ಕ್ರಿಕೆಟ್ ಸೇರಿ ಕ್ರೀಡಾಪಟುಗಳಿಗೆ ಹೆಚ್ಚಾಗಿ ಹೆಣ್ಣುಮಕ್ಕಳೇ ಹುಟ್ಟೋದು ಯಾಕೆ? ಹಿಂದಿದೆ ವೈಜ್ಞಾನಿಕ ಕಾರಣ

Chethan Kumar   | CMS
Published : Sep 01, 2026, 06:21 PM IST

ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರಪು, ಕ್ರೀಡಾಪಟುಗಳಿಗೆ ಹೆಣ್ಣು ಮಕ್ಕಳಿದ್ದಾರೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆಯಾ? ಈ ಕುರಿತು ಕುತೂಹಲಕ್ಕೆ ಇಲ್ಲಿದೆ ಉತ್ತರ

PREV
15
ಕ್ರೀಡಾಪಟುಗಳಿಗೆ ಹೆಚ್ಚಾಗಿ ಹೆಣ್ಣು ಮಕ್ಕಳೇ ಜನಿಸುತ್ತಾರೆ ಯಾಕೆ

ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರಿಗೆ ಹೆಣ್ಣು ಮಕ್ಕಳಿದ್ದಾರೆ. ಕ್ರಿಕೆಟಿಗರು, ಕ್ರೀಡಾಪಟುಗಳಿಗೆ ಹೆಚ್ಚಾಗಿ ಹೆಣ್ಣು ಮಕ್ಕಳೇ ಹುಟ್ಟುವುದೇಕೆ ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ. ಸಚಿನ್‌ಗೆ ಸಾರಾ, ಧೋನಿಗೆ ಝೀವಾ, ಕೊಹ್ಲಿಗೆ ವಮಿಕಾ ಮತ್ತು ರೋಹಿತ್‌ಗೆ ಸಮೈರಾ ಮಗಳಿದ್ದಾರೆ. ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಸೇರಿದಂತೆ ಇತರೆ ಕೆಲವು ಆಟಗಾರರಿಗೂ ಹೆಣ್ಣುಮಕ್ಕಳೇ ಇದ್ದಾರೆ. ಇದು ಕೇವಲ ಭಾರತೀಯ ಕ್ರಿಕೆಟಿಗರಿಗೆ ಮಾತ್ರ ಸೀಮಿತವಲ್ಲ. ಫುಟ್‌ಬಾಲ್, ವಾಲಿಬಾಲ್ ಆಟಗಾರರು ಮತ್ತು ಅಥ್ಲೀಟ್‌ಗಳಿಗೂ ಹೆಚ್ಚಾಗಿ ಹೆಣ್ಣುಮಕ್ಕಳೇ ಜನಿಸುತ್ತಾರೆ.

25
ಲಿಂಗ ನಿರ್ಧರಾ ಹೇಗೆ?

ಒಂದು ಮಗು ತಾಯಿಯ ಗರ್ಭದಲ್ಲಿ ಬೆಳೆದರೂ, ಅದರ ಲಿಂಗವನ್ನು ನಿರ್ಧರಿಸುವುದು ತಂದೆ. ತಂದೆ ವೀರ್ಯದಲ್ಲಿರುವ ಕ್ರೋಮೋಸೋಮ್ ಮಗುವಿನ ಲಿಂಗ ನಿರ್ಧರಿಸುತ್ತದೆ. ಮಹಿಳೆಯರಲ್ಲಿ 'XX' ಕ್ರೋಮೋಸೋಮ್‌ಗಳಿದ್ದರೆ, ಪುರುಷರ ವೀರ್ಯದಲ್ಲಿ 'X' ಮತ್ತು 'Y' (XY) ಎಂಬ ಎರಡು ಬಗೆಯ ಕ್ರೋಮೋಸೋಮ್‌ಗಳಿರುತ್ತವೆ. ಗರ್ಭಧಾರಣೆ ವೇಳೆ, ತಾಯಿಯ 'X' ಕ್ರೋಮೋಸೋಮ್ ಜೊತೆ ತಂದೆಯ 'X' ಕ್ರೋಮೋಸೋಮ್ ಸೇರಿದರೆ ಹೆಣ್ಣು ಮಗು (XX) ಜನಿಸುತ್ತದೆ. ಅದೇ ರೀತಿ, ತಾಯಿಯ 'X' ಜೊತೆ ತಂದೆಯ 'Y' ಕ್ರೋಮೋಸೋಮ್ ಸೇರಿದರೆ ಗಂಡು ಮಗು (XY) ಜನಿಸುತ್ತದೆ.

35
ಕ್ರೋಮೋಸೋಮ್‌ ಸಾಮರ್ಥ್ಯ

ಪುರುಷರ X ಮತ್ತು Y ಕ್ರೋಮೋಸೋಮ್‌ಗಳು ಒಂದೇ ರೀತಿ ಇರುವುದಿಲ್ಲ. ಅವುಗಳ ಗಾತ್ರ, ವೇಗ ಮತ್ತು ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯದಲ್ಲಿ ವ್ಯತ್ಯಾಸಗಳಿವೆ. Y ಕ್ರೋಮೋಸೋಮ್ (ಗಂಡು ಮಗುವಿಗೆ): ಇವು ಗಾತ್ರದಲ್ಲಿ ಚಿಕ್ಕದಾಗಿದ್ದು, ವೇಗವಾಗಿ ಚಲಿಸುತ್ತವೆ. ಆದರೆ, ಇವು ಬಹಳ ದುರ್ಬಲ. ಪ್ರತಿಕೂಲ ಪರಿಸ್ಥಿತಿ ಅಥವಾ ಅಧಿಕ ತಾಪಮಾನವನ್ನು ಹೆಚ್ಚು ಕಾಲ ತಡೆದುಕೊಳ್ಳುವುದಿಲ್ಲ. ಇವುಗಳ ಜೀವಿತಾವಧಿ ತುಂಬಾ ಕಡಿಮೆ. X ಕ್ರೋಮೋಸೋಮ್ (ಹೆಣ್ಣು ಮಗುವಿಗೆ): ಇವು ಸ್ವಲ್ಪ ದೊಡ್ಡದಾಗಿದ್ದು, ನಿಧಾನವಾಗಿ ಚಲಿಸುತ್ತವೆ. ಆದರೆ, ಇವು ಹೆಚ್ಚು ಶಕ್ತಿಶಾಲಿ. ಯಾವುದೇ ಕಠಿಣ ಪರಿಸ್ಥಿತಿಯನ್ನು ಸಹಿಸಿಕೊಂಡು ಹೆಚ್ಚು ಕಾಲ ಬದುಕುವ ಶಕ್ತಿ ಇವುಗಳಿಗಿದೆ.

45
ವೈಜ್ಞಾನಿಕ ಕಾರಣ ಇಲ್ಲಿದೆ

ಕ್ರಿಕೆಟಿಗರು ಮತ್ತು ಇತರ ಕ್ರೀಡಾಪಟುಗಳು ತಮ್ಮ ಫಿಟ್‌ನೆಸ್‌ಗಾಗಿ ನಿರಂತರ ಕಠಿಣ ತಾಲೀಮು ನಡೆಸುತ್ತಾರೆ. ಮೈದಾನದಲ್ಲಿ ಗಂಟೆಗಟ್ಟಲೆ ವ್ಯಾಯಾಮ, ಕಾರ್ಡಿಯೋ, ಭಾರ ಎತ್ತುವಂತಹ ತೀವ್ರ ದೈಹಿಕ ಶ್ರಮದಿಂದಾಗಿ ಅವರ ದೇಹದ ಉಷ್ಣತೆ ಹೆಚ್ಚಾಗುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಪುರುಷರು ಕಠಿಣ ವ್ಯಾಯಾಮದಲ್ಲಿ ತೊಡಗಿದಾಗ, ಅವರ ದುರ್ಬಲ 'Y' ಕ್ರೋಮೋಸೋಮ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಧಿಕ ತಾಪಮಾನ ಮತ್ತು ಆಯಾಸದಿಂದಾಗಿ Y ಕ್ರೋಮೋಸೋಮ್‌ಗಳು ಬೇಗನೆ ಸಾಯುತ್ತವೆ. ಆದರೆ, ಬಲಿಷ್ಠ 'X' ಕ್ರೋಮೋಸೋಮ್‌ಗಳು ಈ ಪ್ರತಿಕೂಲ ಪರಿಸ್ಥಿತಿ ಮತ್ತು ಒತ್ತಡವನ್ನು ಸಹಿಸಿಕೊಂಡು ಹೆಚ್ಚು ಕಾಲ ಜೀವಂತವಾಗಿರುತ್ತವೆ. ಇದರಿಂದಾಗಿ, ಗರ್ಭಧಾರಣೆ ವೇಳೆ ತಂದೆಯ 'X' ಕ್ರೋಮೋಸೋಮ್, ತಾಯಿಯ 'X' ಕ್ರೋಮೋಸೋಮ್ ಜೊತೆ ಸೇರುವ ಸಾಧ್ಯತೆ ಹೆಚ್ಚಾಗಿ, ಹೆಣ್ಣುಮಕ್ಕಳು ಜನಿಸುತ್ತಾರೆ. ಸೇನಾ ಸಿಬ್ಬಂದಿ ಮತ್ತು ಅಥ್ಲೀಟ್‌ಗಳಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತದೆ.

55
ಜೀವನ ಶೈಲಿಯಲ್ಲಿ ಇದೆ ಕೊಡುಗೆ

ಮಗು ಗಂಡೋ, ಹೆಣ್ಣೋ ಎಂಬುದು ಪ್ರಕೃತಿಯ ಒಂದು ಅದ್ಭುತ. ಆದರೆ, ತಂದೆಯ ಜೀವನಶೈಲಿ, ದೈಹಿಕ ಶ್ರಮ, ವ್ಯಾಯಾಮ ಮತ್ತು ದೇಹದ ಉಷ್ಣತೆಯಂತಹ ಅಂಶಗಳು ಮಗುವಿನ ಲಿಂಗ ನಿರ್ಧರಿಸುವಲ್ಲಿ ಪರೋಕ್ಷವಾಗಿ ಪ್ರಮುಖ ಪಾತ್ರವಹಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಹಾಗಾಗಿ, ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಕ್ರೀಡಾ ದಿಗ್ಗಜರಿಗೆ ಹೆಣ್ಣುಮಕ್ಕಳು ಹುಟ್ಟಲು ಅವರ ನಿರಂತರ ವ್ಯಾಯಾಮ ಮತ್ತು ಕಠಿಣ ದೈಹಿಕ ಶ್ರಮವೇ ಪ್ರಮುಖ ವೈಜ್ಞಾನಿಕ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಜಿಮ್‌ನಲ್ಲಿ ಹೆಚ್ಚು ಶ್ರಮಪಡುವವರಿಗೂ ಮತ್ತು ಸೇನಾ ಸಿಬ್ಬಂದಿಗಳಿಗೂ ಹೆಚ್ಚಾಗಿ ಹೆಣ್ಣುಮಕ್ಕಳೇ ಹುಟ್ಟಲು ಇದೇ ಕಾರಣವಾಗಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories