T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

Suvarna News   | Asianet News
Published : Nov 06, 2021, 11:33 AM IST

ಬೆಂಗಳೂರು: ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಶುಕ್ರವಾರ ಟೀಂ ಇಂಡಿಯಾ (Team India) ಕ್ರಿಕೆಟ್ ಶಿಶು ಸ್ಕಾಟ್ಲೆಂಡ್ (Scotland) ಎದುರು ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವು ದಾಖಲಿಸಿದೆ. ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್. ರಾಹುಲ್ (KL Rahul) ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸಲು ನೆರವಾಗಿದ್ದಾರೆ. ಇನ್ನು ಬಹುಕಾಲದ ಗೆಳತಿ ಆತಿಯಾ ಶೆಟ್ಟಿಗೆ (Athiya Shetty) ಹುಟ್ಟುಹಬ್ಬದ ಗಿಫ್ಟ್ ನೀಡಿದ್ದಲ್ಲದೇ, ತನ್ನ ಪ್ರೀತಿಯನ್ನು ಇದೇ ಮೊದಲ ಬಾರಿಗೆ ಬಹಿರಂಗ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

PREV
18
T20 World Cup: ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

ತನ್ನ ಬಹುಕಾಲದ ಗೆಳತಿ ಆತಿಯಾ ಶೆಟ್ಟಿಗೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಕೆ ಎಲ್ ರಾಹುಲ್ ಡಬಲ್ ಧಮಾಕಾ ನೀಡಿದ್ದಾರೆ. ಒಂದು ತನ್ನ ಗೆಳತಿಯ ಎದುರೇ ಕೇವಲ 18 ಎಸೆಗಳಲ್ಲಿ ಅರ್ಧಶತಕ ಪೂರಿಸಿದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದ ಮೂಲಕ ಆತಿಯಾ ಜತೆಗಿನ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ.

28

ಶುಕ್ರವಾರ(ನ.5)ರಂದು ಕನ್ನಡಿಗ ಕೆ ಎಲ್ ರಾಹುಲ್ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಜತೆ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆತಿಯಾ ಹೆಗಲ ಮೇಲೆ ರಾಹುಲ್ ಕೈಹಾಕಿಕೊಂಡಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. 

38

ಇದೇ ಫೋಟೋದ ಮೂಲಕ ರಾಹುಲ್ ತನ್ನ ಪ್ರೀತಿಯನ್ನು ಅನಾವರಣ ಮಾಡಿದ್ದಾರೆ. ಹ್ಯಾಪಿ ಬರ್ತ್‌ ಡೇ ಎಂದು ಹಾರ್ಟ್‌ ಸಿಂಬಲ್ ಎಮೋಜಿ ಬಳಸಿ ರಾಹುಲ್‌ ಬಾಲಿವುಡ್ ನಟನ ಪುತ್ರಿ ಆತಿಯಾಗೆ ಶುಭ ಕೋರಿದ್ದಾರೆ. ಕೇವಲ 9 ಗಂಟೆ ಅವಧಿಯಲ್ಲಿ ಈ ಫೋಟೋಗೆ 15 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ.

48

ಈ ಫೋಟೋದ ಮೂಲಕ ವಿಶ್ ಮಾಡಿದ್ದೂ ರಾಹುಲ್ ಹಾಗೂ ಆತಿಯಾ ಜತೆಗೆ ಪ್ರೀತಿಯಿದೆ ಎನ್ನುವುದು ಅಧಿಕೃತವಾಗಿ ಬಹಿರಂಗವಾಗಿದೆ. ಈ ಫೋಟೋದಲ್ಲಿ ಇಬ್ಬರೂ ಮುದ್ದಾಗಿರುವುದು ಕಂಡು ಬಂದಿದೆ. ರಾಹುಲ್ ಹಂಚಿಕೊಂಡ ಫೋಟೋಗೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಹಾಗೂ ಬುಮ್ರಾ ಪತ್ನಿ ಸಂಜನಾ ಗಣೇಶನ್ ಕೂಡಾ ಲೈಕ್ ಮಾಡಿದ್ದಾರೆ.

58

ಭಾರತ ಹಾಗೂ ಸ್ಕಾಟ್ಲೆಂಡ್ ನಡುವಿನ ಪಂದ್ಯವನ್ನು ವೀಕ್ಷಿಸಲು ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಆತಿಯಾ ಶೆಟ್ಟಿ ಬಂದಿದ್ದರು. ರಾಹುಲ್ ಅತಿವೇಗದ ಅರ್ಧಶತಕ ಬಾರಿಸಿದಾಗ ಆತಿಯಾ ಅವರು ತೋರಿದ ಹರ್ಷ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

68

ಅಂದಹಾಗೆ ಕೆ ಎಲ್ ರಾಹುಲ್, ಸ್ಕಾಟ್ಲೆಂಡ್ ಎದುರು ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ, 2021ನೇ ಸಾಲಿನ ಟಿ20 ವಿಶ್ವಕಪ್‌ನಲ್ಲಿ ಅತಿವೇಗವಾಗಿ ಅರ್ಧಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡರು. ರಾಹುಲ್ ಸಿಡಿಲಬ್ಬರದ ಬ್ಯಾಟಿಂಗ್‌ನಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು.

78

ಇದಕ್ಕೂ ಮೊದಲು ಸೌಥಾಂಪ್ಟನ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ವೇಳೆಯೂ ಆತಿಯಾ, ರಾಹುಲ್ ಜತೆ ಕಾಣಿಸಿಕೊಂಡಿದ್ದರು. ಆತಿಯಾ ಶೆಟ್ಟಿ ಟೀಂ ಇಂಡಿಯಾ ಆಟಗಾರರ ಕುಟುಂಬಸ್ಥರ ಜತೆ ಕಾಣಿಸಿಕೊಂಡ ಫೋಟೋಗಳು ಈ ಹಿಂದೆ ವೈರಲ್ ಆಗಿದ್ದವು.

88

ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಸಾಕಷ್ಟು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇದುವರೆಗೂ ತಮ್ಮ ಪ್ರೀತಿಯ ಕುರಿತಂತೆ ಈ ಇಬ್ಬರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ಆತಿಯಾ ಬರ್ತ್‌ ಡೇ ಸಂದರ್ಭದಲ್ಲಿ ರಾಹುಲ್ ತಮ್ಮ ಪ್ರೀತಿಯನ್ನು ಅನಾವರಣ ಮಾಡಿದ್ದಾರೆ.
 

Read more Photos on
click me!

Recommended Stories