ಈ ಕಾರಣದಿಂದ ಅಥಿಯಾ ಶೆಟ್ಟಿ ಮೇಲೆ ಅಸಮಾಧಾನಗೊಂಡಿರುವ ಕೆಎಲ್‌ ರಾಹುಲ್‌!

First Published | Sep 26, 2021, 4:02 PM IST

ಎರಡನೇ ಹಂತದ IPL ಯುಎಇಯಲ್ಲಿ ನಡೆಯುತ್ತಿದೆ. ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಚಲನಚಿತ್ರ ನಟಿ ಅಥಿಯಾ ಶೆಟ್ಟಿ (Athiya Shetty) ನಡುವಿನ ಸಂಬಂಧದ ಸುದ್ದಿಗಳು ಬಹಳ ದಿನಗಳಿಂದ ಹರಿದಾಡುತ್ತಿದೆ. ಇಬ್ಬರೂ ಆಗಾಗ್ಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಕೆಎಲ್ ರಾಹುಲ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೋತ್ತರ ಸೆಷನ್ ಮಾಡಿದರು. ಈ ಸಮಯದಲ್ಲಿ, ಅವರು ಇಂದು ಏನು ಮಾಡಬೇಕು ಎಂದು ಅವರು ತಮ್ಮ ಅಭಿಮಾನಿಗಳನ್ನು ಕೇಳಿದರು.  ಅಥಿಯಾ ಶೆಟ್ಟಿ ಕೂಡ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ಇದಕ್ಕೆ ರಾಹುಲ್ ತುಂಬಾ ತಮಾಷೆಯ ಉತ್ತರ ನೀಡಿದ್ದಾರೆ. 

ಕಳೆದ ದಿನದಲ್ಲಿ  ಕೆಎಲ್ ರಾಹುಲ್ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ  Q/A ಸೇಷನ್‌ನಲ್ಲಿ ಕಾಣಿಸಿಕೊಂಡರು. ಈ ದಿನ ಅವರು ಏನು ಮಾಡಬೇಕು ಎಂದು ತಮ್ಮ ಅಭಿಮಾನಿಗಳನ್ನು ಕೇಳಿದ್ದರು. ಈ ಸಮಯದಲ್ಲಿ ರಾಹುಲ್‌ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ಅಥಿಯಾ ಸಹ ಪ್ರತಿಕ್ರಿಯಿಸಿದ್ದಾರೆ. 

ಈ ದಿನ ಅವರು ಏನು ಮಾಡಬೇಕು ಎಂದು ಸಲಹೆ ನೀಡುತ್ತೀರಾ ಎಂಬ ರಾಹುಲ್ ಅವರ  ಪೋಸ್ಟ್‌ಗೆ  ಪ್ರತಿಕ್ರಿಯಿಸಿದ ಅಥಿಯಾ ಶೆಟ್ಟಿ,  ಫೇಸ್‌ಟೈಮ್‌ನಲ್ಲಿ ಕಾಲ್ ಅವರಿಗೆ  ಮಾಡಬೇಕು ಎಂದು ಹೇಳಿದರು. ಅಥಿಯಾರಾ ಈ ಕಾಮೆಂಟ್‌ಗೆ ರಾಹುಲ್‌ ತಮಾಷೆಯಾಗಿ ಉತ್ತರ ನೀಡಿದ್ದಾರೆ.

Tap to resize

ಅಥಿಯಾ ಶೆಟ್ಟಿ ಅವರ ಪ್ರತಿಕ್ರಿಯೆಗೆ ರಾಹುಲ್‌ ಸ್ಯಾಡ್‌ ಫೇಸ್‌ನ ಫೋಟೋ ಜೊತೆ 'ನೀನು  ನನ್ನ ಫೇಸ್‌ಟೈಮ್ ಕರೆಯನ್ನು ತೆಗೆದುಕೊಳ್ಳದಿದ್ದಾಗ ಎಂದು ಕ್ಯಾಪ್ಷನ್‌ ನೀಡಿ ಅಥಿಯಾರನ್ನು ಟ್ತಾಗ್‌ ಮಾಡಿದ್ದಾರೆ ಕೆ ಎಲ್‌ ರಾಹುಲ್‌. 

https://kannada.asianetnews.com/cricket-sports/ind-vs-eng-test-suniel-shetty-congratulates-kl-rahul-for-century-at-lords-mah-qxskbj

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ನಡುವಿನ ಸಂಬಂಧದ ಬಗ್ಗೆ ಚರ್ಚೆಗಳು ಆಗಾಗ ನಡೆಯುತ್ತಿರುತ್ತವೆ.  ಬಹಳ ಕಾಲದಿಂದ  ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೂ ಇಬ್ಬರೂ ಅದನ್ನು ದೃಢ ಪಡಿಸಿಲ್ಲ.

https://kannada.asianetnews.com/video/cine-world/anusha-sharma-share-group-picture-with-kl-rahul-and-athiya-shetty-vcs-qx7m93

ಭಾರತೀಯ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಅಥಿಯಾ ಮತ್ತು ರಾಹುಲ್ ಲವ್‌ಸ್ಟೋರಿ ಸಕ್ಕತ್‌ ಪ್ರಚಾರ ಪಡೆಯಿತು. ಇದಕ್ಕೆ ಕಾರಣ ಅಥಿಯಾ ರಾಹುಲ್‌ ಒಟ್ಟಿಗೆ ಇದ್ದರು ಮತ್ತು  ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿರುವ ಹಾಗೂ ಖುಷಿಪಡುತ್ತಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 https://kannada.asianetnews.com/gallery/cine-world/suniel-shetty-opens-up-on-daughter-athiya-and-cricketer-kl-rahul-qwdr4u

ಕೆಎಲ್ ರಾಹುಲ್ ತಮ್ಮ ಫಿಟ್ನೆಸ್‌ಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ.ಒಳಾಂಗಣ ವ್ಯಾಯಾಮಕ್ಕಿಂತ ಹೊರಾಂಗಣ ಚಟುವಟಿಕೆಗಳನ್ನು ರಾಹುಲ್ ಹೆಚ್ಚು ಇಷ್ಟಪಡುತ್ತಾರೆ. ತನ್ನನ್ನು ಫಿಟ್ ಆಗಿಡಲು ಆತ ಫುಟ್ಬಾಲ್, ಬ್ಯಾಸ್ಕೆಟ್ ಬಾಲ್, ವಾಲಿಬಾಲ್ ಮತ್ತು ಸ್ವಿಮ್ಮಿಂಗ್‌ ಮಾಡುತ್ತಾರೆ.

https://kannada.asianetnews.com/cricket-sports/practice-match-team-india-cricketer-kl-rahul-shines-with-century-on-opening-day-against-county-xi-kvn-qwkqvm

Latest Videos

click me!