ಇವತ್ತು ಸಿಎಸ್‌ಕೆ ಕೊನೆಯ ಲೀಗ್ ಮ್ಯಾಚ್‌; ಇಂದಾದ್ರೂ ಧೋನಿ ಕಣಕ್ಕಿಳೀತಾರಾ? ಮಹತ್ವದ ಅಪ್‌ಡೇಟ್ ಕೊಟ್ಟ ಯೆಲ್ಲೋ ಆರ್ಮಿ

Published : May 21, 2026, 10:51 AM IST

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. 13 ಪಂದ್ಯಗಳಿಂದ ಹೊರಗುಳಿದಿರುವ ಧೋನಿ, ಇಂದಾದ್ರೂ ಕಣಕ್ಕಿಳಿಯುತ್ತಾರಾ ಎನ್ನುವ ಕುತೂಹಲ ಮನೆ ಮಾಡಿದೆ. 

PREV
16
ಇಂದು ಸಿಎಸ್‌ಕೆ-ಗುಜರಾತ್ ಫೈಟ್

19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಸಿಎಸ್‌ಕೆ ಆಡಿದ ಕಳೆದ 13 ಪಂದ್ಯಗಳಲ್ಲೂ ಧೋನಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸಿಎಸ್‌ಕೆ ಲೀಗ್‌ ಹಂತದ ಕೊನೆಯ ಪಂದ್ಯಕ್ಕೆ ಸಜ್ಜಾಗಿದ್ದು, ಈ ಪಂದ್ಯದಲ್ಲಾದರೂ ಧೋನಿ ಮೈದಾನಕ್ಕಿಳಿಯುತ್ತಾರಾ ಎನ್ನುವ ಕುತೂಹಲ ಮನೆ ಮಾಡಿದೆ.

26
ಅಹಮದಾಬಾದ್‌ನಲ್ಲಿ ಹೈವೋಲ್ಟೇಜ್ ಮ್ಯಾಚ್

ಹೌದು, ಮೇ 21ರ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಯೆಲ್ಲೋ ಆರ್ಮಿ ತನ್ನ ಪಾಲಿನ ಕೊನೆಯ ಲೀಗ್ ಪಂದ್ಯವನ್ನಾಡಲು ರೆಡಿಯಾಗಿದೆ. ಈ ಪಂದ್ಯದಲ್ಲಿ ಧೋನಿ ಕಣಕ್ಕಿಳಿಯುತ್ತಾರಾ ಎನ್ನುವ ಪ್ರಶ್ನೆಗೆ ಸಿಎಸ್‌ಕೆ ಫ್ರಾಂಚೈಸಿವತಿಯಿಂದಲೇ ಮಹತ್ವದ ಅಪ್‌ಡೇಟ್ಸ್ ಹೊರಬಿದ್ದಿದೆ.

36
ಮಹತ್ವದ ಅಪ್‌ಡೇಟ್ಸ್ ಕೊಟ್ಟ ಸಿಎಸ್‌ಕೆ ಬ್ಯಾಟಿಂಗ್ ಕೋಚ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ, 'ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಎಂ ಎಸ್ ಧೋನಿ, ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ' ಎಂದಿದ್ದಾರೆ. ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್‌ಗೆ ಎಂಟ್ರಿಕೊಟ್ಟರೇ ಆಗ ದಿಗ್ಗಜ ಆಟಗಾರ ಸಿಎಸ್‌ಕೆ ಪರ ಕಣಕ್ಕಿಳಿಯಬಹುದು.

46
ಸಿಎಸ್‌ಕೆ ಪ್ಲೇ ಆಫ್‌ಗೇರಿದರೇ ಧೋನಿ ಕಣಕ್ಕಿಳಿಯಬಹುದು

'ಅವರು ಈ ಸಮಯದಲ್ಲಿ ತಂಡದೊಂದಿಗೆ ಇಲ್ಲ ಎಂದು ನಾನು ಖಚಿತವಾಗಿ ಹೇಳುತ್ತಿದ್ದೇನೆ. ಆದರೆ ನಾವು ಪ್ಲೇಆಫ್‌ಗೆ ಅರ್ಹತೆ ಪಡೆದರೆ, ಅವರು ಖಂಡಿತವಾಗಿಯೂ ಹಿಂತಿರುಗುತ್ತಾರೆ. ಅವರ ಹೆಬ್ಬೆರಳಿನಲ್ಲಿ ಸಣ್ಣ ಪುಟ್ಟ ನೋವು ಇದೆ, ಅದು ಈಗ ಗುಣವಾಗುತ್ತಿದೆ, ಆದರೆ ಅವರು ಈ ಪಂದ್ಯಕ್ಕೆ ಸಂಪೂರ್ಣವಾಗಿ ಸಿದ್ಧರಾಗಿಲ್ಲ. ಆದಾಗ್ಯೂ, ನಾವು ಪ್ಲೇಆಫ್‌ಗೆ ತಲುಪುವಲ್ಲಿ ಯಶಸ್ವಿಯಾದರೆ, ಆ ಹೊತ್ತಿಗೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತೇವೆ' ಎಂದು ಹಸ್ಸಿ ಹೇಳಿದ್ದಾರೆ.

56
ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ ಸಿಎಸ್‌ಕೆ

ಎಂ ಎಸ್ ಧೋನಿ ಐಪಿಎಲ್ ಆಡುವ ಕುರಿತಾದ ಅನಿಶ್ಚಿತತೆ ಟೂರ್ನಿಯುದ್ದಕ್ಕೂ ಮುಂದುವರೆದಿದೆ. ಸದ್ಯ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ 13 ಪಂದ್ಯಗಳ ಪೈಕಿ 7 ಸೋಲು ಹಾಗೂ 6 ಗೆಲುವುಗಳೊಂದಿಗೆ 12 ಅಂಕಗಳನ್ನು ಹೊಂದಿದ್ದು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಸಿಎಸ್‌ಕೆ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಅದೃಷ್ಟ ಕೈಹಿಡಿದರೆ, ಈಗಲೂ ಪ್ಲೇ ಆಫ್‌ಗೇರುವ ಸಾಧ್ಯತೆಯಿದೆ.

66
ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಸಿಎಸ್‌ಕೆ

ಇಂದು ಸಿಎಸ್‌ಕೆ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿದರೆ ಗಾಯಕ್ವಾಡ್ ಪಡೆಯ ಬಳಿ 14 ಅಂಕಗಳಾಗಲಿವೆ. ಇನ್ನುಳಿದಂತೆ ಉಳಿದ ತಂಡಗಳ ಫಲಿತಾಂಶಗಳು ಸಿಎಸ್‌ಕೆ ಪರವಾಗಿ ಬಂದರಷ್ಟೇ ಪ್ಲೇ ಆಫ್‌ಗೇರಲು ಸಾಧ್ಯವಾಗಲಿದೆ. ಸಿಎಸ್‌ಕೆ ಸತತ ಎರಡು ಪಂದ್ಯಗಳ ಸೋಲಿನ ಬಳಿಕ ಇಂದು ಮೈದಾನದಕ್ಕಿಳಿಯುತ್ತಿದ್ದು, ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories