ತಲೆಗೆ ಕೊಬ್ಬು ಏರಿದ್ರೆ ಇಳಿಸಿಕೊ, ಇಲ್ಲಂದ್ರೆ..?: ವೈಭವ್‌ಗೆ ಮಾಜಿ ಕ್ರಿಕೆಟಿಗ ಖಡಕ್ ವಾರ್ನಿಂಗ್

Published : Oct 20, 2025, 12:51 PM IST

ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಹೆಸರು, ಖ್ಯಾತಿ ಗಳಿಸಿದ ಕ್ರಿಕೆಟಿಗರು ಬಹಳಷ್ಟು ಮಂದಿ ಇದ್ದಾರೆ. ಹಾಗೆಯೇ, ಚಿಕ್ಕ ವಯಸ್ಸಿನಲ್ಲೇ ಕಳೆದುಹೋದ ಕ್ರಿಕೆಟಿಗರೂ ಇದ್ದಾರೆ. ಇದೇ ವಿಚಾರವನ್ನು ನೆನಪಿಸುತ್ತಾ ಮಾಜಿ ಕ್ರಿಕೆಟಿಗರೊಬ್ಬರು ವೈಭವ್ ಸೂರ್ಯವಂಶಿಗೆ ಎಚ್ಚರಿಕೆ ನೀಡಿದ್ದಾರೆ. 

PREV
15

2024ರಲ್ಲಿ ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಕಣಕ್ಕಿಳಿದಿದ್ದರು. ಮೆಗಾ ಹರಾಜಿನಲ್ಲಿ ತಂಡವು ಅವರನ್ನು ಕೇವಲ 1.1 ಕೋಟಿ ರೂ.ಗೆ ಖರೀದಿಸಿತ್ತು. ಆ ಹೊತ್ತಿಗೆ ವೈಭವ್‌ಗೆ ಕೇವಲ 13 ವರ್ಷ. ತನ್ನ ಮೇಲಿಟ್ಟ ನಂಬಿಕೆಯನ್ನು ವೈಭವ್ ಉಳಿಸಿಕೊಂಡರು. ಗುಜರಾತ್ ಟೈಟಾನ್ಸ್ ವಿರುದ್ಧ ಅದ್ಭುತ ಶತಕ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ ಅತಿ ಕಿರಿಯ ಕ್ರಿಕೆಟಿಗ ಎಂಬ ದಾಖಲೆ ಬರೆದರು. ನಂತರ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ 78 ಎಸೆತಗಳಲ್ಲಿ 143 ರನ್ ಗಳಿಸಿದರು.

25

ಏಪ್ರಿಲ್ 28 ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೈಭವ್ ಎಲ್ಲರನ್ನೂ ಬೆರಗುಗೊಳಿಸಿದರು. ಕೇವಲ 35 ಎಸೆತಗಳಲ್ಲಿ 100 ರನ್ ಗಳಿಸಿದ ವೈಭವ್, ಐಪಿಎಲ್ ದಾಖಲೆಗಳಲ್ಲಿ ತಮ್ಮದೇ ಆದ  ಹೆಜ್ಜೆಗುರುತು ದಾಖಲಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 7 ಬೌಂಡರಿ ಮತ್ತು 11 ಸಿಕ್ಸರ್‌ಗಳನ್ನು ಬಾರಿಸಿದರು. ಗುಜರಾತ್‌ನ ಹಿರಿಯ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮಾ ಮೇಲೆ ಪ್ರಾಬಲ್ಯ ಸಾಧಿಸಿದರು. ಆ ಸಮಯದಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ರವಿಶಾಸ್ತ್ರಿ ಮತ್ತು ಮ್ಯಾಥ್ಯೂ ಹೇಡನ್ ಕೂಡ ವೈಭವ್ ಬ್ಯಾಟಿಂಗ್ ನೋಡಿ ಆಶ್ಚರ್ಯಚಕಿತರಾಗಿದ್ದರು.

35

ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ವೈಭವ್ ಅವರನ್ನು ಹೊಗಳುವ ಜೊತೆಗೆ ಒಂದು ಮಾಸ್ ವಾರ್ನಿಂಗ್ ನೀಡಿದ್ದಾರೆ. 'ಇದು ವೈಭವ್‌ಗೆ ಅತ್ಯಂತ ಕಷ್ಟದ ಸಮಯ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಯಶಸ್ಸು ಗಳಿಸಿದ ನಂತರ ಅನೇಕ ಆಟಗಾರರು ಕಣ್ಮರೆಯಾಗಿದ್ದಾರೆ. ಇದು ಬಹಳ ನಿರ್ಣಾಯಕ ಸಮಯವಾದ್ದರಿಂದ, ಹಿರಿಯರೊಬ್ಬರು ಅವರಿಗೆ ಮಾರ್ಗದರ್ಶನ ನೀಡಬೇಕು. ಅವರು ವೈಫಲ್ಯವನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು' ಎಂದರು.

45

ಈಗಾಗಲೇ ವೈಭವ್ ಅವರನ್ನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿಯಂತಹ ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಲಾಗುತ್ತಿದೆ. ಆದರೆ ಆ ಮಟ್ಟವನ್ನು ತಲುಪಲು ವೈಭವ್ ತುಂಬಾ ಶ್ರಮಿಸಬೇಕಿದೆ. ಅದಲ್ಲದೆ, ಅದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯುತ್ತದೆ. 'ಪ್ರತಿ ಬಾರಿಯೂ ಹೀಗೆಯೇ ಕಷ್ಟಪಟ್ಟು ಕೆಲಸ ಮಾಡಿದರೆ, ಖಂಡಿತವಾಗಿಯೂ ಭವಿಷ್ಯದಲ್ಲಿ ಅವರಿಗೆ ಒಳ್ಳೆಯ ಹೆಸರು ಬರುತ್ತದೆ. ಆದರೆ ಸದ್ಯಕ್ಕೆ, ಅವರು ನಾಲ್ಕು ದಿನಗಳ ಕ್ರಿಕೆಟ್‌ನತ್ತ ಗಮನ ಹರಿಸಬೇಕು. ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬೇಕು' ಎಂದು ಶಾಸ್ತ್ರಿ ತಿಳಿಸಿದರು.

55

ರಾಜಸ್ಥಾನ ರಾಯಲ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, ಇಲ್ಲಿಯವರೆಗೆ ಏಳು ಪಂದ್ಯಗಳನ್ನಾಡಿ ಒಂದು ಶತಕ ಮತ್ತು ಒಂದು ಅರ್ಧಶತಕದೊಂದಿಗೆ 252 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 101 ಆಗಿದ್ದು, ಸರಾಸರಿ 36 ಮತ್ತು ಸ್ಟ್ರೈಕ್ ರೇಟ್ 206.56 ಆಗಿದೆ. ಈ ಇನ್ನಿಂಗ್ಸ್‌ಗಳಲ್ಲಿ 18 ಬೌಂಡರಿ ಮತ್ತು 24 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Read more Photos on
click me!

Recommended Stories