ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಸರಿಯಾದ ಆಟ ಪ್ರದರ್ಶಿಸುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆದರೆ ಆಟ ಹೇಗೇ ಇರಲಿ, ಸಂಪಾದನೆ ವಿಚಾರದಲ್ಲಿ ಕೊಹ್ಲಿ ಮುಂದಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಬಿಸಿಸಿಐ A+ ಕೆಟಗರಿ ಒಪ್ಪಂದದಲ್ಲಿದ್ದಾರೆ. ಇದಕ್ಕಾಗಿ ಕೊಹ್ಲಿಗೆ 7 ಕೋಟಿ ರೂ. ವಾರ್ಷಿಕ ಸಂಬಳ ಸಿಗುತ್ತದೆ. ಇದಲ್ಲದೇ ಪ್ರತಿ ಏಕದಿನಕ್ಕೆ 6 ಲಕ್ಷ ರುಪಾಯಿ ಸಂಬಳ ಸಿಗುತ್ತದೆ.
25
ಐಪಿಎಲ್‌ನಲ್ಲಿ ವಿರಾಟ್‌ಗೆ ಭಾರಿ ಪೇಮೆಂಟ್
ಕೊಹ್ಲಿ ಐಪಿಎಲ್ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲೇ ಇದ್ದಾರೆ. 2024ರ ಸೀಸನ್‌ಗೆ 21 ಕೋಟಿ ರೂ. ಸಂಬಳ ಪಡೆದಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ.
35
ಜಾಹೀರಾತುಗಳಿಂದ ತಲೆತಿರುಗುವ ಆದಾಯ
ವಿರಾಟ್ ಕೊಹ್ಲಿಯ ಮುಖ್ಯ ಆದಾಯ ಬ್ರಾಂಡ್ ಎಂಡಾರ್ಸ್‌ಮೆಂಟ್‌ನಿಂದ ಬರುತ್ತದೆ. ಪೂಮಾ, ಆಡಿ, MRF, ಟಿಸ್ಸೋಟ್, ಮಿಂತ್ರಾದಂತಹ ಬ್ರಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ಪ್ರತಿ ಬ್ರಾಂಡ್‌ಗೆ 5 ರಿಂದ 10 ಕೋಟಿ ರೂ. ಪಡೆಯುತ್ತಾರೆ.
2024ರ ಕ್ರೋಲ್ ಸೆಲೆಬ್ರಿಟಿ ಬ್ರಾಂಡ್ ಮೌಲ್ಯಮಾಪನ ವರದಿ ಪ್ರಕಾರ, ವಿರಾಟ್ ಕೊಹ್ಲಿ ಬ್ರಾಂಡ್ ಮೌಲ್ಯ ಸುಮಾರು 2,048 ಕೋಟಿ ರೂ. ಇದು ಕೊಹ್ಲಿಯನ್ನು ಏಷ್ಯಾದಲ್ಲೇ ಅಗ್ರ ಬ್ರಾಂಡ್ ಅಂಬಾಸಿಡರ್ ಮಾಡಿದೆ.
55
ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ವಿರಾಟ್
ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್‌ನಲ್ಲಿ ವಿರಾಟ್‌ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಒಂದು ಪೋಸ್ಟ್‌ಗೆ ಬ್ರಾಂಡ್‌ಗಳಿಂದ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತದೆ. ಕೊಹ್ಲಿ ಪ್ರತಿ ಪೋಸ್ಟ್‌ಗೆ 12 ಕೋಟಿ ರೂ. ಪಡೆಯುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.