Break up with Shubmam Gill: ಸಾರಾ ತೆಂಡೂಲ್ಕರ್‌ಗೆ ನೆಟ್ಟಿಗರ ಪ್ರಶ್ನೆ!

First Published Nov 9, 2021, 1:32 PM IST

ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಅವರು ತಮ್ಮ ಸೌಂದರ್ಯ ಮತ್ತು ಲುಕ್‌ನಿಂದ  ಯಾವಾಗಲೂ ಜನಮನದಲ್ಲಿರುತ್ತಾರೆ. ಕೆಲವೊಮ್ಮೆ ಅವರು  ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡರೆ, ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ, ಅವರು ದೀಪಾವಳಿಯ (Diwali 2021) ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರ ಫೋಟೋ ನೋಡಿದ ಅಭಿಮಾನಿಗಳು ಶುಭಮಾನ್ ಗಿಲ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅವರಿಬ್ಬರ ಬ್ರೇಕಪ್ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಾರಾ ಅವರ ಫೋಟೋ ಮತ್ತು ಅದರ ಬಗ್ಗೆ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ ನೋಡಿ.

ಸಚಿನ್ ತೆಂಡೂಲ್ಕರ್‌ ಮಗಳು ಸಾರಾ  ಆಗಾಗ ಸುದ್ದಿಯಾಗುತ್ತಿರುತ್ತಾರೆ. ಸಾರಾ ತೆಂಡೂಲ್ಕರ್ ತಮ್ಮ ಹೆಸರಿನಿಂದ ಮಾತ್ರವಲ್ಲದೇ, ಲುಕ್‌ ಮತ್ತು ಸ್ಟೈಲ್‌ನಿಂದಲೂ ಸದ್ದು ಮಾಡುತ್ತಾರೆ. ಇತ್ತೀಚೆಗೆ ಅವರು ತಮ್ಮ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಸಾರಾ ತೆಂಡೂಲ್ಕರ್‌ ಪೋಸ್ಟ್‌ ಮಾಡಿರುವ ಫೋಟೋದಲ್ಲಿ ಕಪ್ಪು ಬಣ್ಣದ ಆಫ್ ಶೋಲ್ಡರ್ ಲೆಹೆಂಗಾ ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿರುವುದನ್ನು ಕಾಣಬಹುದು.

ಆದರೆ, ಆಕೆಯ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾರಾರ ರೂಮರ್ಡ್‌ ಬಾಯ್‌ಫ್ರೆಂಡ್‌ ಶುಭ್‌ಮಾನ್ ಗಿಲ್ ಅವರನ್ನು ನೆನಪಿಸಿಕೊಂಡಿದ್ದು, ಆಕೆ ಮತ್ತು ಶುಭ್‌ಮಾನ್ ಗಿಲ್ ಅವರ ಬ್ರೇಕಪ್ ಬಗ್ಗೆ  ಸಹ ಪ್ರಶ್ನಿಸಿದ್ದಾರೆ.

ಟೀಮ್‌ ಇಂಡಿಯಾದ ಯಂಗ್‌ ಯುವ ಆಟಗಾರ ಶುಭಮನ್ ಗಿಲ್ ಇತ್ತೀಚೆಗೆ ಪೋಸ್ಟ್‌ವೊಂದನ್ನು ಶೇರ್ ಮಾಡಿದ್ದರು. ಅದರಲ್ಲಿ ಏಜೆಂಲ್‌ಗಳ ಪ್ರೀತಿಯಲ್ಲಿ ಬೀಳಬೇಡಿ ಎಂದು ಬರೆದಿದ್ದರು. ಅಂದಿನಿಂದ, ಜನರು ಸಚಿನ್ ತೆಂಡೂಲ್ಕರ್ ಅವರ ಮಗಳ ಪೋಸ್ಟ್‌ಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ನೆಟಿಜನ್ ಈ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾರಾ ತೆಂಡೂಲ್ಕರ್‌ ಮತ್ತು ಶುಬ್‌ಮಾನ್ ಗಿಲ್ ಅವರ ಬ್ರೇಕಪ್‌ ವದಂತಿಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹಾರಾಡುತ್ತಿವೆ.  

ಇದು ಮೊದಲ ಬಾರಿ ಅಲ್ಲದಿದ್ದರೂ, ಹಲವು ಬಾರಿ ಸಾರಾ ಅವರ ಹೆಸರು ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸೇರಿರುವುದು, ಸುದ್ದಿಯಾಗಿತ್ತು. ಅವರ ಸಂಬಂಧದ ಬಗ್ಗೆ ಇಬ್ಬರೂ ಇದುವರೆಗೆ ಧೃಡಪಡಿಸಿಲ್ಲವಾದರೂ ಸಾಮಾಜಿಕ ಮಾಧ್ಯಮದಲ್ಲಿ ಅವರ ರಿಲೆಷನ್‌ಶಿಪ್‌ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಮುಂಬೈನಲ್ಲಿ 12 ಅಕ್ಟೋಬರ್ 1997 ರಂದು ಜನಿಸಿದ ಸಾರಾ  ತೆಂಡೂಲ್ಕರ್ ಸಚಿನ್  ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ಅವರ ಹಿರಿಯ ಮಗಳು. ಅವರು ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನಿಂದ ಮೆಡಿಸಿನ್‌ನಲ್ಲಿ ಪದವಿ ಪಡೆದಿದ್ದಾರೆ ಮತ್ತು ಪ್ರಸ್ತುತ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ತಮ್ಮ ವೃತ್ತಿ ಜೀವನವನ್ನು ಮುಂದುವರಿಸುತ್ತಿದ್ದಾರೆ.

ಬಾಲ್ಯದಿಂದಲೂ ಸಾರಾ ಅವರ ತುಂಬಾ ಫೇಮಸ್‌ ಮತ್ತು ಯಾವಾಗಲೂ ಪ್ರಚಾರದಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಇರುವ ಸಾರಾ ಯಾವಾಗಲೂ ತನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರು Instagram ನಲ್ಲಿ 1.5 ಮಿಲಿಯನ್ ಫಾಲೋವರ್ಸ್‌ ಅನ್ನು ಹೊಂದಿದ್ದಾರೆ.

click me!