ಸತತ ಮೂರನೇ ಬಾರಿಗೆ IPL ಲೀಗ್‌ನಲ್ಲೇ ಸಿಎಸ್‌ಕೆ ಔಟ್; ಈ ಐವರಿಗೆ ಗೇಟ್ ಪಾಸ್ ಕೊಡಲು ರೆಡಿಯಾದ ಚೆನ್ನೈ ಫ್ರಾಂಚೈಸಿ!

Published : May 22, 2026, 03:53 PM IST

ಬೆಂಗಳೂರು: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಇದೀಗ ಸತತ ಮೂರನೇ ಬಾರಿಗೆ ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ಮುಖಭಂಗ ಅನುಭವಿಸಿದೆ. ಇದರ ಬೆನ್ನಲ್ಲೇ ಸಿಎಸ್‌ಕೆ ಫ್ರಾಂಚೈಸಿ ತಂಡದಲ್ಲಿ ಮೇಜರ್ ಸರ್ಜರಿಗೆ ಮುಂದಾಗಿದ್ದು, ಈ ಐದು ಆಟಗಾರರಿಗೆ ಗೇಟ್‌ಪಾಸ್ ನೀಡಲು ರೆಡಿಯಾಗಿದೆ.

PREV
16
ಐಪಿಎಲ್ ಲೀಗ್ ಹಂತದಲ್ಲೇ ಸಿಎಸ್‌ಕೆ ಅಭಿಯಾನ ಅಂತ್ಯ

19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಯಾನ ಲೀಗ್ ಹಂತದಲ್ಲೇ ಕೊನೆಯಾಗಿದೆ. ಸಿಎಸ್‌ಕೆ ಆರಂಭದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿತ್ತು. ಆದರೆ ಆ ಬಳಿಕ ಕಮ್‌ಬ್ಯಾಕ್ ಮಾಡಿತ್ತು. ಇನ್ನು ಕೊನೆಯ ಮೂರು ಪಂದ್ಯಗಳನ್ನು ಸೋಲುವ ಮೂಲಕ ಪ್ಲೇ ಆಫ್‌ಗೇರುವ ಅವಕಾಶ ಕೈಚೆಲ್ಲಿತು. ಇದೀಗ ಸಿಎಸ್‌ಕೆ ಫ್ರಾಂಚೈಸಿ ಕೆಲ ಆಟಗಾರರನ್ನು ಕಿಕೌಟ್ ಮಾಡಲು ರೆಡಿಯಾಗಿದೆ. ಯಾರವರು ನೋಡೋಣ ಬನ್ನಿ.

26
1. 14 ಕೋಟಿ ರುಪಾಯಿ ಆಟಗಾರ ಪ್ರಶಾಂತ್ ವೀರ್‌ಗೆ ಗೇಟ್‌ಪಾಸ್:

ಕಳೆದ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 14.20 ಕೋಟಿ ರುಪಾಯಿಗೆ ಸಿಎಸ್‌ಕೆ ತೆಕ್ಕೆಗೆ ಬಂದಿದ್ದ ಪ್ರಶಾಂತ್ ವೀರ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಪ್ರಶಾಂತ್ ವೀರ್ ಆರು ಪಂದ್ಯಗಳಿಂದ ಕೇವಲ 90 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಇನ್ನು ಬೌಲಿಂಗ್‌ನಲ್ಲೂ ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಶಾಂತ್ ವೀರ್‌ಗೆ ಗೇಟ್‌ ಪಾಸ್ ನೀಡಿ ಹರಾಜಿನಲ್ಲಿ ಬೇರೆ ಆಟಗಾರರನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ ಸಿಎಸ್‌ಕೆ.

36
2. ಆಸೀಸ್ ಮೂಲದ ಕ್ರಿಕೆಟಿಗ ಮ್ಯಾಥ್ಯೂ ಶಾರ್ಟ್ ರಿಲೀಸ್:

ಆಸೀಸ್ ಮೂಲದ ಕ್ರಿಕೆಟಿಗ ಮ್ಯಾಥ್ಯೂ ಶಾರ್ಟ್ ಕೂಡಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದರು. ಸಿಎಸ್‌ಕೆ ಪರ ಆಡಿದ ಮೂರು ಪಂದ್ಯಗಳಿಂದ ಶಾರ್ಟ್ ಕೇವಲ 60 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಶಾರ್ಟ್‌ ಅವರನ್ನು ತಂಡದಿಂದ ರಿಲೀಸ್‌ ಮಾಡುವ ಚಿಂತನೆಯಲ್ಲಿದೆ ಸಿಎಸ್‌ಕೆ ಫ್ರಾಂಚೈಸಿ.

