ಭಾರತ ಎದುರಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ಪ್ಲೇಯಿಂಗ್ XI ಪ್ರಕಟ; 2 ಮೇಜರ್ ಚೇಂಜ್, ಜೋಫ್ರಾ ಆರ್ಚರ್‌ಗಿಲ್ಲ ಸ್ಥಾನ!

Published : Jul 01, 2026, 12:13 PM IST

ಬೆಂಗಳೂರು: ಹಾಲಿ ಚಾಂಪಿಯನ್ ಭಾರತ ತಂಡವಿಂದು ಬಲಿಷ್ಠ ಇಂಗ್ಲೆಂಡ್ ಎದುರು ಟಿ20 ಸರಣಿಯನ್ನಾಡಲು ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯಕ್ಕೆ ಇದೀಗ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಪ್ರಕಟವಾಗಿದೆ. ಇಂಗ್ಲೆಂಡ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ. 

PREV
16
ಮೊದಲ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್‌ ಆತಿಥ್ಯ ವಹಿಸಿದೆ. ಇಂದು ರಾತ್ರಿ ಭಾರತೀಯ ಕಾಲಮಾನ 10 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

26
ಇಂಗ್ಲೆಂಡ್ ತಂಡದಲ್ಲಿ ಎರಡು ಮೇಜರ್ ಚೇಂಜ್

ಇನ್ನು 2026ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಎದುರು ಆಡಿದ್ದ ಇಂಗ್ಲೆಂಡ್ ತಂಡದಲ್ಲಿ ಬಹುತೇಕ ಆಟಗಾರರು ಸ್ಥಾನ ಪಡೆದಿದ್ದು, ಎರಡು ಬದಲಾವಣೆಗಳಾಗಿವೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಎದುರು ಆಡಿದ್ದ ಜೇಮಿ ಓವರ್‌ಟನ್ ಹಾಗೂ ಜೋಫ್ರಾ ಆರ್ಚರ್ ಬದಲಿಗೆ ಸಾಕಿಬ್ ಮಹಮದ್ ಹಾಗೂ ಲೂಕ್‌ ವುಡ್‌ಗೆ ಸ್ಥಾನ ನೀಡಲಾಗಿದೆ.

36
ಭಾರತ ಎದುರು ಸೇಡಿಗೆ ರೆಡಿಯಾದ ಇಂಗ್ಲೆಂಡ್

ಹ್ಯಾರಿ ಬ್ರೂಕ್ ನಾಯಕನಾಗಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿದ್ದು, ಕಳೆದ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಹೀಗಾಗಿ ಮೊದಲ ಟಿ20 ಪಂದ್ಯವೇ ಸಾಕಷ್ಟು ರೋಚಕತೆಯಿಂದ ಕೂಡಿರುವ ಸಾಧ್ಯತೆಯಿದೆ.

46
ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠ

ಮೇಲ್ನೋಟಕ್ಕೆ ಇಂಗ್ಲೆಂಡ್ ಬ್ಯಾಟಿಂಗ್ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಅಗ್ರಕ್ರಮಾಂಕದಲ್ಲಿ ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್ ಹಾಗೂ ಟಾಮ್ ಬಾಂಟನ್‌ ಅವರಂತಹ ಆಟಗಾರರು ಸ್ಥಾನ ಪಡೆದಿದದ್ದಾರೆ. ಇನ್ನು ಆಲ್ರೌಂಡರ್‌ಗಳಾಗಿ ಸ್ಯಾಮ್ ಕರ್ರನ್ ಹಾಗೂ ವಿಲ್ ಜ್ಯಾಕ್ಸ್ ಸ್ಥಾನ ಪಡೆದಿದ್ದಾರೆ.

56
ಆರ್ಚರ್ ಅನುಪಸ್ಥಿತಿ ಕಾಡುವ ಸಾಧ್ಯತೆ

ಇನ್ನು ಜೋಫ್ರಾ ಆರ್ಚರ್‌ಗೆ ವಿಶ್ರಾಂತಿ ನೀಡಿರುವುದು ಇಂಗ್ಲೆಂಡ್ ಬೌಲಿಂಗ್ ವಿಭಾಗ ಕೊಂಚ ಮಂಕಾದಂತೆ ಕಾಣಿಸುತ್ತಿದೆ. ಅನುಭವಿ ಸ್ಪಿನ್ನರ್ ಆದಿಲ್ ರಶೀದ್, ವೇಗಿ ಲೂಕ್ ವುಡ್, ಸಾಕಿಬ್ ಮಹಮದ್ ಬೌಲಿಂಗ್ ಪ್ರದರ್ಶನ ತಂಡದ ಫಲಿತಾಂಶ ನಿರ್ಧರಿಸುವ ಸಾಧ್ಯತೆಯಿದೆ.

66
ಭಾರತ ಎದುರಿನ ಮೊದಲ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವನ್ ಹೀಗಿದೆ:

ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್(ನಾಯಕ), ಜೇಕಬ್ ಬೆಥೆಲ್, ಟಾಮ್ ಬಾಂಟನ್, ಸ್ಯಾಮ್ ಕರ್ರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಲೂಕ್ ವುಡ್, ಸಾಕಿಬ್ ಮೊಹಮ್ಮದ್.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories