ಭಾರತ ಕ್ರಿಕೆಟ್‌ನ ಟಾಪ್ 6 ಯಶಸ್ವಿ ಕೋಚ್‌ಗಳಿವರು! ಗಂಭೀರ್‌ಗಿಲ್ಲ ಸ್ಥಾನ

Published : Sep 05, 2025, 10:32 AM IST

ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ 11 ಆಟಗಾರರು ಆಡಿದ್ರೂ, ಅವರ ಹಿಂದೆ ಒಬ್ಬ 'ಒನ್ ಮ್ಯಾನ್ ಆರ್ಮಿ' ಇರುತ್ತೆ, ಅವರೇ ಕೋಚ್. ಭಾರತ ಕ್ರಿಕೆಟ್ ತಂಡದ 6 ಯಶಸ್ವಿ ಕೋಚ್‌ಗಳ ಬಗ್ಗೆ ತಿಳಿಯೋಣ. 

PREV
17
1. ಜಾನ್ ರೈಟ್

ನ್ಯೂಜಿಲೆಂಡ್‌ನ ಜಾನ್ ರೈಟ್ ಭಾರತದ ಮೊದಲ ವಿದೇಶಿ ಕೋಚ್ (2000-2005). 2001ರ ಕೋಲ್ಕತ್ತಾ ಟೆಸ್ಟ್‌ನಲ್ಲಿ ಆಸೀಸ್ ವಿರುದ್ಧ ಭಾರತ ಗೆದ್ದಾಗ, ಲಕ್ಷ್ಮಣ್-ದ್ರಾವಿಡ್ 281 ರನ್ ಜೊತೆಯಾಟ ನೀಡಿದ್ರು. ಜಾನ್ ಮಾರ್ಗದರ್ಶನದಲ್ಲಿ ಭಾರತ 2003ರ ವಿಶ್ವಕಪ್ ಫೈನಲ್ ತಲುಪಿತ್ತು. ಇದಷ್ಟೇ ಅಲ್ಲದೇ ಭಾರತ, ವಿದೇಶಗಳಲ್ಲೂ ಸರಣಿ ಗೆದ್ದಿತ್ತು.

27
2. ಗ್ಯಾರಿ ಕರ್ಸ್ಟನ್

ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಭಾರತದ ಯಶಸ್ವಿ ಕೋಚ್ ಎನಿಸಿಕೊಂಡಿದ್ದಾರೆ (2008-2011). ಟೆಸ್ಟ್‌ನಲ್ಲಿ ನಂ.1 ಸ್ಥಾನ, 2011ರ ವಿಶ್ವಕಪ್ ಗೆಲುವು ಅವರ ಕೊಡುಗೆ. ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿ ಗೆಲುವಿನ ಮನೋಭಾವ ತುಂಬಿದ ಕೀರ್ತಿ ಅವರದು.

37
3. ಡಂಕನ್ ಫ್ಲೆಚರ್

ಜಿಂಬಾಬ್ವೆಯ ಡಂಕನ್ ಫ್ಲೆಚರ್ 2011-2015ರಲ್ಲಿ ಭಾರತ ತಂಡದ ಕೋಚ್ ಆಗಿದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವು ಸಾಧಿಸಿತು. ಯುವ ಆಟಗಾರರಿಗೆ ಅವಕಾಶ ನೀಡಿ ತಂಡದ ಚಹರೆಯನ್ನೇ ಬದಲಿಸಿದರು.

47
4. ಅನಿಲ್ ಕುಂಬ್ಳೆ

2016-17ರಲ್ಲಿ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರ ಅವಧಿಯಲ್ಲಿ ಭಾರತ ಆಸೀಸ್, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿತ್ತು. ಆಕ್ರಮಣಕಾರಿ ಮತ್ತು ವೃತ್ತಿಪರ ಮನೋಭಾವ ತಂಡಕ್ಕೆ ತುಂಬಿದ ಕೀರ್ತಿ ಅವರದು.

57
5. ರವಿ ಶಾಸ್ತ್ರಿ

2017-2021ರಲ್ಲಿ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವರ ಅವಧಿಯಲ್ಲಿ ಭಾರತ ಆಕ್ರಮಣಕಾರಿ ಆಟ ಪ್ರದರ್ಶಿಸಿತು. 2018-19 ಮತ್ತು 2020-21ರಲ್ಲಿ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿತು. 2021ರಲ್ಲಿ ಇಂಗ್ಲೆಂಡ್ ವಿರುದ್ಧ 2-1 ಮುನ್ನಡೆ ಸಾಧಿಸಿ, ಟೆಸ್ಟ್‌ನಲ್ಲಿ ನಂ.1 ಸ್ಥಾನ ಮರಳಿ ಪಡೆಯಿತು.

67
6. ರಾಹುಲ್ ದ್ರಾವಿಡ್

2021-2024ರಲ್ಲಿ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಅವಧಿಯಲ್ಲಿ ಭಾರತ 2024ರ ಟಿ20 ವಿಶ್ವಕಪ್ ಗೆದ್ದಿತು. 2023ರ ಏಕದಿನ ವಿಶ್ವಕಪ್ ಫೈನಲ್ ತಲುಪಿತು. ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ 144 ಪಂದ್ಯಗಳಲ್ಲಿ 103 ಗೆಲುವು ಸಾಧಿಸಿತು. 2021 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿತು.

77
ಗೌತಮ್ ಗಂಭೀರ್

ಹಾಲಿ ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತವರಿನಲ್ಲಿ ದಶಕಗಳ ಬಳಿಕ ಸರಣಿ ಸೋಲು ಅನುಭವಿಸಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ಗೇರಲು ವಿಫಲವಾಗಿದೆ. ಹೀಗಾಗಿ ಗಂಭೀರ್ ಸದ್ಯ ಯಶಸ್ವಿ ಕೋಚ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Read more Photos on
click me!

Recommended Stories