IPL 2022: ಹರಾಜಿಗೂ ಮುನ್ನ CSK ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು..!

First Published | Nov 6, 2021, 6:25 PM IST

ಬೆಂಗಳೂರು: ಐಪಿಎಲ್ (IPL) ಇತಿಹಾಸದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ ತಂಡವೆಂದರೆ ಅದು ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings). ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಐಪಿಎಲ್ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2022ರ ಐಪಿಎಲ್‌ ಟೂರ್ನಿಗೆ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗಿದ್ದು, 15ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿಗೂ (Mega Auction) ಮುನ್ನ ಈಗಿರುವ 8 ಫ್ರಾಂಚೈಸಿಗಳಿಗೆ ನಾಲ್ವರು ಆಟಗಾರರನ್ನು ರೀಟೈನ್ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಚೆನ್ನೈ ಮೂಲದ ಫ್ರಾಂಚೈಸಿ ಧೋನಿ ಸೇರಿದಂತೆ ಈ ನಾಲ್ವರು ಆಟಗಾರರು ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.'

1. ಮಹೇಂದ್ರ ಸಿಂಗ್ ಧೋನಿ:
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಧಾರಸ್ತಂಭ ಎನಿಸಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಸಿಎಸ್‌ಕೆ (CSK) ಫ್ರಾಂಚೈಸಿ ಮೊದಲ ಆಧ್ಯತೆಯ ಮೇರೆಗೆ ತಂಡದಲ್ಲೇ ಉಳಿಸಿಕೊಳ್ಳಲಿದೆ. ಸಿಎಸ್‌ಕೆ ಯಶಸ್ಸಿನ ಹಿಂದೆ ಧೋನಿ ಪಾತ್ರವನ್ನು ಯಾರೂ ಮರೆಯುವಂತಿಲ್ಲ.

(photo source- iplt20.com)

ಧೋನಿಗೆ 40 ವರ್ಷವಾಗಿದ್ದರೂ ಸಹಾ ಇಂದಿಗೂ ನಾಯಕನಾಗಿ ಅವರ ತಂತ್ರಗಾರಿಕೆ ಎಂತಹವರಲ್ಲೂ ಬೆರಗು ಹುಟ್ಟಿಸುತ್ತದೆ. ಈಗಾಗಲೇ ಧೋನಿ ಚೆನ್ನೈನಲ್ಲಿ ಸಿಎಸ್‌ಕೆ ಪರ ಕೊನೆಯ ಪಂದ್ಯವನ್ನಾಡಲು ಇಚ್ಛಿಸಿದ್ದು, ಬಹುತೇಕ ಧೋನಿಯನ್ನು ಸಿಎಸ್‌ಕೆ ಫ್ರಾಂಚೈಸಿ ತನ್ನ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.
(photo source- iplt20.com)

Tap to resize

2. ರವೀಂದ್ರ ಜಡೇಜಾ:
ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಯಾವುದೇ ತಂಡದಲ್ಲಿದ್ದರೂ ಸಹಾ ಅವರೊಬ್ಬ ಸಂಪತ್ತು ಎಂದರೆ ಅತಿಶಯೋಕಿಯಾಗಲಾರದು. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅಬ್ಬರಿಸುವ ಜಡ್ಡುವನ್ನು ಸಿಎಸ್‌ಕೆ ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ಸಾಧ್ಯೆತೆ ಹೆಚ್ಚು.

ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ ಎನಿಸಿರುವ ರವೀಂದ್ರ ಜಡೇಜಾ 200 ಐಪಿಎಲ್ ಹಾಗೂ ಭಾರತ ಪರ 52 ಟಿ20 ಪಂದ್ಯಗಳನ್ನಾಡಿದ್ದಾರೆ. ಪರಿಸ್ಥಿತಿಗನುಗುಣವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡುವುದು ಜಡೇಜಾ ಸ್ಪೆಷಾಲಿಟಿ.

सबसे ज्यादा चौके

3. ಋತುರಾಜ್ ಗಾಯಕ್ವಾಡ್‌
ಸಿಎಸ್‌ಕೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಮೂಲದ ಋತುರಾಜ್ ಗಾಯಕ್ವಾಡ್ (Ruturaj Gaikwad) ಅವರನ್ನು ಸಿಎಸ್‌ಕೆ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರಂಭಿಕನಾಗಿ ಸಿಎಸ್‌ಕೆ ತಂಡಕ್ಕೆ ಅತ್ಯುತ್ತಮ ಆರಂಭ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.

ಚೆನ್ನೈ ಸೂಪರ್ ಕಿಂಗ್ಸ್‌ ಪರ 2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 16 ಇನಿಂಗ್ಸ್‌ಗಳನ್ನಾಡಿ 45.36ರ ಸರಾಸರಿಯಲ್ಲಿ 635 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ಗಾಯಕ್ವಾಡ್ ಯಶಸ್ವಿಯಾಗಿದ್ದರು. 
(photo source- iplt20.com)

4. ಫಾಫ್ ಡು ಪ್ಲೆಸಿಸ್:
ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ನಾಲ್ಕನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಫಾಫ್ ಡು ಪ್ಲೆಸಿಸ್‌ (Faf du Plessis) ಪಾತ್ರವನ್ನು ಮರೆಯುವಂತಿಲ್ಲ. ಬಹುತೇಕ ಪಂದ್ಯಗಳಲ್ಲಿ ಗಾಯಕ್ವಾಡ್‌ ಜತೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಡು ಪ್ಲೆಸಿಸ್ ಯಶಸ್ವಿಯಾಗಿದ್ದಾರೆ. 
 

ಟೂರ್ನಿಯುದ್ದಕ್ಕೂ ಗಾಯಕ್ವಾಡ್‌ಗೆ ಸಮಸಾಟಿಯಾಗಿ ಫಾಫ್ ಡು ಪ್ಲೆಸಿಸ್ ರನ್‌ ಗಳಿಸಿದ್ದಾರೆ. ಇನ್ನು ಕೋಲ್ಕತ ನೈಟ್‌ ರೈಡರ್ಸ್ ವಿರುದ್ದದ ಫೈನಲ್ ಪಂದ್ಯದಲ್ಲಿ ಆಕರ್ಷಕ 86 ರನ್‌ ಬಾರಿಸುವ ಮೂಲಕ ತಂಡ 4ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಡು ಪ್ಲೆಸಿಸ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಂಡರೆ ಅಚ್ಚರಿ ಪಡುವಂತಿಲ್ಲ.

Latest Videos

click me!