Bigg Boss ಮನೆಯೊಳಕ್ಕೆ ಹೋಗಲು ನಿಮಗೂ ಭರ್ಜರಿ ಅವಕಾಶ: ನೀವು ಮಾಡಬೇಕಿರೋದು ಇಷ್ಟೇ...

Published : Sep 07, 2025, 11:54 AM IST

ಬಿಗ್​ಬಾಸ್​ ಮನೆಯೊಳಕ್ಕೆ ಹೋಗಿ ಅಲ್ಲಿ ಕಾಣಿಸಿಕೊಳ್ಳುವ ಹಂಬಲ ನಿಮಗೂ ಇರಬೇಕಲ್ವಾ? ಇದಕ್ಕಾಗಿಯೇ ಕಲರ್ಸ್​ ವಾಹಿನಿ ಬಹುದೊಡ್ಡ ಅವಕಾಶವನ್ನು ನೀಡಿದೆ. ನೀವು ಮಾಡಬೇಕಿರುವುದು ಏನು? ಇಲ್ಲಿದೆ ಡಿಟೇಲ್ಸ್​... 

PREV
17
ಬಿಗ್​ಬಾಸ್​ ಕನ್ನಡಕ್ಕೆ ಕ್ಷಣಗಣನೆಗೆ...

ಬಿಗ್​ಬಾಸ್​ ಕನ್ನಡದ ಸೀಸನ್​ 12 ಶುರುವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದೇ 28ರಿಂದು ಷೋ ಆರಂಭವಾಗಲಿದೆ. ಇದಾಗಲೇ ಸ್ಪರ್ಧಿಗಳು ಕೂಡ ಅಂತಿಮಗೊಂಡಿದ್ದು, ಎಲ್ಲರ ಡಿಟೇಲ್ಸ್​ಗಳನ್ನು ಸದ್ಯ ಸೀಕ್ರೇಟ್​ ಆಗಿ ಇಡಲಾಗಿದೆ. ಕೆಲವರ ಹೆಸರು ಹೊರಕ್ಕೆ ಬಂದಿದ್ದು, ಮತ್ತೆ ಕೆಲವರ ಬಗ್ಗೆ ಅನುಮಾನವಿದೆ.

27
ಅವಕಾಶಕ್ಕೆ ಕಾಯುತ್ತಿರುವ ಹಲವರು...

ಯಾರ ಹೆಸರು ಕೇಳಿಬಂದರೂ ಅದಕ್ಕೆ ಸರಿಯಾದ ಉತ್ತರ ಬಿಗ್​ಬಾಸ್​ ಷೋ ಶುರುವಾದ ಮೇಲಷ್ಟೇ ತಿಳಿಯಬೇಕಿದೆ. ಆದರೆ ಬಿಗ್​ಬಾಸ್​ ಮನೆಯೊಳಕ್ಕೆ ಹೋಗುವ ಅವಕಾಶಕ್ಕಾಗಿ ಕಾಯುತ್ತಿರುವವರು ಅದೆಷ್ಟೋ ಲಕ್ಷ ಮಂದಿ. ಆದರೆ ಎಲ್ಲರಿಗೂ ತಿಳಿದಿರುವಂತೆ ಅಲ್ಲಿಗೆ ಹೋಗುವ ಅವಕಾಶ ಸಿಗುವುದು ಸೆಲೆಬ್ರಿಟಿಗಳಿಗೆ ಇಲ್ಲವೇ ಕಾಂಟ್ರವರ್ಸಿ ಮಾಡಿಕೊಂಡು (ಕು)ಖ್ಯಾತಿ ಗಳಿಸಿದವರಿಗೆ. ಸಾಮಾನ್ಯ ಜನರು ಇಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ. ಏಕೆಂದರೆ ಹಾಗೆ ಹೋದರೆ ಅದು ವಾಹಿನಿಯವರಿಗೆ ವರ್ಕ್​ಔಟ್​ ಆಗುವುದಿಲ್ಲ.

37
ದೊಡ್ಮನೆಗೆ ಹೋಗುವ ಆಸೆಯೆ?

ಆದರೂ ಹಲವರಿಗೆ ತಾವು ಒಮ್ಮೆ ಬಿಗ್​ಬಾಸ್​​ ಮನೆಯೊಳಕ್ಕೆ ಹೋಗಬೇಕು ಎನ್ನುವ ಹಂಬಲ ಇರುತ್ತದೆ. ಅಂಥವರಲ್ಲಿ ಕೆಲವರಿಗೆ ಮನೆಯ ಒಳಗೆ ಹೋಗಲು ಈ ಬಾರಿ ವಾಹಿನಿ ಅವಕಾಶ ಕಲ್ಪಿಸಿಕೊಟ್ಟಿದೆ. ಅದಕ್ಕಾಗಿ ನೀವು ಏನು ಮಾಡಬೇಕು ಎನ್ನುವುದನ್ನು ಕಲರ್ಸ್ ಕನ್ನಡ ವಾಹಿನಿಯು ಪ್ರೊಮೋ ಮೂಲಕ ತಿಳಿಸಿದೆ.

