ಇಂಧನ ಸಂಕಷ್ಟದಿಂದ ಐಪಿಎಲ್ ಟೂರ್ನಿ ಎರಡೇ ಕ್ರೀಡಾಂಗಣಕ್ಕೆ ಸೀಮಿತಗೊಳಿಸುವುದು, ಅನಗತ್ಯ ಓಡಾಟಗಳಿಗೆ ನಿರ್ಬಂಧ, ಪ್ರಯಾಣ ಕಡಿತ ಸೇರಿದಂತೆ ಹಲವು ಬದಲಾವಣೆ ಮಾಡಲಾಗುತ್ತಿದೆಯಾ? ಈ ಕುರಿತು ಐಪಿಎಲ್ ಚೇರ್ಮನ್ ಸ್ಪಷ್ಟನೆ ನೀಡಿದ್ದಾರೆ.
ಒಂದೊಂದು ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ, ಪ್ರಯಾಣ, ಐಪಿಎಲ್ ಪಂದ್ಯ ನೋಡಲು ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರ ಆಗಮನ ಸೇರಿದಂತೆ ಎಲ್ಲವೂ ಅನಗತ್ಯ ಇಂಧನ ಖರ್ಚಿಗೆ ಕಾರಣವಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಟೂರ್ನಿಯನ್ನು 2 ಕ್ರೀಡಾಂಗಣಕ್ಕೆ ಸೀಮಿತಗೊಳಿಸಿ ಹಲವು ನಿರ್ಬಂಧ ವಿಧಿಸುವ ಕುರಿತು ಭಾರಿ ಚರ್ಚೆಗಾಳುತ್ತಿದೆ. ಈ ಕುರಿತು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಸ್ಪಷ್ಟನೆ ನೀಡಿದ್ದಾರೆ.
25
ಇಂಧನ ಮಿತ ಬಳಕೆಯತ್ತ ಐಪಿಎಲ್?
ಇಂಧನ ಸಂಕಷ್ಟದಿಂದ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮಿತ ಬಳಕೆಗೆ ಸೂಚನೆ ನೀಡಿದ್ದಾರೆ. ಇದರಂತೆ ಮಂತ್ರಿಗಳು, ಶಾಸಕರು ಸಾರಿಗೆ ಬಳಕೆಗೆ ಒತ್ತು ನೀಡಿದ್ದಾರೆ. ಹಲವರು ಮೋದಿ ಕರೆಗೆ ಒಗೊಟ್ಟು ಮಿತ ಬಳಕೆಯತ್ತ ನಡೆಯುತ್ತಿದ್ದಾರೆ. ಇದರಂತೆ ಐಪಿಎಲ್ ಟೂರ್ನಿಯೂ ಚರ್ಚೆಯಾಗಿದೆ. ಈ ಕುರಿತು ಮಾತನಾಡಿದ ಅರುಣ್ ಧುಮಾಲ್, ಸದ್ಯ ಯಾವುದೇ ಸೂಚನೆ ಕೇಂದ್ರ ಸರ್ಕಾರದಿಂದ ಬಂದಿಲ್ಲ. ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
35
ಐಪಿಎಲ್ ಚೇರ್ಮನ್ ಹೇಳಿದ್ದೇನು?
ಐಪಿಎಲ್ 2026 ಟೂರ್ನಿ ಅಂತಿಮ ಹಂತದಲ್ಲಿದೆ. ಕೆಲವೇ ಕೆಲವು ಪಂದ್ಯಗಳು ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರ್ಕಾರ ಸದ್ಯ ಯಾವುದೇ ಸೂಚನೆ ನೀಡಿಲ್ಲ. ಒಂದು ವೇಳೆ ನೀಡಿದರೆ ಎಲ್ಲಾ ಸೂಚನೆ ಪಾಲಿಸುತ್ತೇವೆ. ಈಗಾಗಲೇ ಬಿಸಿಸಿಐ ಅನಗತ್ಯ ಪ್ರಯಾಣಗಳಿಗೆ ಕಡಿವಾಣ ಹಾಕಿದೆ. ಟೂರ್ನಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅರುಣ್ ಧುಮಾಲ್ ಸ್ಪಷ್ಟನೆ ನೀಡಿದ್ದಾರೆ.
ಐಪಿಎಲ್ ಅಂತಿಮ ಘಟ್ಟದಲ್ಲಿರುವ ಇರುವ ಕಾರಣ ಈ ಸಂದರ್ಭದಲ್ಲಿ ಬದಲಾವಣೆ ಮಾಡಲು ಟೂರ್ನಿಯಲ್ಲಿ ಹೆಚ್ಚಿ ಲೀಗ್ ಪಂದ್ಯಗಳಿಲ್ಲ. ಪ್ಲೇ ಆಫ್ ಪಂದ್ಯಗಳು ಸೀಮಿತ ಕ್ರೀಡಾಂಗಣದಲ್ಲೇ ನಡೆಯಲಿದೆ. ಫೈನಲ್ ವೇಳೆ ಮಿತಬಳಕೆಯತ್ತ ಬಿಸಿಸಿಐ ಹೆಜ್ಜೆ ಇಡಲಿದೆ. ಮೇ.31ಕ್ಕೆ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ ಎಂದು ಐಪಿಎಲ್ ಚೇರ್ಮನ್ ಹೇಳಿದ್ದಾರೆ.
55
ಕೇಂದ್ರ ಸರ್ಕಾರದ ಸೂಚನೆ ಪಾಲಿಸುತ್ತೆ ಬಿಸಿಸಿಐ
ಕೆಲ ಎಜೆನ್ಸಿಗಳು, ಸಂಸ್ಥೆಗಳು ಮಿತ ಬಳಕೆ ಕುರಿತು ಚರ್ಚಿಸಿದೆ. ಐಪಿಎಲ್ ಟೂರ್ನಿ ಕುರಿತು ಚರ್ಚೆಗಳಾಗಿದೆ. ಆದರೆ ಬಿಸಿಸಿಐ ನೇರವಾಗಿ ಭಾರತ ಸರ್ಕಾರದ ಎಲ್ಲಾ ಮಾರ್ಗಸೂಚಿ, ನಿರ್ದೇಶನ ಪಾಲಿಸುತ್ತದೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದರೂ ಬಿಸಿಸಿಐ ಪಾಲಿಸಲು ಬದ್ಧವಾಗಿದೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.