ಚೆಸ್ಟರ್-ಲೆ-ಸ್ಟ್ರೀಟ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರಿವಾಗಲೇ ನಾಯಕ ಶ್ರೇಯಸ್ ಅಯ್ಯರ್ ಅವರ ಅಹಂನಿಂದ ಕೂಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅಯ್ಯರ್ ಏನಂದ್ರು ನೋಡೋಣ ಬನ್ನಿ.
ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ನಾಯಕರಾದ ಮೊದಲ ಟಿ20 ಸರಣಿಯಲ್ಲೇ ಕ್ರಿಕೆಟ್ ಶಿಶುಗಳಾದ ಐರ್ಲೆಂಡ್ ಎದುರು 0-2 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಇದಾದ ಬಳಿಕ ಹಾಲಿ ಚಾಂಪಿಯನ್ನರು ಬಲಿಷ್ಠ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದ್ದಾರೆ. ಇಂದಿನಿಂದ ಇಂಗ್ಲೆಂಡ್ ಎದುರು ಟಿ20 ಸರಣಿ ಆರಂಭವಾಗಲಿದೆ.
26
ಸೋಷಿಯಲ್ ಮೀಡಿಯಾದಲ್ಲಿ ಜೋರಾಯ್ತು ವೈಭವ್ ಸೂರ್ಯವಂಶಿ ಬಗ್ಗೆ ಚರ್ಚೆ
ಇನ್ನು 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿರುವ ವೈಭವ್ ಸೂರ್ಯವಂಶಿ, ಇದೀಗ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಐರ್ಲೆಂಡ್ ಎದುರಿನ ಎರಡು ಪಂದ್ಯಗಳಲ್ಲೂ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಬೇಕು ಎನ್ನುವ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.
36
ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡಿ ಎಂದ ಗವಾಸ್ಕರ್
ಇನ್ನು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ, ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಬೇಕು ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದರು. ಈ ಕುರಿತಂತೆ ಪತ್ರಕರ್ತರು, ವೈಭವ್ ಸೂರ್ಯವಂಶಿ ಬಗ್ಗೆ ಸಾಕಷ್ಟು ಹೈಪ್ ನಿರ್ಮಾಣವಾಗಿದೆ ಈ ಬಗ್ಗೆ ನೀವೇನು ಹೇಳಲು ಬಯಸುತ್ತೀರಾ ಎಂದು ಶ್ರೇಯಸ್ ಅಯ್ಯರ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೇಯಸ್ ಅಯ್ಯರ್, ನನಗೆ ಯಾವುದೇ ಹೈಪ್ ಕಾಣುತ್ತಿಲ್ಲ. ನಾನು ಇನ್‌ಸ್ಟಾಗ್ರಾಮ್ ಆಗಲಿ ಅಥವಾ ಸೋಷಿಯಲ್ ಮೀಡಿಯಾವಾಗಲಿ ಬಳಸುತ್ತಿಲ್ಲ. ನಾನು ಈ ರೀತಿಯ ನ್ಯೂಸ್‌ಗಳನ್ನು ನೋಡುವುದೇ ಇಲ್ಲ ಎಂದು ವೈಭವ್ ಸೂರ್ಯವಂಶಿ ಬಗ್ಗೆ ಶ್ರೇಯಸ್ ಅಯ್ಯರ್ ವ್ಯಂಗ್ಯವಾಡಿದ್ದಾರೆ.
56
ಒತ್ತಡದಲ್ಲಿದ್ದಾರೆ ನಾಯಕ ಶ್ರೇಯಸ್ ಅಯ್ಯರ್
ಭಾರತದ ಯಾವ ನಾಯಕನು ತಾನಾಡಿದ ಮೊದಲ ಮೂರು ನಾಯಕತ್ವದ ಪಂದ್ಯಗಳಲ್ಲಿ ಸೋತಿಲ್ಲ. ಒಂದು ವೇಳೆ ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯಗಳನ್ನು ಸೋತರೇ ಶ್ರೇಯಸ್ ಅಯ್ಯರ್, ನಾಯಕನಾಗಿ ಮೊದಲ ಮೂರು ಪಂದ್ಯ ಸೋತ ಭಾರತದ ಮೊದಲ ಕ್ಯಾಪ್ಟನ್ ಎನ್ನುವ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ.
66
ಇಂದು ರಾತ್ರಿ 10 ಗಂಟೆಯಿಂದ ಮೊದಲ ಮ್ಯಾಚ್ ಆರಂಭ
ಐರ್ಲೆಂಡ್ ಎದುರು ಟಿ20 ಸರಣಿ ವೈಟ್‌ವಾಷ್ ಮುಖಭಂಗ ಅನುಭವಿಸಿರುವ ಭಾರತ ತಂಡ ಸಾಕಷ್ಟು ಒತ್ತಡದಲ್ಲಿದೆ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜತೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸುತ್ತಾರೋ ಅಥವಾ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುತ್ತೋ ಕಾದು ನೋಡಬೇಕಿದೆ. ಮೊದಲ ಟಿ20 ಪಂದ್ಯವು ಭಾರತೀಯ ಕಾಲಮಾನ ರಾತ್ರಿ 10 ಗಂಟೆಗೆ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.