ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಹೋಲಿಕೆ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್ ಟೀಕೆಗಳ ಬೆನ್ನಲ್ಲೇ ಅವರು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟ್ ಜಗತ್ತಿನ ಇಬ್ಬರು ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ನಡುವಿನ ಹೋಲಿಕೆ ಮತ್ತೆ ಭಾರೀ ಚರ್ಚೆಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ದಿಗ್ಗಜ ಬ್ಯಾಟರ್ ಎಬಿ ಡಿವಿಲಿಯರ್ಸ್ ನೀಡಿದ್ದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಟೀಕೆಗಳ ಬೆನ್ನಲ್ಲೇ ಅವರು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಡಿವಿಲಿಯರ್ಸ್, ವಿದೇಶಿ ನೆಲದ ಬೌನ್ಸಿ ಹಾಗೂ ಸೀಮಿಂಗ್ ಪರಿಸ್ಥಿತಿಗಳಲ್ಲಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಚಿನ್ ಭಾರತದಿಂದ ವಿದೇಶಿ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗುವ ದಾರಿಯನ್ನು ತೋರಿಸಿದ ಮೊದಲ ಬ್ಯಾಟರ್ ಆಗಿದ್ದರೆ, ಕೊಹ್ಲಿ ಅದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ದರು ಎಂದು ಅವರು ಹೇಳಿದ್ದರು.
26
ಡಿವಿಲಿಯರ್ಸ್ ಹೇಳಿಕೆಗೆ ಅಭಿಮಾನಿಗಳ ಆಕ್ರೋಶ
ಸಚಿನ್ ಅವರಿಗಿಂತ ಕೊಹ್ಲಿಯನ್ನು ಮೇಲಿಟ್ಟ ರೀತಿಯಲ್ಲಿ ಡಿವಿಲಿಯರ್ಸ್ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅವರ ಅಭಿಪ್ರಾಯವನ್ನು ಪ್ರಶ್ನಿಸಿ ಟೀಕಿಸಿದರು. ಈ ಬೆನ್ನಲ್ಲೇ ಡಿವಿಲಿಯರ್ಸ್ ಮತ್ತೊಮ್ಮೆ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರಾಟ್ ಮತ್ತು ಸಚಿನ್ ಕುರಿತ ಹೇಳಿಕೆಯಲ್ಲಿ ಸ್ವಲ್ಪ ಗೊಂದಲವಾಗಿದೆ. ನೆನಪಿಡಿ, ಅದು ನನ್ನ ಅಭಿಪ್ರಾಯ. ನಾನು ಯಾರನ್ನೂ ಕೆಳಗಿಳಿಸುತ್ತಿಲ್ಲ ಎಂಬರ್ಥದಲ್ಲಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.
36
ಸಚಿನ್ ಬಗ್ಗೆ ಡಿವಿಲಿಯರ್ಸ್ ಹೇಳಿದ್ದೇನು?
ತಮ್ಮ ಸ್ಪಷ್ಟನೆಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಕಡಿಮೆ ಮಾಡುವುದು ತಮ್ಮ ಉದ್ದೇಶವಲ್ಲ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಸಚಿನ್ ಅವರು ಭಾರತದ ಯುವ ಕ್ರಿಕೆಟಿಗರಿಗೆ ವಿಶ್ವದ ವಿವಿಧ ಪರಿಸ್ಥಿತಿಗಳಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವುದು ಹೇಗೆ ಎಂಬುದನ್ನು ತೋರಿಸಿದ ಮೊದಲಿಗರಲ್ಲಿ ಒಬ್ಬರು. ಅವರಿಂದ ಸಾಕಷ್ಟು