ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ ಚೆಂಡು 176.5 ಕಿ.ಮೀ ವೇಗದಲ್ಲಿ ದಾಖಲಾಗಿದೆ. ಇದು ಶೋಯೆಬ್ ಅಖ್ತರ್ ಅವರ ವಿಶ್ವದಾಖಲೆಯನ್ನು ಮುರಿದಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು 176.5 ಕಿ.ಮೀ ವೇಗದಲ್ಲಿ ದಾಖಲಾಗಿದ್ದು, ಇದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
24
26 ಓವರ್‌ಗಳ ಪಂದ್ಯ
ಮಳೆಯಿಂದಾಗಿ 26 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಭಾರತ 136 ರನ್ ಗಳಿಸಿತು. ಡಕ್ವರ್ತ್ ಲೂಯಿಸ್ ನಿಯಮದಡಿ 131 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 7 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
34
ವೇಗದಲ್ಲಿ ಅಚ್ಚರಿ ಮೂಡಿಸಿದ ಸ್ಟಾರ್ಕ್
ಈ ಪಂದ್ಯದ ಮೊದಲ ಓವರ್‌ನಲ್ಲೇ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡಿನ ವೇಗ ಸ್ಪೀಡ್ ಗನ್‌ನಲ್ಲಿ 176.5 ಕಿ.ಮೀ ಎಂದು ದಾಖಲಾಯಿತು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ತೀವ್ರ ಚರ್ಚೆಗೆ ಕಾರಣವಾಯಿತು.
ಶೋಯೆಬ್ ಅಖ್ತರ್ (161.3 ಕಿ.ಮೀ) ವಿಶ್ವದ ಅತಿವೇಗದ ಬೌಲರ್. ಸ್ಟಾರ್ಕ್ ಎಸೆತ ನಿಜವಾಗಿದ್ದರೆ, ಅದು 22 ವರ್ಷಗಳ ದಾಖಲೆಯನ್ನು ಮುರಿಯುತ್ತಿತ್ತು. ಆದರೆ, ಇದು ತಾಂತ್ರಿಕ ದೋಷವಿರಬಹುದೆಂದು ತಜ್ಞರು ಶಂಕಿಸಿದ್ದಾರೆ.