ತವರಿನಲ್ಲಿ ನನ್ನ ಕೊನೆಯ ಏಕದಿನ ಪಂದ್ಯ ರಾಂಚಿ. ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲಿ. ಇದು ಧೋನಿ ಹೇಳಿದ ಮಾತು. ಈ ಐಪಿಎಲ್‌ನಲ್ಲಿ ಒಂದು ಪಂದ್ಯ ಆಡದ ಧೋನಿ ಇಂದು ಚೆನ್ನೈನಲ್ಲಿ ವಿದಾಯದ ಪಂದ್ಯ ಆಡುವ ಸಾಧ್ಯತೆ ಇದೆ.
2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತವರಿನಲ್ಲಿ ಕೊನೆಯ ಲೀಗ್ ಪಂದ್ಯ ಆಡುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಂಜುರಿ ಕಾರಣದಿಂದ ಹೊರಗುಳಿದ ಧೋನಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯಕ್ಕಾಗಿ ಚೆನ್ನೈನಲ್ಲಿ ತಂಡ ಸೇರಿಕೊಂಡಿದ್ದಾರೆ. ಅಭ್ಯಾಸವನ್ನು ನಡೆಸಿದ್ದಾರೆ. ಇದರ ನಡುವೆ ಧೋನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಜೊತೆಗೆ ಇದು ವಿದಾಯದ ಪಂದ್ಯ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಧೋನಿ ಹೇಳಿದ ಮಾತೇ ಕಾರಣ.
25
ಧೋನಿ ವಿದಾಯದ ಪಂದ್ಯ
ತವರಿನಲ್ಲಿ ಸಿಎಸ್‌ಕೆ ಕೊನೆಯ ಪಂದ್ಯ ಆಡುತ್ತಿದೆ. ಅಂತಿಮ ಎರಡು ಪಂದ್ಯ ಗೆದ್ದರೆ ಸಿಎಸ್‌ಕೆಗೆ ಪ್ಲೇಆಫ್ ಅವಕಾಶ ತೆರೆಯಲಿದೆ. ಇತ್ತ ಧೋನಿ ಇಂದಿನ ಪಂದ್ಯ ಆಡಿ ಐಪಿಎಲ್ ಟೂರ್ನಿಯಿಂದಲೂ ವಿದಾಯ ಹೇಳುವ ಸಾಧ್ಯತೆ ಕಾಣಿಸುತ್ತಿದೆ. ಇಂಜುರಿಯಿಂದ ಚೇತರಿಸಿಕೊಂಡು ಬಂದಿರುವ ಧೋನಿಗೆ ಇಂದೇ ಕೊನೆಯ ಪಂದ್ಯ ಆಗಲು ಧೋನಿ ಹೇಳಿದ ಚೆನ್ನೈ ಮಾತು ಕಾರಣವಾಗಿದೆ.
35
ಚೆನ್ನೈನಲ್ಲಿ ನನ್ನ ಕೊನೆಯ ಪಂದ್ಯ
2021ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಧೋನಿ ವಿದಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ನನ್ನ ಕ್ರಿಕೆಟ್ ಕುರಿತು ನನಗೆ ಯಾವತ್ತೂ ಪ್ಲಾನ್ ಇರುತ್ತೆ. ತವರಿನಲ್ಲಿ ನಾನು ಕೊನೆಯ ಏಕದಿನ ಪಂದ್ಯವನ್ನು ಹುಟ್ಟೂರು ರಾಂಚಿಯಲ್ಲಿ ಆಡಿದ್ದೆ. ಟಿ20 ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡುತ್ತೇನೆ. ಅದು ಮುಂದಿನ ಬಾರಿ ಅಥವಾ ಮುಂದಿನ 5 ವರ್ಷದಲ್ಲಿ, ಯಾವತ್ತು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು.
ಧೋನಿ ಹೇಳಿದಂತೆ ಇಂದಿಗೆ 5 ವರ್ಷವಾಗಿದೆ. ಇತ್ತ ಧೋನಿ ಆಸೆಯಂತೆ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ಕೊನೆಯ ಲೀಗ್ ಪಂದ್ಯ ಇದಾಗಿದೆ. ಇಷ್ಟೇ ಅಲ್ಲ ಇಂಜುರಿಯಿಂದ ಒಂದು ಪಂದ್ಯ ಆಡದ ಧೋನಿ ಇದೀಗ ಚೇತರಿಸಿಕೊಂಡು ಅಭ್ಯಾಸ ಕೂಡ ಮಾಡಿದ್ದಾರೆ. ಮುಂದಿನ ವರ್ಷ ಫಿಟ್ನೆಸ್, ಇಂಜುರಿ ಕಾರಣಗಳಿಂದ ಧೋನಿ ಐಪಿಎಲ್ ಆಡುವ ಸಾಧ್ಯತೆ ಕಡಿಮೆ. ಹೀಗಾಗಿ ಇಂದು ಧೋನಿ ವಿದಾಯದ ಪಂದ್ಯ ಆಡುವ ಸಾಧ್ಯತೆ ಹೆಚ್ಚು.
55
2025ರ ಬಳಿಕ ಐಪಿಎಲ್ ಪಂದ್ಯ ಆಡಿಲ್ಲ ಧೋನಿ
2026ರಲ್ಲಿ ಧೋನಿ ಒಂದು ಐಪಿಎಲ್ ಪಂದ್ಯ ಆಡಿಲ್ಲ. ಕೊನೆಯ ಐಪಿಎಲ್ ಪಂದ್ಯ ಆಢಿದ್ದು 2025ರ ಆವೃತ್ತಿಯಲ್ಲಿ. ಗುಜರಾತ್ ಟೈಟಾನ್ಸ್ ವಿರುದ್ಧ ಧೋನಿ ಆಡಿದ್ದರು. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡಿಲ್ಲ, ಕೀಪಿಂಗ್ ವೇಳೆ ಒಂದು ಕ್ಯಾಚ್ ಹಿಡಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.