ಗೌರವಯುತ ಬೀಳ್ಕೊಡುಗೆ ಇಲ್ಲ, ವಿದಾಯದ ಪಂದ್ಯವಿಲ್ಲ, ಸೈಲೆಂಟ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಧೋನಿ ದೂರವಾಗುತ್ತಿದ್ದಾರೆ. ಧೋನಿಗೆ ಹಾಗೂ ಸಿಎಸ್‌ಕೆ ಮ್ಯಾನೇಜ್ಮೆಂಟ್ ಜೊತೆ ಸಂಬಂಧ ನೆಟ್ಟಗಿಲ್ಲ. ಕೆಲ ಆತಂಕಕಾರಿ ವರದಿ ಬಿಡುಗಡೆಯಾಗಿದೆ.
ಐಪಿಎಲ್ 2026ರ ಆವೃತ್ತಿಯಲ್ಲಿ ಧೋನಿ ಒಂದು ಪಂದ್ಯವೂ ಆಡಿಲ್ಲ. 13 ಪಂದ್ಯದಲ್ಲೂ ಅಭಿಮಾನಿಗಳು ಧೋನಿಗಾಗಿ ಕಾಯುತ್ತಾ ಕುಳಿತಿದ್ದರು. ಆದರೆ ಪ್ರತಿ ಬಾರಿ ತಂಡ ಇಂಜುರಿ ಕಾರಣ ನೀಡಿತ್ತು. 2026ರ ಐಪಿಎಲ್ ಟೂರ್ನಿ ಬಳಿಕ ಧೋನಿ ಸೈಲೆಂಟ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ದೂರ ಸರಿಯುತ್ತಿದ್ದಾರೆ. ಈ ಕುರಿತ ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ.
25
ಧೋನಿಗೂ ಅಸಮಾಧಾನ
ಕ್ರಿಕ್‌ಬ್ಲಾಗರ್ ಮಾಧ್ಯಮ ಈ ಕುರಿತು ಸ್ಫೋಟಕ ಸುದ್ದಿ ಬಹಿರಂಗ ಮಾಡಿದೆ. ಎಂಎಸ್ ಧೋನಿ ಹಾಗೂ ಸಿಎಸ್‌ಕೆ ಮ್ಯಾನೇಜ್ಮೆಂಟ್ ನಡುವೆ ಸಂಬಂಧ ಚೆನ್ನಾಗಿಲ್ಲ. ಕಳೆದೆರಡು ವರ್ಷದಿಂದ ಧೋನಿಯನ್ನು ಸಂಪೂರ್ಣವಾಗಿ ತಂಡ ಕಡೆಗಣಿಸಿದೆ. ಧೋನಿ ಅರಿವಿಲ್ಲದೆ ತಂಡದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಇದು ಧೋನಿ ಅಸಮಾಧಾನಕ್ಕೂ ಕಾರಣಾಗಿದೆ.
35
ಒಂದೇ ಪಂದ್ಯ ಆಡದೇ, ವಿದಯವೂ ಇಲ್ಲದೆ ರಿಟೈರ್ಡ್
2026ರಲ್ಲಿ ಧೋನಿ ಒಂದೇ ಒಂದು ಪಂದ್ಯ ಆಡಿಲ್ಲ. ಇನ್ನೊಂದು ಪಂದ್ಯ ಬಾಕಿ ಇದೆ. ಈ ಪಂದ್ಯದಲ್ಲೂ ಧೋನಿ ಆಡೋ ಸಾಧ್ಯತೆ ಇಲ್ಲ. 2026ರ ಟೂರ್ನಿ ಬಳಿಕ ಧೋನಿ ಸದ್ದಿಲ್ಲದೆ ಸಿಎಸ್‌ಕೆಯಿಂದ ದೂರ ಸರಿಯುತ್ತಿದ್ದಾರೆ ಎಂದು ವರದಿಯಾಗಿದೆ. ಸಿಎಸ್‌ಕೆಯಿಂದ ಮಾತ್ರವಲ್ಲ, ಐಪಿಎಲ್ ಟೂರ್ನಿಯಿಂದಲೂ ದೂರ ಸರಿಯುತ್ತಿದ್ದಾರೆ.
ರವೀಂದ್ರ ಜಡೇಜಾ ಔಟ್ ಹಾಗೂ ಸಂಜು ಸ್ಯಾಮ್ಸನ್ ಇನ್ ನಿರ್ಧಾರ ಧೋನಿಗೆ ಗೊತ್ತೇ ಇರಲಿಲ್ಲ. ಇದು ಧೋನಿ ಅಸಮಾಧಾನಕ್ಕೆ ಕಾರಣವಾಗಿತ್ತು. ತಂಡಕ್ಕೆ ಯುವ ಆಟಗಾರರ ಸೇರ್ಪಡೆ ನಿರ್ಧಾರಗಳಿಂದ ಧೋನಿಯನ್ನು ಹೊರಗಿಡಲಾಗಿತ್ತು ಅನ್ನೋ ಮಾಹಿತಿ ವರದಿಯಲ್ಲಿ ಪ್ರಕಟಿಸಲಾಗಿದೆ.
55
ಧೋನಿ ಕಡೆಗಣಿಸಿದ ಮ್ಯಾನೇಜ್ಮೆಂಟ್
ಧೋನಿಯನ್ನು ಕಡೆಗಣಿಸಿ ಹೊಸ ತಂಡ ಕಟ್ಟಲು ಮುಂದಾಗಿದ್ದ ಸಿಎಸ್‌ಕೆ ಮ್ಯಾನೇಜ್ಮೆಂಟ್ ಭಾಗಶಃ ಯಶಸ್ವಿಯಾಗಿತ್ತು. ಆದರೆ ಇದು ಧೋನಿಗೆ ತೀವ್ರ ಬೇಸರ ತರಿಸಿತ್ತು. ಇಂಜುರಿಯಲ್ಲೂ ತಂಡಕ್ಕೆ ಆಡಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನನ್ನು ಅತ್ತ ರಿಲೀಸ್ ಮಾಡದೇ ಇತ್ತ ಲೆಕ್ಕಕ್ಕಿಲ್ಲ ಅನ್ನೋ ರೀತಿ ನಡೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.