ಸಿಎಸ್‌ಕೆ ಫ್ಯಾನ್ಸ್‌ನಿಂದ ಆರ್‌ಸಿಬಿ ಗೆಲ್ಲಲು ಪ್ರಾರ್ಥನೆ, RCB-PBKS ನಿರ್ಧರಿಸುತ್ತೆ ಚೆನ್ನೈ ಪ್ಲೇಆಫ್ ಹಣೆಬರಹ

Published : May 17, 2026, 09:41 AM IST

ಸಿಎಸ್‌ಕೆ ಅಭಿಮಾನಿಗಳು ಇದೀಗ ಆರ್‌ಸಿಬಿ ತಂಡ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆ. ಇಂದು ನಡೆಯಲಿರುವ ಆರ್‌ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಫಲಿತಾಂಶ ಮೇಲೆ ಸಿಎಸ್‌ಕೆ ತಂಡದ ಪ್ಲೇಆಫ್ ಅವಕಾಶ, ಎಲಿಮಿನೇಶನ್ ನಿರ್ಧಾರವಾಗಲಿದೆ.

PREV
15
ಚೆನ್ನೈ ತಂಡದ ಭವಿಷ್ಯ ಆರ್‌ಸಿಬಿ ಕೈಯಲ್ಲಿ

ಐಪಿಎಲ್ 2026ರ ಲೀಗ್ ಪಂದ್ಯಗಳು ಅಂತಿಮ ಹಂತದಲ್ಲಿದೆ. ಎರಡು ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇತ್ತ ಟೇಬಲ್ ಟಾಪ್‌ನಲ್ಲಿರುವ 4 ತಂಡಗಳು ಇನ್ನೂ ಅಧಿಕೃತವಾಗಿ ಪ್ಲೇಆಫ್ ಖಚಿತಪಡಿಸಿಲ್ಲ. ಹೀಗಾಗಿ ಟೂರ್ನಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇಂದಿನ ಆರ್‌ಸಿಬಿ ಪಂಜಾಬ್ ನಡುವಿನ ಪಂದ್ಯದ ಮತ್ತೊಂದು ವಿಶೇಷತೆ ಎಂದರೆ ಈ ಫಲಿತಾಂಶ, ಸಿಎಸ್‌ಕೆ ತಂಡದ ಭವಿಷ್ಯ ನಿರ್ಧರಿಸಲಿದೆ.

25
ಸಂಕಷ್ಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್

ಲಖನೌ ವಿರುದ್ಧ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ 6ನೇ ಸ್ಥಾನಕ್ಕೆ ಕುಸಿದಿದೆ. ನೆಟ್ ರನ್‌ರೇಟ್ +0.027. ಹೀಗಾಗಿ ಮುಂದಿನ 2 ಪಂದ್ಯದಲ್ಲಿ ಚೆನ್ನೈ ಗೆಲ್ಲಲೇಬೇಕು. ಇಷ್ಟಾದರೆ ಪ್ಲೇ ಆಫ್ ಅವಕಾಶವಿಲ್ಲ. ಇದರ ಜೊತೆಗೆ ಅದೃಷ್ಠವೂ ಬೇಕು. ಹೀಗಾಗಿ ಇಂದಿನ ಆರ್‌ಸಿಬಿ ಹಾಗೂ ಪಂಜಾಬ್ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ ಮಾತ್ರ ಚೆನ್ನೈ ಪ್ಲೇ ಆಫ್ ಅವಕಾಶ ಜೀವಂತವಾಗಲಿದೆ.

35
ಸಿಎಸ್‌ಕೆ ಪ್ಲೇ ಆಫ್ ಲೆಕ್ಕಾಚಾರ

ಸಿಎಸ್‌ಕೆಗೆ ತಂಡಕ್ಕೆ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ವಿರುದ್ಧ 2 ಪಂದ್ಯ ಬಾಕಿ ಇದೆ. ಇಂದು ಪಂಜಾಬ್ ವಿರುದ್ಧ ಆರ್‌ಸಿಬಿ ಗೆದ್ದರೆ ಬೆಂಗಳೂರು ತಂಡದ ಪ್ಲೇ ಆಫ್ ಖಚಿತಗೊಳ್ಳಲಿದೆ. ಸದ್ಯ 4ನೇ ಸ್ಥಾನದಲ್ಲಿರುವ ಪಂಜಾಬ್ 12 ಪಂದ್ಯಗಳಿಂದ 13 ಅಂಕ ಪಡೆದಿದೆ. ಇತ್ತ ಸಿಎಸ್‌ಕೆ 12 ಪಂದ್ಯಗಳಿಂದ 12 ಅಂಕ ಪಡೆದಿದೆ. ಆರ್‌ಸಿಬಿ ವಿರುದ್ಧ ಸೋತು, ಕೊನೆಯ ಪಂದ್ಯದಲ್ಲಿ ಪಂಜಾಬ್ ಗೆದ್ದರೆ 15 ಅಂಕ ಆಗಲಿದೆ. ಇತ್ತ ಚೆನ್ನೈ ಕೊನೆಯ ಎರಡು ಪಂದ್ಯ ಗೆದ್ದರೆ 16 ಅಂಕ ಪಡೆಯಲಿದೆ.

45
ಚೆನ್ನೈ ಪ್ಲೇ ಆಫ್ ರೇಸ್

ಆರ್‌ಸಿಬಿ ವಿರುದ್ಧ ಪಂಜಾಬ್ ಸೋತರೆ ಪಂಜಾಬ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿಯಲಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಇದರ ಜೊತೆ ಸಿಎಸ್‌ಕೆ ಕೂಡ ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಟಾಪ್ ಎರಡು ಸ್ಥಾನದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಉಳಿದುಕೊಳ್ಳಲಿದೆ.

55
ಆರ್‌ಸಿಬಿ ಪರ ಚೆನ್ನೈ ಅಭಿಮಾನಿಗಳ ಜೈಕಾರ

ಆರ್‌ಸಿಬಿ ತಂಡದ ಪರ ಚೆನ್ನೈ ಅಭಿಮಾನಿಗಳು, ತಮಿಳುನಾಡು ಮೂಲದ ಕಮೆಂಟೇಟರ್ಸ್ ನ್ಯೂಟ್ರಲ್ ಮಾತುಗಳನ್ನು ಆಡಿಲ್ಲ. ಆರ್‌ಸಿಬಿ ಸೋಲಲಿ, ಆಟಗಾರ ಸಾಯಲಿ ಅನ್ನೋ ಪದಗಳನ್ನೇ ಬಳಸಿದ್ದಾರೆ. ಆದರೆ ಈ ಬಾರಿ ಚೆನ್ನೈ ಅಭಿಮಾನಿಗಳು, ಕಮೆಂಟೇಟರ್ಸ್ ಆರ್‌ಸಿಬಿ ಪರ ಜೈಕಾರ ಹಾಕುತ್ತಿದ್ದಾರೆ. ಆರ್‌ಸಿಬಿ ಗೆಲ್ಲಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories