IPL ಟಿಕೆಟ್‌ಗೆ ಶೇ.40 ಜಿಎಸ್‌ಟಿ! 500 ರುಪಾಯಿ ಟಿಕೆಟ್‌ಗೆ GST ಸೇರಿಸಿದರೆ ಎಷ್ಟಾಗುತ್ತೆ?

Published : Sep 05, 2025, 04:06 PM IST

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಜಾರಿಗೆ ತಂದಿದ್ದು, ಇದೇ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಸಾಮಾನ್ಯ ಜನಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗುವಂತ ಬದಲಾವಣೆಗಳಾಗಿವೆ. ಆದರೆ ಐಪಿಎಲ್‌ ಟಿಕೆಟ್‌ಗೆ 40% ಜಿಎಸ್‌ಟಿ ವಿಧಿಸಲಾಗಿದೆ. ಇದರ ಪರಿಣಾಮವೇನು ನೋಡೋಣ ಬನ್ನಿ 

PREV
15

ಕೇಂದ್ರದ ಜಿಎಸ್‌ಟಿ ಸುಧಾರಣೆ ನೀತಿಯಿಂದ ಐಪಿಎಲ್ ಟಿಕೆಟ್‌ ದರಗಳು ಮತ್ತಷ್ಟು ದುಬಾರಿಯಾಗಲಿದೆ.

25

ಸರ್ಕಾರ ಕ್ಯಾಸಿನೋ, ರೇಸ್‌ ಕ್ಲಬ್‌ ಅಥವಾ ಐಪಿಎಲ್‌ ಟಿಕೆಟ್‌ಗಳ ಮೇಲಿನ ತೆರಿಗೆಯನ್ನು ಶೇ.28ರ ಬದಲು ಶೇ.40ರ ಸ್ಲ್ಯಾಬ್‌ಗೆ ಸೇರಿಸಲಾಗಿದೆ. ಇದರಿಂದ ಸಹಜವಾಗಿಯೇ ಟಿಕೆಟ್‌ ದರದಲ್ಲಿ ಏರಿಕೆಯಾಗಲಿದೆ.

35

ಐಪಿಎಲ್ ಟಿಕೆಟ್‌ಗಳನ್ನು 'ಲಕ್ಸುರಿ ಗೂಡ್ಸ್' ವಿಭಾಗಕ್ಕೆ ಸೇರಿಸಲಾಗಿದೆ. ಹೀಗಾಗಿ ಐಪಿಎಲ್‌ ಟಿಕೆಟ್‌ ಜಿಎಸ್‌ಟಿಯಲ್ಲಿ 40% ತೆರಿಗೆ ವಿಧಿಸಲಾಗಿದೆ.

45

ಮೊದಲು ₹500 ಟಿಕೆಟ್‌ಗೆ ₹140 ಜಿಎಸ್‌ಟಿ ಸೇರಿ ಒಟ್ಟು 640 ರು. ಇತ್ತು. ಆದರೆ ಇನ್ನು ₹500 ಟಿಕೆಟ್‌ಗೆ 40 ಶೇ. ಜಿಎಸ್‌ಟಿ ಇರಲಿದ್ದು, ಬೆಲೆ ₹700 ಆಗಲಿದೆ.

55

ಆದರೆ ಭಾರತದ ಕ್ರಿಕೆಟ್‌ ಪಂದ್ಯ ಹಾಗೂ ಇತರ ಕ್ರೀಡೆಗಳ ಟಿಕೆಟ್‌ಗೆ ಶೇ.18 ತೆರಿಗೆ ಸ್ಲ್ಯಾಬ್‌ ನಿಗದಿಪಡಿಸಲಾಗಿದೆ. ಇದರಲ್ಲಿ ₹500ರ ಒಳಗಿನ ಟಿಕೆಟ್‌ಗೆ ಜಿಎಸ್‌ಟಿ ಅನ್ವಯಿಸಲ್ಲ. ₹500 ಮೇಲ್ಪಟ್ಟರೆ ಶೇ.18 ಜಿಎಸ್‌ಟಿ ಇರಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories