ಐಪಿಎಲ್ ಟೂರ್ನಿ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಮತ್ತೊಂದು ತಂಡ ಸೇರ್ಪಡೆ ಕುರಿತು ಮುಖ್ಯಮಂತ್ರಿ ಸುಳಿವು ನೀಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸೇರಿಕೊಳ್ಳಲು ಬಯಸಿದ ಮತ್ತೊಂದು ತಂಡ ಯಾವುದು?
ಐಪಿಎಲ್ ಟೂರ್ನಿಯಲ್ಲಿ ಸದ್ಯ 10 ತಂಡಗಳು ಹೋರಾಟ ನಡೆಸುತ್ತಿದೆ. ಆದರೆ ಶೀಘ್ರದಲ್ಲೇ ಮತ್ತೊಂದು ತಂಡ ಸೇರ್ಪಡೆಗೊಳ್ಳುತ್ತಿದೆ. ಈ ಕುರಿತು ಮುಖ್ಯಮಂತ್ರಿಯೇ ಸುಳಿವು ನೀಡಿದ್ದಾರೆ. ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಜನಪ್ರಿಯತೆ ಬೆನ್ನಲ್ಲೇ ಹೊಸ ತಂಡದ ಸುಳಿವು ಸಿಕ್ಕಿದೆ.
25
ಬಿಹಾರದಿಂದ ಲೀಗ್ ತಂಡದ ಸುಳಿವು
ಬಿಹಾರದ ಮೂಲದ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾರಿ ಜನಪ್ರಿಯರಾಗಿದ್ದಾರೆ. ವೈಭವ್ ಜನಪ್ರಿಯತೆ ಬೆನ್ನಲ್ಲೇ ಇದೀಗ ಬಿಹಾರದಲ್ಲಿ ತಮ್ಮ ತಂಡ ಒಂದು ಐಪಿಎಲ್‌ನಲ್ಲಿ ಇರಬೇಕು ಅನ್ನೋ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ ವೇದಾಂತ ಗ್ರೂಪ್ ಚೇರ್ಮೆನ್ ಅನಿಲ್ ಅಗರ್ವಾಲ್ ಈ ಕುರಿತು ಮಾತನಾಡಿದ್ದಾರೆ. ಬೆಂಗಳೂರು, ಚೆನ್ನೈ, ಕೋಲ್ಕತಾ ರೀತಿಯಲ್ಲೇ ಬಿಹಾರದಿಂದ ಒಂದು ತಂಡ ಇರಬೇಕು ಎಂದಿದ್ದಾರೆ.
35
ಬಿಹಾರ ಮುಖ್ಯಮಂತ್ರಿಯಿಂದ ಸುಳಿವು
ಭಾರತೀಯ ಕ್ರಿಕೆಟ್‌ಗೆ ಬಿಹಾರ ಉತ್ತಮ ಕೊಡುಗೆ ನೀಡಿದೆ. ಹೀಗಾಗಿ ಬಿಹಾರದಿಂದ ಒಂದು ಐಪಿಎಲ್ ತಂಡ ಇರಬೇಕು ಅನ್ನೋ ಮಾತನ್ನು ಹೇಳಿದ್ದಾರೆ. ಈ ಕುರಿತು ಪೋಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಹಾರ ಮುಖ್ಯಮಂತ್ರಿ ಸಾಮ್ರಾಟ ಚೌಧರಿ ರಿಪೋಸ್ಟ್ ಮಾಡಿ ಹೊಸ ತಂಡದ ಸುಳಿವು ನೀಡಿದ್ದಾರೆ.
ಕ್ರಿಕೆಟ್ ಮೇಲಿನ ಭಾವನೆಗಳಿಗೆ ಬಿಹಾರ ಸರ್ಕಾರ ಸ್ಪಂದಿಸುತ್ತಿದೆ. ಈ ಕುರಿತು ಬಿಹಾರ ಸರ್ಕಾರ ಗುರಿ ಸಾಧಿಸಲು ಕಾರ್ಯನಿರ್ವಹಿಸುತ್ತಿದೆ. ನಿಮ್ಮ ಸಹಾಕಾರದೊಂದಿದೆ ಬಿಹಾರ ಕ್ರಿಕೆಟ್‌ಗಾಗಿ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಸಮ್ರಾಟ ಚೌಧರಿ ಹೇಳಿದ್ದಾರೆ.
55
ಬಿಹಾರದ ಯುವ ಕ್ರಿಕೆಟಿಗರಿಗಾಗಿ ತಂಡ ಖರೀದಿಸ ಮುಂದೆ ಬಂದ ಉದ್ಯಮಿ
ಉದ್ಯಮಿ, ಕೈಗಾರಿಕೋದ್ಯಮಿ ಅನಿಲ್ ಅಗರ್ವಾಲ್ ಬಿಹಾರ ಕ್ರಿಕೆಟ್ ಅಭಿವೃದ್ಧಿಗೆ ಕೈಜೋಡಿಸಲು ಸಿದ್ದಿರಿರುವುದಾಗಿ ಹೇಳಿದ್ದಾರೆ. ಬಿಹಾರದ ತಂಡಕ್ಕಾಗಿ ನನ್ನ ಎಲ್ಲಾ ಸಹಕಾರ ಬೆಂಬಲ ಇದ್ದೇ ಇದೆ ಎಂದು ಅನಿಲ್ ಅಗರ್ವಾಲ್ ಹೇಳಿದ್ದಾರೆ. ಇದರೊಂದಿಗೆ ಐಪಿಎಲ್ ಟೂರ್ನಿಗೆ ಬಿಹಾರ ತಂಡ ಎಂಟ್ರಿಕೊಡುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಇದಕ್ಕೆ ಬಿಸಿಸಿಐ ಆವಕಾಶ ನೀಡುತ್ತಾ? ಸಾಧ್ಯೆತೆಗಳ ಕುರಿತು ಚರ್ಚೆಗಳಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.