IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

First Published | Oct 15, 2021, 6:25 PM IST

IPL 2021 ಟೂರ್ನಿಯಲ್ಲಿ ಇಯಾನ್ ಮಾರ್ಗನ್ (Eoin Morgan) ನೇತೃತ್ವದ ಕೆಕೆಆರ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.  ಕೊಲ್ಕತ ನೈಟ್ ರೈಡರ್ಸ್ (KKR) ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ಯನ್ನು ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ ಮತ್ತು ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಐಪಿಎಲ್‌ನ ಮೊದಲ ಹಂತದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ  ಕೆಕೆಆರ್ ಎರಡನೇ ಬಾರಿ ಯುಎಇಯಲ್ಲಿ ಅದ್ಭುತ ಪುನರಾಗಮನವನ್ನು ಮಾಡಿತು ಮತ್ತು ಸ್ಥಿರ ಪ್ರದರ್ಶನದೊಂದಿಗೆ ಈ ಪಂದ್ಯಾವಳಿಯ ಅಂತಿಮ ಘಟ್ಟ ತಲುಪಿದೆ. ಕೆಕೆಆರ್‌ನ ಅನೇಕ ಆಟಗಾರರು ತಮ್ಮ ಅಬ್ಬರದ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಈ ಆಟಗಾರರ ಪಾರ್ಟ್‌ನರ್‌ ಹೇಗಿದ್ದಾರೆ ಮತ್ತು ಅವರು ಏನು ಮಾಡುತ್ತಾರೆ ಎಂದು ತಿಳಿದಿದೆಯೇ?  ಕೋಲ್ಕತ ನೈಟ್ ರೈಡರ್ಸ್ ಆಟಗಾರರ ಸೂಪರ್ ಹಾಟ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್ ವಿವರ.

दीपिका पल्लीकल

ದೀಪಿಕಾ ಪಲ್ಲಿಕಲ್:

ಕೆಕೆಆರ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಭಾರತದ ಅತ್ಯುತ್ತಮ ಸ್ಕ್ವಾಷ್ ಆಟಗಾರ್ತಿ. ದೀಪಿಕಾ ಮತ್ತು ದಿನೇಶ್ ಕಾರ್ತಿಕ್ ಜಿಮ್‌ನಲ್ಲಿ ಭೇಟಿಯಾದರು. ಇಬ್ಬರೂ ನವೆಂಬರ್ 15, 2013 ರಂದು ಪರಸ್ಪರ ವಿವಾಹವಾದರು.

तारा रिजवे

ತಾರಾ ರಿಡ್ಜ್‌ವೇ:

ಕೆಕೆಆರ್ ಕ್ಯಾಪ್ಟನ್ ಇಯೊನ್ ಮೋರ್ಗನ್ ಪತ್ನಿಯ ಹೆಸರು  ತಾರಾ ರಿಡ್ಜ್‌ವೇ  ಆಸ್ಟ್ರೇಲಿಯಾದವರು. ಅವರು advocacy ಮತ್ತು International diplomacyಯಲ್ಲಿ ಪದವಿಗಳನ್ನು ಹೊಂದಿದ್ದಾರೆ. ಅವರು ನೆಟ್ ಬಾಲ್ ಮತ್ತು ರೋಯಿಂಗ್  ಕೂಡ ಆಡುತ್ತಾರೆ.  17 ವರ್ಷದಿಂದ ಮೋರ್ಗನ್ ಜೊತೆ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ 6 ವರ್ಷಗಳ ಸಂಬಂಧದ ನಂತರ, ಇಬ್ಬರೂ 3 ನವೆಂಬರ್ 2018 ರಂದು ವಿವಾಹವಾದರು.

Tap to resize

नंदिता कुमार

ನಂದಿತಾ ಕುಮಾರ್:

ನಂದಿತಾ ಕುಮಾರ್ ಸುನೀಲ್ ನರೈನ್‌ ಅವರ ಪತ್ನಿ. ಸುನಿಲ್ ಕೆಕೆಆರ್‌ ತಂಡದ ಪರವಾಗಿ ರೆಗ್ಯುಲರ್‌ ಆಗಿ  ದೀರ್ಘಕಾಲದಿಂದ  ಆಡುತ್ತಿದ್ದಾರೆ. ಮೂಲತಃ ಭಾರತೀಯರಾದ ನಂದಿತಾ  nail artist. ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ.
 

