ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತೊರೆಯಲು ಸಜ್ಜಾಗಿರುವ ಹಾರ್ದಿಕ್ ಪಾಂಡ್ಯ, ಆರ್‌ಸಿಬಿ ಸೇರಿಕೊಳ್ಳುತ್ತಾರಾ?
ಟೀಂ ಇಂಡಿಯಾ ಆಲ್‌ರೌಂಡರ್ ಮುಂಬೈನಲ್ಲಿ ಸೆಟ್ಲ್ ಆಗಿ ಹಲವು ವರ್ಷಗಳು ಉರುಳಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದೊಳಗಿನ ಒಡಕು, ಜಟಾಪಟಿ ಹಾರ್ದಿಕ್ ಪಾಂಡ್ಯ ಕರಿಯರ್‌ನಲ್ಲೂ ಬಿರುಗಾಳಿ ಎಬ್ಬಿಸಿದೆ. ಇದೀಗ ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಇದರ ಬೆನ್ನಲ್ಲೇ ಆರ್‌ಸಿಬಿ ಚರ್ಚೆಗಳು ಶುರುವಾಗಿದೆ.
26
ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದ ಹಾರ್ದಿಕ್ ಪಾಂಡ್ಯ
ಬರೋಡಾ ಮೂಲದ ಹಾರ್ದಿಕ್ ಪಾಂಡ್ಯ ಸರಿಸುಮಾರು ಕಳೆದ 10 ವರ್ಷಗಳಿಂದ ಮುಂಬೈನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಇದೀಗ ಮುಂಬೈನ ಲೊವರ್ ಪರೇಲ್‌ನಲ್ಲಿರುವ ಮನೆ ತೊರೆದು ಇದೀಗ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದಾರೆ.ಬೆಂಗಳೂರಿನ ಹೊರವಲಯದಲ್ಲಿ ಹಾರ್ದಿಕ್ ಪಾಂಡ್ಯ ಬಾಡಿಗೆ ಮನೆ ಪಡೆದುಕೊಂಡಿದ್ದಾರೆ. ಬಿಸಿಸಿಐನ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ (COE)ನಲ್ಲಿ ತರಬೇತಿ ಪಡೆಯಲು ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.
36
ಆರ್‌ಸಿಬಿ ಸೇರಿಕೊಳ್ಳುತ್ತಾರಾ ಹಾರ್ದಿಕ್ ಪಾಂಡ್ಯ
ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾಗಿರುವ ಹಾರ್ದಿಕ್ ಪಾಂಡ್ಯ ಇತರ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ. ಈ ಪೈಕಿ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ಮುಂಚೂಣಿಯಲ್ಲಿದೆ. ಇದರ ನಡುವೆ ಬೆಂಗಳೂರಿಗೆ ಬಂದಿರುವ ಕಾರಣ ಹಾರ್ದಿಕ್ ಪಾಂಡ್ಯ ಆರ್‌ಸಿಬಿ ಸೇರಿಕೊಳ್ಳುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಆರ್‌ಸಿಬಿ ಸೇರಿಕೊಳ್ಳುವ ಕುರಿತು ತರೆಮರೆಯಲ್ಲೂ ಯಾವುದೇ ಮಾತುಕತೆಗಳು ನಡೆದಿಲ್ಲ.
ಇಂಜರಿ ಆಟಗಾರರು ಪುನರ್ವಸತಿ, ಫಿಟ್‌ನೆಸ್ ಪರೀಕ್ಷೆ, ರಾಷ್ಟ್ರೀಯ ತರಬೇತಿ ಶಿಬಿರಗಳಿಗೆ ಬಿಸಿಸಿಆ ಕಾಂಟ್ರಾಕ್ಟ್ ಆಟಗಾರರು ಬೆಂಗಳೂರಿಗೆ ಆಗಮಿಸುತ್ತಾರೆ. ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪ್ರತಿ ದಿನ ಅಭ್ಯಾಸ, ಪುನರ್ವತಿ, ಫಿಟ್ನೆಸ್ ಪರೀಕ್ಷೆಗಳು ನಡೆಯಲಿದೆ. ಮುಂಬೈ ಟು ಬೆಂಗಳೂರು ಓಡಾಡುವ ಕಷ್ಟವಾಗಿರುವ ಕಾರಣ ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಸ್ಥಳಾಂತಗೊಂಡಿದ್ದಾರೆ.
56
ಹಾರ್ದಿಕ್ ಪಾಂಡ್ಯ ವಿಳಾಸ
ಟೀಂ ಇಂಡಿಯಾ, ಐಪಿಎಲ್, ದೇಶಿ ಟೂರ್ನಿಗಳು ಇಲ್ಲದಿರುವಾಗ ಹಾರ್ದಿಕ್ ಪಾಂಡ್ಯ ಇನ್ನು ಬೆಂಗಳೂರಿನಲ್ಲಿ ನೆಲೆಸಲಿದ್ದಾರೆ. ಈಗಾಗಲೇ ಪಾಂಡ್ಯ ತಮ್ಮ ವೈಯುಕ್ತಿಕ ಖರ್ಚಿನಲ್ಲಿ ಫಿಸಿಯೋಥೆರಪಿಸ್ಟ್ ಹಾಗೂ ಪರ್ಸನಲ್ ಸ್ಟ್ರಂತ್ ಕಂಡೀಷನ್ ತರಬೇತುದಾರರನ್ನು ನೇಮಕ ಮಾಡಿಕೊಂಡಿದ್ದಾರೆ.
66
ಕ್ರಿಕೆಟ್ ಕರಿಯರ್‌ಗಾಗಿ ಸ್ಥಳಾಂತರಗೊಂಡ ಹಾರ್ದಿಕ್
ಹಾರ್ದಿಕ್ ಪಾಂಡ್ಯ ಮುಂದಿನ 5 ರಿಂದ 10 ವರ್ಷಗಳ ಕಾಲದ ಟೀಂ ಇಂಡಿಯಾ, ಐಪಿಎಲ್ ಟೂರ್ನಿ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಸಕ್ರೀಯವಾಗಲು ಬಹುದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲಿ ತರಬೇತಿ ಇಲ್ಲೇ ಉಳಿದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.