ದರು.
ರೋಬೋ ಶಂಕರ್ ಚೇತರಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದರು. ಕಳೆದ ವಾರ ವಿಜಯ್ ಟಿವಿ ಕಾರ್ಯಕ್ರಮವೊಂದರಲ್ಲಿ ಪತ್ನಿ ಜೊತೆ ಭಾಗವಹಿಸಿದ್ದರು. ಅನಾರೋಗ್ಯದ ನಡುವೆಯೂ ವಿಶ್ರಾಂತಿ ಪಡೆಯದೆ ಸಿನಿಮಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
57
ಆಸ್ಪತ್ರೆಗೆ ದಾಖಲು:
ಕೆಲ ದಿನಗಳ ಹಿಂದೆ ಶೂಟಿಂಗ್ ವೇಳೆ ರೋಬೋ ಶಂಕರ್ ರಕ್ತ ವಾಂತಿ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಚಿಕಿತ್ಸೆ ವೇಳೆ ಅನ್ನನಾಳದಲ್ಲಿ ರಕ್ತಸ್ರಾವ ಮತ್ತು ಲಿವರ್ ಸಮಸ್ಯೆ ಇರುವುದು ಪತ್ತೆಯಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
67
ತಲೆ ಚಚ್ಚಿಕೊಂಡ ಪ್ರಿಯಾಂಕಾ:
ರೋಬೋ ಶಂಕರ್ ಬಗ್ಗೆ ಅವರ ಸ್ನೇಹಿತ ಕಾಧಲ್ ಸುಕುಮಾರ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, 'ಶಂಕರ್ ಕುಡಿತ ಬಿಡಿಸಲು ಪ್ರಿಯಾಂಕಾ ತುಂಬಾ ಪ್ರಯತ್ನಪಟ್ಟರು. ಆಕೆ ಊಟ ಬಿಟ್ಟರು, ಮಾತು ಬಿಟ್ಟರು, ತಲೆ ಚಚ್ಚಿಕೊಂಡರು. ಆದರೆ ಶಂಕರ್ ಕೇಳಲಿಲ್ಲ' ಎಂದಿದ್ದಾರೆ.
77
ಶ್ರೀಲಂಕಾ ಪಾರ್ಟಿ:
ರೋಬೋ ಶಂಕರ್‌ಗೆ ಶ್ರೀಲಂಕಾದಲ್ಲಿ ಹೆಚ್ಚು ಸ್ನೇಹಿತರಿದ್ದರು. ಶೂಟಿಂಗ್ ಇಲ್ಲದಿದ್ದರೂ ಅಲ್ಲಿಗೆ ಹೋಗುತ್ತಿದ್ದರು. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದಿದ್ದರು. ಅಲ್ಲಿ ನಡೆದ ಒಂದು ಪಾರ್ಟಿಯೇ ಅವರ ಸಾವಿಗೆ ಕಾರಣವಾಯಿತು ಎಂದು ಸ್ನೇಹಿತರು ಹೇಳಿದ್ದಾರೆ.