ನಿಮಗೆ ಗೊತ್ತಾ ಗೌತಮ್‌ ಗಂಭೀರ್‌ ಹಾಗೂ ನತಾಶಾ ಜೈನ್‌ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ?

First Published Oct 15, 2021, 5:53 PM IST

ಭಾರತೀಯ ಕ್ರಿಕೆಟ್ ತಂಡದ (Team India) ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir)  ತನ್ನ 40 ನೇ ಹುಟ್ಟುಹಬ್ಬವನ್ನು ಅಕ್ಟೋಬರ್ 14 ರಂದು ಆಚರಿಸಿಕೊಳ್ಳುತ್ತಿದ್ದಾರೆ. 2007 ಮತ್ತು 2011 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಗಂಭೀರ್ ಮಹತ್ವದ ಪಾತ್ರ ವಹಿಸಿದ್ದಾರೆ. ಗಂಭೀರ್ ಈಗ ರಾಜಕೀಯದಲ್ಲಿ ತನ್ನ ಭವಿಷ್ಯವನ್ನು ಅಯ್ದುಕೊಂಡಿದ್ದಾರೆ. ಆದರೆ ಈ ಆಟಗಾರರು ಯಾವಾಗಲೂ ತಮ್ಮ ಅದ್ಭುತ ಆಟದಿಂದ  ಸುದ್ದಿಯಾಗಿದ್ದಾರೆ. ಅವರ ವೈಯಕ್ತಿಕ ಜೀವನ ಮತ್ತು ಪ್ರೇಮಕಥೆಯ ಬಗ್ಗೆ  ಹೆಚ್ಚಿನವರಿಗೆ ಮಾಹಿತಿ ಇಲ್ಲ. ಅವರ ಪತ್ನಿ ನತಾಶಾ ಜೈನ್ (Natasha Jain) ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದವರು ಮತ್ತು ತುಂಬಾ ಸುಂದರ ವಾಗಿದ್ದಾರೆ. ಗೌತಮ್ ಗಂಭೀರ್ ಅವರ  ಹುಟ್ಟುಹಬ್ಬದ ಸಮಯದಲ್ಲಿ  ಗಂಭೀರ್ ಮತ್ತು ನತಾಶಾರ ಲವ್‌ ಸ್ಟೋರಿ (Love Story)  ಬಗ್ಗೆ ನಿಮಗಾಗಿ ಮಾಹಿತಿ.

14 ಅಕ್ಟೋಬರ್ 1981 ರಂದು ನವದೆಹಲಿಯಲ್ಲಿ ಜನಿಸಿದ ಗೌತಮ್ ಗಂಭೀರ್ 10 ನೇ ವಯಸ್ಸಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯ ಸಂಜಯ್ ಭಾರದ್ವಾಜ್ ಮತ್ತು ದೆಹಲಿಯಲ್ಲಿ ರಾಜು ಟಂಡನ್ ಅವರ ಅಡಿಯಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು.  2003 ರಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು.
 

2007 ರಲ್ಲಿ ಟಿ20 ಮತ್ತು 2011 ರಲ್ಲಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತಕ್ಕಾಗಿ ಅದ್ಭುತ ಇನ್ನಿಂಗ್ಸ್ ಆಡಿ ತಂಡ ಚಾಂಪಿಯನ್ ಆಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಗಂಭೀರ್‌  ಹಲವು ಬಾರಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್, 147 ಏಕದಿನ ಪಂದ್ಯಗಳಲ್ಲಿ 5238 ರನ್ ಮತ್ತು 37 ಟಿ 20 ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ. ಅವರು ಆರು ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿದ್ದರು, ಇದರಲ್ಲಿ ಭಾರತವು ಎಲ್ಲಾ ಪಂದ್ಯಗಳನ್ನು ಗೆದ್ದಿತು.
 

2011 ರ ವಿಶ್ವಕಪ್ ನಂತರ ಅದೇ ವರ್ಷ ಅಕ್ಟೋಬರ್ 28 ರಂದು ಗೌತಮ್ ಗಂಭೀರ್ ದೆಹಲಿಯ ನಿವಾಸಿ ನತಾಶಾ ಜೈನ್ ಅವರನ್ನು ವಿವಾಹವಾದರು. ಅವರ ಹೆಂಡತಿ ತುಂಬಾ ಸುಂದರವಾಗಿದ್ದಾರೆ ಮತ್ತು ದೊಡ್ಡ ಬ್ಯುಸಿನೆಸ್‌  ಕುಟುಂಬದಿಂದ ಬಂದಿದ್ದಾರೆ.

