ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದಿಢೀರ್ ಎನ್ನುವಂತೆ ತನ್ನ ಏಕದಿನ ತಂಡದ ನಾಯಕರಾದ ಮೊಹಮ್ಮದ್ ರಿಜ್ವಾನ್ ಕೆಳಗಿಳಿಸಿ, ಶಾಹೀನ್ ಅಫ್ರಿದಿಗೆ ಪಟ್ಟ ಕಟ್ಟಿದೆ. ದಿಢೀರ್ ಈ ಬೆಳವಣಿಗೆ ನಡೆದಿದ್ದು ಯಾಕೆ ಎನ್ನುವ ವಿಚಾರ ಈಗ ಬಯಲಾಗಿದೆ.
ವರದಿ ಪ್ರಕಾರ, ರಿಜ್ವಾನ್ ಡ್ರೆಸ್ಸಿಂಗ್ ಕೋಣೆಯಲ್ಲಿ ಅತಿಯಾಗಿ ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಇದು ಇತರ ಆಟಗಾರರಿಗೆ ಇಷ್ಟವಿರಲಿಲ್ಲ. ಅಲ್ಲದೇ ದಿನಕ್ಕೆ 5 ಬಾರಿ ನಮಾಜ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
57
ಧಾರ್ಮಿಕ ವಿಚಾರಗಳಿಗೆ ಹೆಚ್ಚಿನ ಒತ್ತು
ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನ ಮರೆ ಮಾಚಲು ಧಾರ್ಮಿಕ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು ಎಂಬ ಆರೋಪವೂ ರಿಜ್ವಾನ್ ಮೇಲೆ ಇತ್ತು.
67
ರಿಜ್ವಾನ್ ಬೆಟ್ಟಿಂಗ್ ಆ್ಯಪ್ ವಿರೋಧಿ
ಮತ್ತೊಂದು ವರದಿ ಪ್ರಕಾರ, ರಿಜ್ವಾನ್ ಬೆಟ್ಟಿಂಗ್ ಆ್ಯಪ್ ವಿರೋಧಿಯಾಗಿದ್ದು, ಅಂತಹ ಆ್ಯಪ್‌ಗಳ ಲೋಗೋ ಇರುವ ಜೆರ್ಸಿ ಧರಿಸುವುದಿಲ್ಲ ಎಂದು ಪಿಸಿಬಿಗೆ ತಿಳಿಸಿದ್ದರು. ಬದಲಿಗೆ ಲೋಗೋ ಇಲ್ಲದ ಧರಿಸಿ ಆಡಿದ್ದರು. ಅಲ್ಲದೆ, ಪ್ಯಾಲೆಸ್ತೀನ್ ಪರ ಧೋರಣೆ ಹೊಂದಿದ್ದು ಕೂಡಾ ರಿಜ್ವಾನ್ ನಾಯಕ ಸ್ಥಾನಕ್ಕೆ ಕುತ್ತು ತಂದಿದೆ ಎನ್ನಲಾಗಿದೆ.
77
ಪಾಕ್ ಏಕದಿನ ತಂಡದ ನೂತನ ನಾಯಕ
ಇದೀಗ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.