ಬೆಂಗಳೂರು: 19ನೇ ಆವೃತ್ತಿಯ IPL ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಈಗಾಗಲೇ 3 ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇನ್ನು ಲಖನೌ ಎದುರು ರಾಜಸ್ಥಾನದ ಗೆಲುವು ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.
2026ರ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಮ್ಮ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ ಪಂಜಾಬ್, ರಾಜಸ್ಥಾನ, ಡೆಲ್ಲಿ, ಕೋಲ್ಕತಾ ಹಾಗೂ ಚೆನ್ನೈ ತಂಡಗಳು ಪೈಪೋಟಿ ನಡೆಸುತ್ತಿವೆ.
25
ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ ರಾಜಸ್ಥಾನ ರಾಯಲ್ಸ್
ಇದೀಗ ನಿನ್ನೆ ನಡೆದ ಲಖನೌ ಎದುರಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ರಿಯಾನ್ ಪರಾಗ್ ನೇತೃತ್ವದ ರಾಯಲ್ಸ್ ತಂಡವು ಅಂಕಪಟ್ಟಿ ನಾಲ್ಕನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.
35
ಟಾಪ್-4 ಪಟ್ಟಿಯಿಂದ ಹೊರಬಿದ್ದ ಪಂಜಾಬ್ ಕಿಂಗ್ಸ್
ಕಳೆದ ಬಾರಿಯ ರನ್ನರ್ ಅಪ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಟೂರ್ನಿಯ ಮೊದಲ ಪಂದ್ಯಗಳಲ್ಲಿ ಅಜೇಯವಾಗಿ ಗೆಲುವಿನ ನಾಗಾಲೋಟ ಮುಂದುವರೆಸಿತ್ತು. ಜತೆಗೆ ಪ್ಲೇ ಆಫ್‌ಗೇರುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಇದಾದ ಬಳಿಕ ಸತತವಾಗಿ ಸೋಲುತ್ತಲೇ ಬಂದಿರುವ ಪಂಜಾಬ್ ತಂಡವು ಈ ಸೀಸನ್‌ನಲ್ಲಿ ಮೊದಲ ಬಾರಿಗೆ ಟಾಪ್-4 ಪಟ್ಟಿಯಿಂದ ಹೊರಬಿದ್ದಿದ್ದು, ಪ್ಲೇ ಆಫ್ ರೇಸ್‌ನಿಂದಲೂ ಹೊರಬೀಳುವ ಭೀತಿಯಲ್ಲಿದೆ.
ಲಖನೌ ಎದುರಿನ ಗೆಲುವಿನ ಬಳಿಕ ರಾಯಲ್ಸ್ ರಾಯಲ್ಸ್ ಈಗ 14 ಅಂಕ ಹೊಂದಿದ್ದು, ಭಾನುವಾರ ಮುಂಬೈ ವಿರುದ್ಧ ಕೊನೆ ಪಂದ್ಯವಾಡಲಿದೆ. ಅದರಲ್ಲಿ ರಾಜಸ್ಥಾನ ಗೆದ್ದರೆ ಪ್ಲೇ-ಆಫ್ ಪ್ರವೇಶಿಸಲಿದ್ದು, ಇತರ 4 ತಂಡಗಳಾದ ಪಂಜಾಬ್, ಚೆನ್ನೈ, ಡೆಲ್ಲಿ, ಕೋಲ್ಕತಾ ಹೊರಬೀಳಲಿವೆ.
55
ಕೊನೆಯ ಪಂದ್ಯ ರಾಯಲ್ಸ್ ಸೋತರೇ..?
ಈಗ ಪ್ಲೇ-ಆಫ್‌ಗೇರಿರುವ ಆರ್‌ಸಿಬಿ, ಗುಜರಾತ್, ಸನ್‌ರೈಸರ್ಸ್ ಹೊರತಾಗಿ 16 ಅಂಕ ಗಳಿಸುವ ಅವಕಾಶವಿರುವ ಏಕೈಕ ತಂಡ ರಾಜಸ್ಥಾನ ರಾಯಲ್ಸ್. ಉಳಿದಂತೆ ಪಂಜಾಬ್ ಕಿಂಗ್ಸ್, ಕೆಕೆಆರ್‌ಗೆ ಗರಿಷ್ಠ 15 ಅಂಕ ಗಳಿಸಬಹುದು. ಒಂದು ವೇಳೆ ರಾಜಸ್ಥಾನ ಕೊನೆಯ ಪಂದ್ಯದಲ್ಲಿ ಸೋತರೇ, ಕೆಕೆಆರ್ ಹಾಗೂ ಪಂಜಾಬ್‌ಗೆ ಪ್ಲೇ ಆಫ್‌ಗೇರುವ ಆಸೆಗೆ ಬಲ ಬರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.