ಮಂದಿ ಪ್ರೇರಣೆ ಪಡೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅದೇ ವೇಳೆ ವಿರಾಟ್ ಕೊಹ್ಲಿ ಭಾರತೀಯ ಬ್ಯಾಟಿಂಗ್‌ಗೆ ಮತ್ತೊಂದು ಆಯಾಮವನ್ನು ನೀಡಿದರು. ವಿಶೇಷವಾಗಿ ಶಾರ್ಟ್ ಬಾಲ್‌ಗಳನ್ನು ಎದುರಿಸಲು ತಮ್ಮದೇ ಆದ ಮಾರ್ಗ ಕಂಡುಕೊಂಡ ಕೊಹ್ಲಿ, ವಿದೇಶಿ ಪರಿಸ್ಥಿತಿಗಳಲ್ಲಿ ಯಶಸ್ಸು ಸಾಧಿಸಲು ಬೇಕಾದ ಆಲ್‌ರೌಂಡ್ ಬ್ಯಾಟಿಂಗ್ ಶೈಲಿಯನ್ನು ತೋರಿಸಿದರು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
46
ಕೊಹ್ಲಿ ದಾಖಲೆ ಸಚಿನ್‌ಗಿಂತ ಉತ್ತಮವಲ್ಲ
ತಮ್ಮ ಹೇಳಿಕೆಯನ್ನು ಇನ್ನಷ್ಟು ಸ್ಪಷ್ಟಪಡಿಸಿರುವ ಡಿವಿಲಿಯರ್ಸ್, ವಿದೇಶಿ ನೆಲದಲ್ಲಿ ವಿರಾಟ್ ಕೊಹ್ಲಿಯ ದಾಖಲೆ ಸಚಿನ್ ಅವರಷ್ಟು ಉತ್ತಮವಾಗಿಲ್ಲ ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ಕೊಹ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು ಎಂದು ಹೇಳಿದ್ದಾರೆ. ಆದರೆ ಕ್ರಿಕೆಟ್ ಅನ್ನು ಕೇವಲ ಅಂಕಿ-ಅಂಶಗಳ ಮೂಲಕವೇ ಅಳೆಯಲು ಸಾಧ್ಯವಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ತಿಳಿಸಿದ್ದಾರೆ. ಕೊಹ್ಲಿಯ ಫಿಟ್‌ನೆಸ್, ನಾಯಕತ್ವ, ತಂಡದ ಆಟಗಾರರಿಗೆ ಮಾದರಿಯಾಗಿರುವ ಗುಣ ಹಾಗೂ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಲು ಹೊಂದಿಕೊಂಡ ಆಟದ ಶೈಲಿಯನ್ನು ಅವರು ಮೆಚ್ಚಿಕೊಂಡಿದ್ದಾರೆ.
56
ಸಚಿನ್ ಕಲಿಸಿದ್ದನ್ನು ಕೊಹ್ಲಿ ಮುಂದಕ್ಕೆ ಕೊಂಡೊಯ್ದರು
ಡಿವಿಲಿಯರ್ಸ್ ಪ್ರಕಾರ, ಸಚಿನ್ ಆರಂಭಿಸಿದ ದಾರಿಯನ್ನು ಕೊಹ್ಲಿ ಮತ್ತಷ್ಟು ಮುಂದಕ್ಕೆ ಕೊಂಡೊಯ್ದಿದ್ದಾರೆ. ಅವರಿಂದ ಪ್ರೇರಣೆ ಪಡೆದ ಹೊಸ ತಲೆಮಾರಿನ ಆಟಗಾರರು ಇದೀಗ ವಿದೇಶಿ ಪರಿಸ್ಥಿತಿಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಚಿನ್ ಅಥವಾ ಕೊಹ್ಲಿ ಯಾರು ಶ್ರೇಷ್ಠ ಎಂಬ ಅಂತಿಮ ತೀರ್ಪು ನೀಡುವುದು ತಮ್ಮ ಉದ್ದೇಶವಲ್ಲ. ಇಬ್ಬರೂ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆಯನ್ನು ತಮ್ಮದೇ ದೃಷ್ಟಿಕೋನದಿಂದ ವಿವರಿಸಿದ್ದೇನೆ ಎಂಬುದು ಡಿವಿಲಿಯರ್ಸ್ ಸ್ಪಷ್ಟನೆಯ ಸಾರವಾಗಿದೆ.
66
ಸಚಿನ್-ಕೊಹ್ಲಿ ಹೋಲಿಕೆ
ಸಚಿನ್-ಕೊಹ್ಲಿ ಹೋಲಿಕೆ ಯಾವಾಗಲೂ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕುತ್ತದೆ. ಈ ಬಾರಿ ಡಿವಿಲಿಯರ್ಸ್ ಹೇಳಿಕೆಯೂ ಅದೇ ಚರ್ಚೆಗೆ ಮತ್ತಷ್ಟು ಕಿಡಿ ಹಚ್ಚಿದ್ದು, ಇದೀಗ ಅವರ ಸ್ಪಷ್ಟನೆಯ ಬಳಿಕ ವಿವಾದ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.