साची मारवाह

ಸಚಿ ಮರ್ವಾ:
ಸಚಿ ಮರ್ವಾ ಕೆಕೆಆರ್ ಸ್ಫೋಟಕ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರ ಪತ್ನಿ. ರಾಣಾ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಸಮಯದಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಸಾಚಿ ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಕಾರರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ದಂಪತಿಗಳು ಫೆಬ್ರವರಿ 2019 ರಲ್ಲಿ ವಿವಾಹವಾದರು.

सारा तेंदुलकर

ಸಾರಾ ತೆಂಡುಲ್ಕರ್:
ಸಾರಾ ತೆಂಡುಲ್ಕರ್ ಕ್ರಿಕೆಟ್ ಲೆಜೆಂಡ್‌ ಸಚಿನ್ ತೆಂಡುಲ್ಕರ್ ಅವರ ಮಗಳು. ಅವರ ಹೆಸರು ಕೆಕೆಆರ್ ಓಪನರ್ ಶುಭಮನ್ ಗಿಲ್ ಜೊತೆ  ಬಹಳ ಕಾಲದಿಂದ ಕೇಳಿಬರುತ್ತದೆ. ಇಬ್ಬರೂ ಒಂದೇ ಕ್ಯಾಪ್ಷನ್‌ ನೀಡಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರದಿಂದ ಇಬ್ಬರ ಡೇಟಿಂಗ್‌ನ ಸುದ್ದಿಗಳು ಮುಂಚೂಣಿಗೆ ಬಂದವು. ಆದಾಗ್ಯೂ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ದೃಢಪಡಿಸಿಲ್ಲ

उम्मे अहमद शिशिर

ಉಮ್ ಅಹ್ಮದ್ ಶಿಶಿರ್:

ಈ ಸುಂದರ ಬಾಂಗ್ಲಾದೇಶಿ ಮಹಿಳೆ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅವರ ಪತ್ನಿ. ಉಮ್ಮೆ ಅವರು ನಟಿ ಅಥವಾ ಮಾಡೆಲ್ ಅಲ್ಲದಿದ್ದರೂ ಬಾಂಗ್ಲಾದೇಶ ಮೀಡಿಯಾದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.  ವಿಶೇಷ ದಿನಾಂಕ 12-12-12 ರಂದು ದಂಪತಿಗಳು ವಿವಾಹವಾದರು ಮತ್ತು ಈ ಜೋಡಿಗೆ 2 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದಾನೆ.

नेहा खेडेकर

ನೇಹಾ ಖೇಡ್ಕರ್:

ನೇಹಾ ಖೇಡೇಕರ್ ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿಯ ಪತ್ನಿ. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದರು ಮತ್ತು ಕಳೆದ ವರ್ಷ 13 ಡಿಸೆಂಬರ್ 2020 ರಂದು ಇಬ್ಬರೂ ವಿವಾಹವಾದರು. ತಮ್ಮ ಮದುವೆಯ ಮಂಟಪದಲ್ಲಿ ಈ ಕಪಲ್‌ ಕ್ರಿಕೆಟ್ ಆಡಿದ್ದರು.

गीता बसरा

ಗೀತಾ ಬಸ್ರಾ:
ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ. ದಂಪತಿಗಳು 2015 ರಲ್ಲಿ ವಿವಾಹವಾದರು. ಗೀತಾ  ನಟಿ, ಅವರು ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಭಜ್ಜಿ ಮತ್ತು ಗೀತಾ 2016 ರಲ್ಲಿ ಹೆಣ್ಣು ಮಗುವನ್ನು ಹೊಂದಿದ್ದರು ಮತ್ತು ಈ ವರ್ಷ ಗಂಡು ಮಗವನ್ನು ಸ್ವಾಗತಿಸಿದ್ದರು.

ಡಿಜೆಸಿಮ್ ಲೋರಾ:
ಕೆಕೆಆರ್ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಪತ್ನಿ ಜೆಸ್ಸಿಮ್ ಲೋರಾ ಸೂಪರ್ ಮಾಡೆಲ್ ಹಾಗೂ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯನ್ಸರ್‌. ಜಮೈಕಾದಲ್ಲಿ ವಾಸಿಸುತ್ತಿರುವ ಜಾಸಿಮ್ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದು, ಆಗಾಗ್ಗೆ ತನ್ನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ರಸೆಲ್ ಮತ್ತು ಜೆಸ್ಸಿಮ್ 2016 ರಲ್ಲಿ ವಿವಾಹವಾದರು.
 

Latest Videos

click me!