46
3. ಕಾರ್ತಿಕ್ ಶರ್ಮಾರನ್ನು ಬಿಟ್ಟು ಹಿಡಿಯಲು ಪ್ಲಾನ್:

ಪ್ರಶಾಂತ್ ವೀರ್ ಜತೆಗೆ ಕಾರ್ತಿಕ್ ಶರ್ಮಾಗೂ ಸಿಎಸ್‌ಕೆ ಫ್ರಾಂಚೈಸಿ 14.20 ಕೋಟಿ ನೀಡಿ ಖರೀದಿಸಿತ್ತು. ಕಾರ್ತಿಕ್ ಶರ್ಮಾ ಸಿಎಸ್‌ಕೆ ಪರ 11 ಪಂದ್ಯಗಳನ್ನಾಡಿ 295 ರನ್ ಸಿಡಿಸಿದ್ದರು. ಆದರೆ 14.20 ಕೋಟಿ ಬೆಲೆಗೆ ಕಾರ್ತಿಕ್ ಶರ್ಮಾ ಪ್ರದರ್ಶನ ಸಾಕಾಗಲಿಲ್ಲ. ಹೀಗಾಗಿ ಕಾರ್ತಿಕ್ ಶರ್ಮಾ ರಿಲೀಸ್ ಮಾಡಿ ಮಿನಿ ಹರಾಜಿನಲ್ಲಿ ಮತ್ತೆ ಕಡಿಮೆ ಮೊತ್ತಕ್ಕೆ ಖರೀದಿಸುವ ಲೆಕ್ಕಾಚಾರದಲ್ಲಿದೆ ಸಿಎಸ್‌ಕೆ ಫ್ರಾಂಚೈಸಿ.

56
4. ಸ್ಪೆನ್ಸರ್ ಜಾನ್ಸನ್ ಕಿಕೌಟ್:

ನೇಥನ್ ಎಲ್ಲಿಸ್‌ ಗಾಯಗೊಂಡು ಹೊರಬಿದ್ದರಿಂದ ಸ್ಪೆನ್ಸರ್ ಜಾನ್ಸನ್ ಸಿಎಸ್‌ಕೆ ತಂಡ ಕೂಡಿಕೊಂಡಿದ್ದರು. ಸ್ಪೆನ್ಸರ್ ಜಾನ್ಸನ್ ಈ ಬಾರಿ ಸಿಎಸ್‌ಕೆ ಪರ 3 ಪಂದ್ಯಗಳನ್ನಾಡಿ ಕೇವಲ ಎರಡು ವಿಕೆಟ್ ಪಡೆದಿದ್ದರು. ಹೀಗಾಗಿ ಸ್ಪೆನ್ಸರ್ ಜಾನ್ಸನ್‌ಗೂ ಸಿಎಸ್‌ಕೆ ಗೇಟ್‌ಪಾಸ್ ನೀಡೋದು ಕನ್ಫರ್ಮ್.

66
5. ಮ್ಯಾಟ್ ಹೆನ್ರಿಗೂ ಗೇಟ್‌ಪಾಸ್ ಫಿಕ್ಸ್:

ಕಿವೀಸ್ ಮೂಲದ ವೇಗಿ ಮ್ಯಾಚ್ ಹೆನ್ರಿ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ಪರ ಮಾರಕ ದಾಳಿ ನಡೆಸಲು ವಿಫಲವಾದರು. ಈ ಸೀಸನ್ ಐಪಿಎಲ್‌ನಲ್ಲಿ ಹೆನ್ರಿ 3 ಪಂದ್ಯಗಳನ್ನಾಡಿ ಎರಡು ವಿಕೆಟ್ ಕಬಳಿಸಲಷ್ಟೇ ಶಕ್ತರಾದರು. ಸಿಎಸ್‌ಕೆ ಫ್ರಾಂಚೈಸಿಯು ಎರಡು ಕೋಟಿ ನೀಡಿ ಹೆನ್ರಿಯನ್ನು ಖರೀದಿಸಿತ್ತು. ಆದರೆ ಹೆನ್ರಿಯನ್ನು ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories