ನಟ ವಿಜಯ್ ಸಿಎಂ ಆದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಎಸ್‌ಕೆ ತಂಡದಿಂದ ವಿಶೇಷ ಮನವಿ, ಪರ ವಿರೋಧ

Published : May 10, 2026, 02:38 PM IST

ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ವಿಶೇಷ ಮನವಿಯೊಂದನ್ನು ಮಾಡಿದೆ.

PREV
15
ತಮಿಳುನಾಡಿ ಸಿಎಂ ಆಗಿ ವಿಜಯ್ ಪ್ರಮಾಣವಚನ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಟ ಜೊಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಸಿನಿಮೀಯ ಶೈಲಿಯ ಡೈಲಾಗ್ ಮೂಲಕ ಅಭಿಮಾನಿಗಳ ರಂಜಿಸಿದ್ದಾರೆ. ಹೊಸ ಸರ್ಕಾರ, ಹೊಸ ಅಧ್ಯಾಯ ಆರಂಭಗೊಳ್ಳುತ್ತಿದೆ ಎಂದಿದ್ದಾರೆ. ಚೆನ್ನೈನಲ್ಲಿ ನಟ ವಿಜಯ್ ಪ್ರಮಾಣವಚನ ಸಮಾರಂಭದ ದಿನವೇ ಸಿಎಸ್‌ಕೆ ಹಾಗೂ ಲಖನೌ ಹೋರಾಟ ನಡೆಸುತ್ತಿದೆ. ಇದೀಗ ಸಿಎಸ್‌ಕೆ ವಿಶೇಷ ಮನವಿಯೊಂದನ್ನು ಮಾಡಿದೆ.

25
ನಟ ವಿಜಯ್ ಸಿಎಂ ಆದ ಬೆನ್ನಲ್ಲೇ ವಿಶೇಷ ಮನವಿ

ಚೆನ್ನೈನಲ್ಲೇ ಇಂದು ಸಿಎಸ್‌ಕೆ ಹಾಗೂ ಲಖನೌ ತಂಡ ಮುಖಾಮುಖಿಯಾಗುತ್ತಿದೆ. ವಿಜಯ್ ಸಿಎಂ ಆಗಿ ಸಂಭ್ರಮಾಚರಣೆ ಜೋರಾಗುತ್ತಿದ್ದಂತೆ ಸಿಎಸ್‌ಕೆ ತಂಡ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದೆ. ಇಂದು ಚೆನ್ನೈನಲ್ಲಿ ಪಂದ್ಯ ವೀಕ್ಷಣೆಗೆ ಆಗಮಿಸುವ ಅಭಿಮಾನಿಗಳು ಕ್ರೀಡಾಸ್ಪೂರ್ತಿಯಿಂದ ಬನ್ನಿ, ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಹಿಡಿದು ಬರಬೇಡಿ ಎಂದು ಮನವಿ ಮಾಡಿದೆ.

35
ಸಿಎಸ್‌ಕೆ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದೇನು?

ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳಲ್ಲಿ ವಿಶೇಷ ಮನವಿ. ಪ್ರೀತಿಯಿಂದ ಬಂದು ಕ್ರಿಕೆಟ್ ಅಸ್ವಾಸಿದಿಸಿ, ಕ್ರೀಡಾ ಸ್ಪೂರ್ತಿಯೊಂದಿಗೆ ನಮ್ಮ ಜೊತೆ ಕ್ರಿಕೆಟ್ ವೀಕ್ಷಿಸಿ. ಇದೇ ವೇಳೆ ನಮ್ಮ ಕಳಕಳಿಯ ವಿನಂತಿ ಎನಂದರೆ ಅಭಿಮಾನಿಗಳು ಯಾವುದೇ ಕಾರಣಕ್ಕೆ ಯಾವುದೇ ಪಕ್ಷದ ಅಥವಾ ರಾಜಕೀಯ ನಾಯಕರ ಬೋರ್ಡಿಂಗ್, ಬಂಟಿಂಗ್, ಬ್ಯಾನರ್, ಫ್ಲ್ಯಾಗ್‌ಗಳನ್ನು ಕ್ರೀಡಾಂಗಣಕ್ಕೆ ತರಬೇಡಿ. ಕ್ರೀಡಾಂಗಣದಲ್ಲಿ ಸಿಎಸ್‌ಕೆಯ ಹಳದಿ ಪ್ರೀತಿ ತುಂಬಿರಲಿ ಎಂದು ಮನವಿ ಮಾಡಿದೆ.

45
ಚರ್ಚೆಗೆ ಕಾರಣವಾದ ಮನವಿ

ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಚೆನ್ನೈನಲ್ಲಿ ಪಂದ್ಯ ಆರಂಭಗೊಳ್ಳುತ್ತಿದೆ. ಹೀಗಾಗಿ ಚೆನ್ನೈ ಫ್ರಾಂಚೈಸಿ ಅಭಿಮಾನಿಗಳಿಗೆ ಈ ಮನವಿ ಮಾಡಿದೆ. ಕ್ರಿಕೆಟ್ ಪಂದ್ಯದಲ್ಲಿ ರಾಜಕೀಯ ಮೇಲಾಟಗಳು ಬೇಡ, ಕ್ರೀಡಾ ಸ್ಪೂರ್ತಿಯಿಂದ ಪಂದ್ಯ ಆನಂದಿಸೋಣ ಎಂಬ ಮನವಿ ಇದೀಗ ಚರ್ಚೆಗೆ ಕಾರಣವಾಗಿದೆ.

55
ಘೋಷಣೆ ಕೂಗಿದರೆ ಏನು ಮಾಡುತ್ತೀರಿ?

ಸಿಎಸ್‌ಕೆ ತಂಡದ ಈ ಮನವಿಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವರು ಸರಿ ಎಂದರೆ, ಮತ್ತೆ ಕೆಲವರು ಅಭಿಮಾನಿಗಳು ಹೇಗೆ ಇರಬೇಕು ಎಂದು ತಂಡ ಸೂಚಿಸುವುದು ಬೇಡ. ಪಂದ್ಯದ ನಡುವೆ ಅಭಿಮಾನಿಗಳು ಘೋಷಣೆ ಕೂಗಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಘೋಷಣೆ ಕೂಗಿದರೆ ಏನು ಮಾಡುತ್ತೀರಿ?

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories