ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಳೆಯಿಂದಾಗಿ 26 ಓವರ್‌ಗಳಿಗೆ ಸೀಮಿತವಾದ ಈ ಮ್ಯಾಚ್‌ನಲ್ಲಿ ಭಾರತ 136/9 ರನ್ ಗಳಿಸಿತ್ತು. ಬೌಲರ್‌ಗಳು ಈ ಗುರಿಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾದರು.
ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬೇಗ ಔಟಾದರು. ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನಿಲ್ಲದ ಕಾರಣ, ಭಾರತ ಸೋಲನುಭವಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ.
25
ಟಾಸ್ ಸೋತಿದ್ದೇ ಶಾಪವಾಯ್ತಾ?
ಈ ಪಿಚ್‌ನಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡವೇ ಗೆದ್ದ ದಾಖಲೆಗಳಿವೆ. ಅದಕ್ಕೆ ತಕ್ಕಂತೆ ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋತರು. ಮಳೆಯಿಂದಾಗಿ ಭಾರತದ ಬ್ಯಾಟಿಂಗ್ ಲೈನ್‌ಅಪ್ ಕೂಡ ತಡಬಡಿಸಿತು. ರೋಹಿತ್(8), ಕೊಹ್ಲಿ(0) ಬೇಗ ಔಟಾದರು. ಕೊನೆಗೆ ನಿತೀಶ್ ಕುಮಾರ್ ರೆಡ್ಡಿ ಅಬ್ಬರದಿಂದ ಭಾರತ 26 ಓವರ್‌ಗಳಲ್ಲಿ 136/9 ರನ್ ಗಳಿಸಿತು. ಡಕ್‌ವರ್ತ್-ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾಗೆ 131 ರನ್‌ಗಳ ಗುರಿ ನೀಡಲಾಯಿತು.
35
ತಡಬಡಿಸಿದ ರೋಹಿತ್, ಕೊಹ್ಲಿ!
ಸುಮಾರು 223 ದಿನಗಳ ನಂತರ ಈ ಹಿರಿಯ ಆಟಗಾರರು ಮತ್ತೆ ಏಕದಿನ ಪಂದ್ಯಕ್ಕೆ ಮರಳಿದರು. ಆದರೆ ಮೊದಲ ಪಂದ್ಯದಲ್ಲೇ ಎಡವಿದರು. ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 14 ಎಸೆತಗಳಲ್ಲಿ 8 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 8 ಎಸೆತಗಳಲ್ಲಿ ಡಕೌಟ್ ಆದರು.
131 ರನ್‌ಗಳ ಅಲ್ಪ ಗುರಿಯನ್ನು ರಕ್ಷಿಸುವಲ್ಲಿ ಟೀ್ಂ ಇಂಡಿಯಾ ಬೌಲಿಂಗ್ ವಿಫಲವಾಯಿತು. ಅರ್ಷದೀಪ್ ಸಿಂಗ್ ಆರಂಭದಲ್ಲಿ ಟ್ರಾವಿಸ್ ಹೆಡ್ ವಿಕೆಟ್ ಪಡೆದರೂ, ಆಸ್ಟ್ರೇಲಿಯಾ ಸುಲಭವಾಗಿ ಗುರಿ ತಲುಪಿತು. ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳಿಂದ ಗೆದ್ದಿತು. ಎರಡನೇ ಏಕದಿನ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದೆ.
55
ಹರ್ಷಿತ್ ರಾಣಾ ಮೇಲೆ ಟ್ರೋಲ್
ಟೀಂ ಇಂಡಿಯಾ ಬೌಲರ್ ಹರ್ಷಿತ್ ರಾಣಾ ಅವರನ್ನು ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ. ರಾಣಾ ತನ್ನ ನಾಲ್ಕು ಓವರ್‌ಗಳಲ್ಲಿ ವಿಕೆಟ್ ಪಡೆಯದೆ 27 ರನ್ ನೀಡಿದ್ದರು. ಗಂಭೀರ್ ಕೋಚ್ ಆಗಿರುವುದರಿಂದಲೇ ರಾಣಾ ತಂಡದಲ್ಲಿದ್ದಾರೆ, ಇವರು ಭಾರತದ ಹ್ಯಾರಿಸ್ ರೌಫ್ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲೂ ವಿಫಲವಾದರೆ ರಾಣಾ ಮೇಲೆ ಒತ್ತಡ ಹೆಚ್ಚಾಗುವುದು ಗ್ಯಾರಂಟಿ.