 ನತಾಶಾ ಮತ್ತು ಗಂಭೀರ್ ತಂದೆ ಇಬ್ಬರೂ ಒಳ್ಳೆಯ ಸ್ನೇಹಿತರು. ಗಂಭೀರ್ ತಂದೆ ದೀಪಕ್ ಗಂಭೀರ್ ಜವಳಿ ಉದ್ಯಮಿ. ಇಬ್ಬರ ಕುಟುಂಬಗಳು ಸುಮಾರು 30-35 ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ನತಾಶಾ ಗೌತಮ್ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.
 

ನತಾಶಾ ಮತ್ತು ಗಂಭೀರ್ ಕೂಡ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರೂ ಪರಸ್ಪರ ಜೊತೆಯಲ್ಲಿ ಸಮಯ ಕಳೆಯುವುದನ್ನು ಇಷ್ಟಪಟ್ಟರು ಮತ್ತು ಇಲ್ಲಿಂದ ಅವರ ಪ್ರೀತಿ ಶುರುವಾಯಿತು. ಇದಾದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು ಮತ್ತು ಕುಟುಂಬದ ಸದಸ್ಯರು ಕೂಡ ಒಪ್ಪಿದರು. ಇಬ್ಬರೂ ಗುರುಗ್ರಾಮದಲ್ಲಿ ಕೆಲವೇ ಜನರ ಸಮ್ಮುಖದಲ್ಲಿ ವಿವಾಹವಾದರು.

ನತಾಶಾ ಜೈನ್‌ ಅವರಿಗೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಆಸಕ್ತಿಯಿಲ್ಲ. ಐಪಿಎಲ್ ಸಮಯದಲ್ಲಿ ಗಂಭೀರ್ ಅವರನ್ನು ಬೆಂಬಲಿಸಲು ಅವರು ಹಾಜರಾಗಿದ್ದು ತುಂಬಾ ಅಪರೂಪ ಹಾಗೂ ನತಾಶಾ ಮಾಧ್ಯಮದಿಂದ  ಕೂಡ  ದೂರ ಉಳಿದಿದ್ದಾರೆ. ಆದಾಗ್ಯೂ, ಅವರು  ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯಳಾಗಿರುತ್ತಾರೆ ಮತ್ತು ಆಗಾಗ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ.

ಗೌತಮ್ ಗಂಭೀರ್ ಮತ್ತು ನತಾಶಾ ಜೈನ್ ಅವರಿಗೆ 2 ಹೆಣ್ಣು ಮಕ್ಕಳಿದ್ದಾರೆ. ಅವರ ಹಿರಿಯ ಮಗಳು ಅಜಿನ್ ಮೇ 2014 ರಲ್ಲಿ  ಮತ್ತು  ಕಿರಿಯ ಮಗಳು ಅನೈಜಾ ಜೂನ್ 2017 ರಲ್ಲಿ ಜನಿಸಿದಳು. ಮಕ್ಕಳು  ಆಗಾಗ್ಗೆ   ತಂದೆ ಮತ್ತು ತಾಯಿಯೊಂದಿಗೆ ಕಾಣಿಸಿಕೊಳ್ಳುತ್ತಾರೆ.

ಗಂಭೀರ್ 2019 ರಿಂದ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿದ್ದಾರೆ. ಆದಾಗ್ಯೂ, ಈ ಸಮಯದಲ್ಲಿ ಅವರು ಯುಎಇಯಲ್ಲಿ ಐಪಿಎಲ್ 2021 ರ ಭಾಷ್ಯ ಸಮಿತಿಯ ಭಾಗವಾಗಿದ್ದಾರೆ.  ಕೆಕೆಆರ್‌ ಪರವಾಗಿ ಐಪಿಎಲ್ ಪ್ರಶಸ್ತಿಯನ್ನು ಎರಡು ಬಾರಿ (2012 ಮತ್ತು 2014) ಗೆದ್ದಿದ್ದಾರೆ ಮತ್ತು ಐಪಿಎಲ್‌ನಲ್ಲಿ 154 ಪಂದ್ಯಗಳಲ್ಲಿ 4217 ರನ್ ಗಳಿಸಿದ್ದಾರೆ ಗೌತಮ್‌ ಗಂಭೀರ್‌.
 

click me!