47
ಪ್ರತಿದಿನವೂ ಸೀರಿಯಲ್​ ನೋಡಿ ಎಂದ ವಾಹಿನಿ

ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಪ್ರತಿದಿನ ಸಂಜೆ 6ರಿಂದ ರಾತ್ರಿ 10.30ರ ವರೆಗೆ ಕಲರ್ಸ್​ ಕನ್ನಡದಲ್ಲಿ ಬರುವ ಸೀರಿಯಲ್​ಗಳನ್ನು ನೋಡಿ, ಪ್ರತಿ ಸೀರಿಯಲ್​ನ ಕೊನೆಯಲ್ಲಿ ಬರುವ ಪ್ರಶ್ನೆಗಳಿಗೆ ಜೀಯೋ ಸ್ಟಾರ್​ನಲ್ಲಿ ಉತ್ತರಿಸಬೇಕು. ಅದೃಷ್ಟವಂತರಿಗೆ ಬಿಗ್​ಬಾಸ್​​ ಮನೆಗೆ ಹೋಗಲು ಅವಕಾಶ ಸಿಗುತ್ತದೆ ಎಂದು Colors Kannada ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ತಿಳಿಸಿದೆ.

57
ಈ ಎಲ್ಲಾ ಸೀರಿಯಲ್​ ನೋಡಬೇಕಿದೆ...

ದೃಷ್ಟಿಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮಿ, ಮುದ್ದುಸೊಸೆ, ನಿನಗಾಗಿ, ಭಾರ್ಗವಿ LLb, ನಂದಗೋಕುಲ, ಯಜಮಾನ, ರಾಮಚಾರಿ ಸೀರಿಯಲ್​ಗಳನ್ನು ನೋಡಿ ಕೊನೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಈ ಮೂಲಕ ವಾಹಿನಿಯು ತನ್ನ ಸೀರಿಯಲ್​ TRP ಹೆಚ್ಚಿಸುವ ಪ್ಲ್ಯಾನ್ ಮಾಡಿರುವ ಜೊತೆಗೆ, ಬಿಗ್​ಬಾಸ್​​ಗೆ ಜನಸಾಮಾನ್ಯರಿಗೂ ಅವಕಾಶ ನೀಡಲು ಹೊರಟಿದೆ.

67
ಬಿಗ್​ಬಾಸ್​ ಮನೆಯ ವಿಡಿಯೋ

ಈ ಮಧ್ಯೆ ಈ ಬಾರಿಯ ಬಿಗ್ ಬಾಸ್ (Bigg Boss) ಮನೆ ಹೇಗೆ ಇರಲಿದೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಇದಾಗಲೇ ಟ್ವೀಟ್​ನಲ್ಲಿ ಉತ್ತರ ಕೊಟ್ಟಿದ್ದಾರೆ. ಈ ಮೊದಲು ಬಿಗ್ ಬಾಸ್ ಮನೆ ಇನೋವೇಟಿವ್ ಫಿಲ್ಮ್​ ಸಿಟಿಯಲ್ಲಿ ಇತ್ತು. ಆದರೆ ಅದನ್ನು ಬೇರೆ ಕಡೆ ಶಿಫ್ಟ್ ಮಾಡಲಾಗಿತ್ತು. ಕಳೆದ ಬಾರಿ ಕೆಲವರು ಈ ಮನೆಯ ವಿಚಾರಕ್ಕೆ ಅಪಸ್ವರ ತೆಗೆದಿದ್ದರು. ಈ ವಿಚಾರ ಕೋರ್ಟ್​ಗೂ ಹೋಗಿತ್ತು.

77
ದೊಡ್ಮನೆ ರಿವೀಲ್​

ಇದೀಗ ಸುದೀಪ್​ ಅವರು, ಶೇರ್​ ಮಾಡಿರುವ ವಿಡಿಯೋದಲ್ಲಿ 'ಈ ಬಾರಿ ದೊಡ್ಡ ಮತ್ತು ಉತ್ತಮ ವೇದಿಕೆ, ಮತ್ತು ಹೆಚ್ಚು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಬಿಗ್ ಬಾಸ್ ಮನೆ. ಈ ಸೀಸನ್​ನಲ್ಲಿ ಬಹಳ ವಿಷಯಗಳಿವೆ’ ಎಂದು ತಿಳಿಸಿದ್ದಾರೆ.

Read more Photos on
click me!

Recommended Stories