ವಿವಾದಕ್ಕೆ ಸಿಲುಕಿದ ರವಿತೇಜ ನಟನೆಯ ಇರುಮುಡಿ ಸಿನಿಮಾ; ಶಿಕ್ಷಕರಿಂದ ತೀವ್ರ ಆಕ್ಷೇಪ

Published : Aug 27, 2026, 10:24 AM IST

ರವಿತೇಜ ನಟನೆಯ 'ಇರುಮುಡಿ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ್ದರೂ, ಈಗ ವಿವಾದಕ್ಕೆ ಸಿಲುಕಿದೆ. ಚಿತ್ರದ ಬಗ್ಗೆ ಆಂಧ್ರಪ್ರದೇಶ ಶಿಕ್ಷಕರ ಒಕ್ಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಶಿವ ನಿರ್ವಾಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

PREV
15
ವಿವಾದದಲ್ಲಿ ಇರುಮುಡಿ ಸಿನಿಮಾ

ಟಾಲಿವುಡ್ ನಟ ರವಿತೇಜ ನಟನೆಯ 'ಇರುಮುಡಿ' ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಚಿತ್ರಮಂದಿರಗಳತ್ತ ವೀಕ್ಷಕರನ್ನು ಸೆಳೆಯುತ್ತಿದೆ. ಇದೀಗ ಸಿನಿಮಾದ ಕೆಲವು ದೃಶ್ಯಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಅಷ್ಟು ಮಾತ್ರವಲ್ಲದೇ ಸಿನಿಮಾದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂಬ ಆಗ್ರಹ ಸಹ ಕೇಳಿ ಬರುತ್ತಿದೆ. ಏನಿದು ಈ ವಿವಾದ ಎಂದು ನೋಡೋಣ ಬನ್ನಿ.

25
ಶಿಕ್ಷಕರಿಂದ ವಿರೋಧ ಯಾಕೆ?

ಆಂಧ್ರಪ್ರದೇಶ ಶಿಕ್ಷಕರ ಒಕ್ಕೂಟ (APTF) ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿದೆ. ಇರುಮುಡಿ ಸಿನಿಮಾದಲ್ಲಿ ಶಿಕ್ಷಕರನ್ನು ಮತ್ತು ಆಂಧ್ರಪ್ರದೇಶದ ಶಿಕ್ಷಣ ವ್ಯವಸ್ಥೆಯನ್ನು ಅವಮಾನಿಸುವ ಕೆಲಸ ಆಗಿದೆ ಎಂದು APTF ರಾಜ್ಯ ಅಧ್ಯಕ್ಷೆ ಮಂಜುಳಾ ಹೇಳಿದ್ದಾರೆ. ಆಂಧ್ರ ಪ್ರದೇಶದ ಸಿಲೇರು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಕೆಲಸ ಮಾಡುವ ಮಹಿಳಾ ಶಿಕ್ಷಕಿಯೊಬ್ಬರು ನಟಿಸಿದ್ದಾರೆ. ಆದ್ರೆ ಈ ಪಾತ್ರದ ಕಲ್ಪನೆಯನ್ನು ತೆರೆ ಮೇಲೆ ತಪ್ಪಾಗಿ ತೋರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

35
ಶಿಕ್ಷಕರ ಆಕ್ಷೇಪ ಏನು?

ಇರುಮುಡಿ ಸಿನಿಮಾದಲ್ಲಿ ಸಿಲೆರುವಿನಲ್ಲಿರುವ ನಿಜವಾದ ಶಾಲೆಯ ಹೆಸರು ತೋರಿಸಲಾಗಿದೆ. ಆಂಧ್ರಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಧರಿಸುವ ಸಮವಸ್ತ್ರವನ್ನೇ ಬಳಕೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ತಮ್ಮ ಸೇವೆಯನ್ನು ಸರಿಯಾಗಿ ನಿರ್ವಹಿಸಲ್ಲ ಎಂಬಂತೆ ತೋರಿಸಲಾಗಿದೆ. ಈ ರೀತಿಯ ದೃಶ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ತಪ್ಪು ಸಂದೇಶಗಳನ್ನು ರವಾನಿಸುತ್ತೆ ಎಂದು APTF ಆಕ್ಷೇಪ ವ್ಯಕ್ತಪಡಿಸುತ್ತದೆ.

45
ಶಿಕ್ಷಕರು ಹಾಗೆ ಮಾಡಲ್ಲ ಎಂದ ಮಂಜುಳಾ

ಇರುಮುಡಿ ಸಿನಿಮಾದಲ್ಲಿ ಶಿಕ್ಷಕರ ಪಾತ್ರವನ್ನು ಕ್ರೂರವಾಗಿ ತೋರಿಸಲಾಗಿದೆ. ಮಕ್ಕಳನ್ನು ಹೊಡೆಯೋದು, ಸಂಜೆಯವರೆಗೂ ಕ್ಲಾಸ್ ರೂಂನಿಂದ ಹೊರಗೆ ನಿಲ್ಲಿಸೋದು ಹೀಗೆ ಈ ರೀತಿಯ ಹಲವು ದೃಶ್ಯಗಳು ಸಿನಿಮಾದಲ್ಲಿವೆ. ಮಕ್ಕಳು ಓದದಿದರೆ ಶಿಕ್ಷಕರು ಶಿಕ್ಷೆ ನೀಡುತ್ತಾರೆ. ಆದ್ರೆ ಇಷ್ಟೊಂದು ರೀತಿಯಲ್ಲಿ ಶಿಕ್ಷೆ ನೀಡಲ್ಲ ಎಂದು APTF ರಾಜ್ಯ ಅಧ್ಯಕ್ಷೆ ಮಂಜುಳಾ ಹೇಳುತ್ತಾರೆ.

55
ಸಿನಿಮಾ ನಿರ್ದೇಶಕರ ಪ್ರತಿಕ್ರಿಯೆ

ಶಿಕ್ಷಕರ ಆಕ್ಷೇಪದ ಬಗ್ಗೆ ಇರುಮುಡಿ ಸಿನಿಮಾದ ನಿರ್ದೇಶಕರು ಶಿವ ನಿರ್ವಾಣ ಪ್ರತಿಕ್ರಿಯಿಸಿದ್ದು, ನಾನು ಸಹ ಎಂಎಸ್‌ಸಿ, ಬಿಎಡ್ ಮಾಡಿ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಒಳ್ಳೆಯ ಸಿನಿಮಾಗಳನ್ನು ಮಾಡುವ ಉದ್ದೇಶದಿಂದ ಚಿತ್ರರಂಗಕ್ಕೆ ಬಂದಿದ್ದೇನೆ. ಚಿತ್ರದಲ್ಲಿ ಒಬ್ಬ ಶಿಕ್ಷಕ ತಪ್ಪು ಮಾಡೋದನ್ನು ಮಾತ್ರ ತೋರಿಸಲಾಗಿದೆ. ಇನ್ನುಳಿದಂತೆ ಬೇರೆ ಶಿಕ್ಷಕರನ್ನು ಒಳ್ಳೆಯವರೆಂದು ಸಹ ತೋರಿಸಿದ್ದೇವೆ. ಚಿತ್ರದಲ್ಲಿ ಶಾಲೆಯ ಹೆಸರನ್ನು ಬಳಸಿದ್ದೇವೆ ಹೊರತು ಅಲ್ಲಿ ಯಾವುದೇ ಚಿತ್ರೀಕರಣ ಮಾಡಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡಲ್ಲ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories