Dulquer Salmaan production house controvers: ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲಂಸ್ ಹೆಸರಿನಲ್ಲಿ ಸಿನಿಮಾ ಅವಕಾಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬರಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ನಟ ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲಂಸ್ ಹೆಸರಿನಲ್ಲಿ ಲೈಂಗಿಕ ಕಿರುಕುಳವಾಗಿದೆ ಎಂದು ಯುವತಿಯೊಬ್ಬರು ದೇವಾರಾ ಪೊಲೀಸ್ ಠಾಣೆ ಮತ್ತು FEFCA ನಲ್ಲಿ ದೂರು ನೀಡಿದ್ದಾರೆ. ಸಹಾಯಕ ನಿರ್ದೇಶಕ ದಿನಿಲ್ ಬಾಬು ಎಂಬುವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಲೈಂಗಿ*ಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
25
ವೇಫೇರರ್ ಫಿಲಂಸ್ ಪತ್ರಿಕಾ ಪ್ರಕಟಣೆ
ವೇಫೇರರ್ ಫಿಲಂಸ್ ಕಲಾವಿದರ ಆಯ್ಕೆ ಆಡಿಷನ್ ಸಂಬಂಧ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾತ್ರ ಪ್ರಕಟಿಸಲಾಗುತ್ತದೆ. ನಕಲಿ ಕರೆಗಳನ್ನು ನಂಬಿ ಮೋಸ ಹೋಗಬೇಡಿ ಎಂದು ವೇಫೇರರ್ ಫಿಲಂಸ್ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ತಮ್ಮ ಕಂಪನಿಯ ಹೆಸರನ್ನು ಬಳಸಿಕೊಂಡ ಆರೋಪದ ಮೇಲೆ ದಿನಿಲ್ ಬಾಬು ವಿರುದ್ಧ ವೇಫೇರರ್ ಫಿಲಂಸ್ ದೂರು ದಾಖಲಿಸಿದೆ.
35
ಸ್ಪಷ್ಟನೆ
ದಿನಿಲ್ ಬಾಬು ಅವರೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ. ದಿನಿಲ್ ಬಾಬು ತಮ್ಮ ಯಾವುದೇ ಚಿತ್ರಗಳಲ್ಲಿ ಕೆಲಸ ಮಾಡಿಲ್ಲ ಎಂದು ವೇಫೇರರ್ ಫಿಲ್ಮ್ಸ್ ಸ್ಪಷ್ಟಪಡಿಸಿದೆ. ಯುವತಿಯ ದೂರಿನ ಮೇರೆಗೆ ಎರ್ನಾಕುಲಂ ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೇಫೇರರ್ ಫಿಲಂಸ್ ಹೊಸ ಚಿತ್ರದ ಬಗ್ಗೆ ಮಾತನಾಡಲು ದಿನಿಲ್ ಬಾಬು ತನ್ನನ್ನು ಕರೆದಿದ್ದರು. ಅಲ್ಲಿಗೆ ಹೋದಾಗ ಕೋಣೆಗೆ ಕರೆದೊಯ್ದು ಲೈಂಗಿ*ಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಎರ್ನಾಕುಲಂ ದಕ್ಷಿಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವೇಫೇರರ್ ಫಿಲ್ಮ್ಸ್ ನಿರ್ಮಿಸುತ್ತಿರುವ ಹೊಸ ಚಿತ್ರದ ಆರಂಭದ ಕುರಿತು ಚರ್ಚಿಸಲು ಮತ್ತು ಅದರಲ್ಲಿ ನಟಿಸಲು ಖುದ್ದಾಗಿ ಬರಲು ದಿನಿಲ್ ಬಾಬು ಕರೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾರೆ. ಪಣಂಬಿಲ್ಲಿಯಲ್ಲಿರುವ ವೇಫೇರರ್ ಕಚೇರಿಯ ಬಳಿಯ ಕಟ್ಟಡಕ್ಕೆ ಬರಲು ಅವರು ಕೇಳಿಕೊಂಡಿದ್ದರು ಎಂದು ಯುವತಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.