1250 ದಿನಗಳ ಬಳಿಕ ನಿವೃತ್ತಿ ವಾಪಾಸ್ ಪಡೆದ ರಾಸ್ ಟೇಲರ್! ಈ ದೇಶದ ಕಣಕ್ಕಿಳಿಯಲು ಮುಂದಾದ ಬಿಗ್ ಹಿಟ್ಟರ್!

Published : Sep 05, 2025, 01:32 PM IST

ಬೆಂಗಳೂರು: ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿಯ ಘಟನೆ ಕಾಣಸಿಗುವುದು ಅಪರೂಪದಲ್ಲೇ ಅಪರೂಪ. ದಶಕಗಳ ಕಾಲ ಒಂದು ದೇಶವನ್ನು ಪ್ರತಿನಿಧಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಆಟಗಾರನೊಬ್ಬ 4 ವರ್ಷಗಳ ಬಳಿಕ ದಿಢೀರ್ ನಿವೃತ್ತಿ ವಾಪಸ್ ಪಡೆದು ಇನ್ನೊಂದು ದೇಶದ ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ. 

PREV
16

ಬಿಗ್ ಹಿಟ್ಟರ್ ರಾಸ್ ಟೇಲರ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ. ಆದರೆ ಈ ಬಾರಿ ಮೈದಾನಕ್ಕಿಳಿಯುತ್ತಿರುವುದು ನ್ಯೂಜಿಲೆಂಡ್ ದೇಶದ ಪರ ಅಲ್ಲ, ಬದಲಾಗಿ ಮತ್ತೊಂದು ದೇಶದ ಪರ. ಇದು ಅಚ್ಚರಿ ಎನಿಸಿದ್ರೂ ಸತ್ಯ.

26

ನ್ಯೂಜಿಲೆಂಡ್ ಪರ 112 ಟೆಸ್ಟ್, 236 ಏಕದಿನ ಹಾಗೂ 102 ಟಿ20 ಪಂದ್ಯವನ್ನಾಡಿರುವ ರಾಸ್ ಟೇಲರ್, ಇದೀಗ ಕಿವೀಸ್ ಬದಲಿಗೆ ಸಮೊಹ ದೇಶದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ.

36

ನ್ಯೂಜಿಲೆಂಡ್ ಪರ ಒಟ್ಟಾರೆ 18,199 ರನ್ ಬಾರಿಸಿರುವ ರಾಸ್ ಟೇಲರ್, 2022ರ ಏಪ್ರಿಲ್‌ನಲ್ಲಿ ಕೊನೆಯ ಬಾರಿಗೆ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಕೂಲಿಂಗ್ ಅವಧಿ ಮುಗಿದಿದ್ದು, ಮತ್ತೊಂದು ದೇಶವನ್ನು ಪ್ರತಿನಿಧಿಸಲು ರಾಸ್ ಟೇಲರ್ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

46

ಹೌದು, 41 ವರ್ಷದ ರಾಸ್ ಟೇಲರ್, 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ, ಪೂರ್ವ ಏಷ್ಯಾ ಫೆಸಿಫಿಕ್ ವಿಭಾಗದಿಂದ ಕ್ವಾಲಿಫೈಯರ್ ಆಗಲು ಸಮೊಹ ತಂಡವು ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಸಮೊಹ ತಂಡದ ಪರ ಮೈದಾನಕ್ಕಿಳಿಯಲು ರಾಸ್ ಟೇಲರ್ ಸಜ್ಜಾಗಿದ್ದಾರೆ.

56

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಅಕ್ಟೋಬರ್ 8, 2025ರಿಂದ ಆರಂಭವಾಗಲಿವೆ. ಈ ಪೈಕಿ ಪೂರ್ವ ಏಷ್ಯಾ ಫೆಸಿಫಿಕ್ ವಿಭಾಗದಿಂದ ಸಮೊಹ ತಂಡವು ಕೂಡಾ ಪಾಲ್ಗೊಳ್ಳುತ್ತಿದ್ದು, ಈ ತಂಡದಲ್ಲಿ ರಾಸ್ ಟೇಲರ್ ಸ್ಥಾನ ಪಡೆದಿದ್ದಾರೆ.

66

ನಾನು ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಾಸ್ಸಾಗುತ್ತಿರುವುದು ಒಂದು ರೀತಿಯ ಖುಷಿಯ ಕ್ಷಣವಾಗಿದೆ. ನನ್ನ ಅನುಭವವನ್ನು ಯುವ ಆಟಗಾರರ ಜತೆ ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ರಾಸ್ ಟೇಲರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Read more Photos on
click me!

Recommended Stories